For Quick Alerts
  ALLOW NOTIFICATIONS  
  For Daily Alerts

  ಶಂಕ್ರಣ್ಣ ಜನ್ಮದಿನ: ಶಂಕರ್‌ನಾಗ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬಲ್ಲಿರಾ?

  |

  ಇಂದು ( ನವೆಂಬರ್ 9 ) ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟ ಹಾಗೂ ನಿರ್ದೇಶಕ ಶಂಕರ್‌ನಾಗ್ ಅವರ ಜನ್ಮದಿನ. ಮರಾಠಿ, ಕನ್ನಡ ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಕೆಲಸ ನಿರ್ವಹಿಸಿರುವ ಅನುಭವ ಹೊಂದಿದ್ದ ಶಂಕರ್ ನಾಗ್ 1978ರಲ್ಲಿ ಚಿತ್ರರಂಗ ಪ್ರವೇಶಿಸಿ ಸತತ ಹನ್ನೆರಡು ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ್ದರು. ಕಡಿಮೆ ಸಮಯದಲ್ಲೇ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದ ಶಂಕರ್ ನಾಗ್ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವಂತಹ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

  Recommended Video

  Shankar Nag Birthday | ಶಂಕ್ರಣ್ಣ ಇದ್ದಿದ್ರೆ ಪಾದ ಮುಟ್ಟಿ ನಮಸ್ಕಾರ ಮಾಡ್ತಿದ್ವಿ...*Sandalwood

  ಇನ್ನು ಕ್ರಿಯೇಟಿವಿಟಿ ಎಂದರೆ ಶಂಕರ್ ನಾಗ್ ಎನ್ನುವ ಮಟ್ಟಕ್ಕೆ ಹೆಸರನ್ನು ಮಾಡಿದ್ದ ಶಂಕರ್ ನಾಗ್ ಬಹುಬೇಗನೆ ಇಹಲೋಕ ತ್ಯಜಿಸಿದರು. 1990ರ ಸೆಪ್ಟೆಂಬರ್ 30ರಂದು ದಾವಣಗೆರೆ ಹೊರವಲಯದಲ್ಲಿ ಶಂಕರ್ ನಾಗ್ ಕಾರು ಅಪಘಾತಕ್ಕೀಡಾಗಿ ಅಭಿಮಾನಿಗಳ ನೆಚ್ಚಿನ ಆಟೋ ರಾಜ ನಿಧನ ಹೊಂದಿದ್ದರು. ಹೀಗೆ ಚಿಕ್ಕ ವಯಸ್ಸಲ್ಲೇ ನಿಧನ ಹೊಂದಿದರೂ ಸಹ ಶಂಕರ್ ನಾಗ್ ಅವರ ಅಭಿಮಾನ ಇಂದಿಗೂ ಮಾಸಿಲ್ಲ. ಈಗಲೂ ಅವರ ಸಿನಿಮಾಗಳು ದೂರದರ್ಶನದಲ್ಲಿ ಪ್ರಸಾರವಾದಾಗ ವೀಕ್ಷಿಸುವವರಿದ್ದಾರೆ, ಅವರ ಹಾಡುಗಳನ್ನು ಕೇಳುವವರಿದ್ದಾರೆ, ಆಟೋ ಚಾಲಕರಂತೂ ಶಂಕರ್ ನಾಗ್ ಮೇಲಿಟ್ಟಿರುವ ಅಭಿಮಾನವನ್ನು ಬಿಡಿಸಿ ಹೇಳಬೇಕಿಲ್ಲ. ಇಷ್ಟೆಲ್ಲಾ ಪ್ರೀತಿಯನ್ನು ಗಳಿಸಿರುವ ಶಂಕರ್‌ನಾಗ್ ಬಗ್ಗೆ ನೀವೆಷ್ಟು ಮಾಹಿತಿ ತಿಳಿದುಕೊಂಡಿದ್ದೀರ ಎಂಬುದನ್ನು ಈ ಕೆಳಕಂಡ ಚಿಕ್ಕ ರಸಪ್ರಶ್ನೆ ಮೂಲಕ ತಿಳಿಯೋಣ..

  English summary
  Can you answer these 10 questions related to Shankar Nag? Take a look
  Wednesday, November 9, 2022, 18:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X