For Quick Alerts
  ALLOW NOTIFICATIONS  
  For Daily Alerts

  'ಕಸ್ತೂರಿ ಮಹಲ್' ಚಿತ್ರಕ್ಕೆ ರಚಿತಾ ರಾಮ್ ಬದಲು ಮತ್ತೊಬ್ಬ ಸ್ಟಾರ್ ನಟಿ!

  |

  ಕನ್ನಡದ ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50 ಚಿತ್ರ ಇತ್ತೀಚಿಗಷ್ಟೆ ಸೆಟ್ಟೇರಿತ್ತು. ಈ ಚಿತ್ರಕ್ಕೆ ಆರಂಭದಲ್ಲಿ ಕಸ್ತೂರಿ ನಿವಾಸ ಎಂದು ಹೆಸರಿಡಲಾಗಿತ್ತು. ಬಳಿಕ, ಕಸ್ತೂರಿ ನಿವಾಸ ಬೇಡ ಎಂದು ನಿರ್ಧರಿಸಿ ಕಸ್ತೂರಿ ಮಹಲ್ ಎಂದು ಮರುನಾಮಕರಣ ಮಾಡಲಾಯಿತು.

  ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದರು. ರಚ್ಚು ಜೊತೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಹಾಗೂ ಸ್ಕಂದ ಅಶೋಕ್ ಪ್ರಮುಖ ಪಾತ್ರಗಳಲ್ಲಿ ಇದ್ದರು. ಆದ್ರೆ, ಶೂಟಿಂಗ್ ಆರಂಭಕ್ಕೂ ಮುಂಚೆಯೇ ರಚಿತಾ ರಾಮ್ ಈ ಚಿತ್ರದಿಂದ ಹೊರಬಂದರು. ಇದೀಗ, ರಚ್ಚು ಜಾಗಕ್ಕೆ ಮತ್ತೊಬ್ಬ ಸ್ಟಾರ್ ನಟಿ ಪ್ರವೇಶವಾಗಿದೆ. ಮುಂದೆ ಓದಿ....

  'ಕಸ್ತೂರಿ ಮಹಲ್' ಸಿನಿಮಾದಿಂದ ಹೊರ ನಡೆದ ರಚಿತಾ: ಕಾರಣವೇನು?'ಕಸ್ತೂರಿ ಮಹಲ್' ಸಿನಿಮಾದಿಂದ ಹೊರ ನಡೆದ ರಚಿತಾ: ಕಾರಣವೇನು?

  ರಚ್ಚು ಹೊರಹೋಗಿದ್ದು ಏಕೆ?

  ರಚ್ಚು ಹೊರಹೋಗಿದ್ದು ಏಕೆ?

  ಬಹಳ ಲವಲವಿಕೆಯಿಂದ ಕಸ್ತೂರಿ ಮಹಲ್ ಚಿತ್ರವನ್ನು ಒಪ್ಪಿಕೊಂಡಿದ್ದ ರಚಿತಾ ರಾಮ್, ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಇನ್ನೇನೂ ಚಿತ್ರೀಕರಣಕ್ಕೆ ಹೋಗಬೇಕು ಎನ್ನುವ ಸಮಯದಲ್ಲಿ ನಟಿ ಹಿಂದೆ ಸರಿದ್ದರು. ಇದು ಸಹಜವಾಗಿ ಅನುಮಾನ ಮೂಡಿಸಿತ್ತು. ಆದ್ರೆ, ರಚ್ಚು ಈ ಚಿತ್ರದಿಂದ ಹೊರಬರಲು ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎನ್ನುವುದೇ ಪ್ರಮುಖ ಕಾರಣ ಎನ್ನಲಾಗಿದೆ.

  ಐದು ದಶಕದ ಬಳಿಕ ಮತ್ತೆ 'ಕಸ್ತೂರಿ ನಿವಾಸ': ರಚಿತಾ ರಾಮ್ ನಾಯಕಿಐದು ದಶಕದ ಬಳಿಕ ಮತ್ತೆ 'ಕಸ್ತೂರಿ ನಿವಾಸ': ರಚಿತಾ ರಾಮ್ ನಾಯಕಿ

  ಅಕ್ಟೋಬರ್ 5 ರಿಂದ ಚಿತ್ರೀಕರಣ!

  ಅಕ್ಟೋಬರ್ 5 ರಿಂದ ಚಿತ್ರೀಕರಣ!

  ಸುಪ್ರಬಾತ, ಅಮೃತವರ್ಷಿಣಿ, ಲಾಲಿ, ನಿಶ್ಯಬ್ದ, ಪ್ರೇಮೋತ್ಸವ, ಹಾಲಿವುಡ್, ಅಭಿ, ಇನ್ಸ್‌ ಪೆಕ್ಟರ್ ವಿಕ್ರಂ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ದಿನೇಶ್ ಬಾಬು ಅವರಿಗೆ ಕಸ್ತೂರಿ ಮಹಲ್ 50 ಚಿತ್ರ ಎನ್ನುವುದು ವಿಶೇಷ. ಈ ಚಿತ್ರ ಅಕ್ಟೋಬರ್ 5 ರಿಂದ ಚಿತ್ರೀಕರಣ ಆರಂಭಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  SP Balasubramanyam : ದೇಶ ಕಂಡ ಅದ್ಬುತ ಗಾಯಕ ಇನ್ನಿಲ್ಲ | Filmibeat Kannada
  ರಚಿತಾ ಕೈಯಲ್ಲಿರುವ ಚಿತ್ರಗಳು

  ರಚಿತಾ ಕೈಯಲ್ಲಿರುವ ಚಿತ್ರಗಳು

  ಕಸ್ತೂರಿ ಮಹಲ್ ಚಿತ್ರ ಬಿಟ್ಟು ಕನ್ನಡದ ಏಪ್ರಿಲ್, ಎಕ್ ಲವ್ ಯಾ, ಲಿಲ್ಲಿ, ವೀರಂ, ಡಾಲಿ, 100 ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ತೆಲುಗಿನ 'ಸೂಪರ್ ಮಚ್ಚಿ' ಚಿತ್ರದಲ್ಲೂ ನಟಿಸುತ್ತಿದ್ದಾರೆ.

  English summary
  Kannada actress Shanvi srivastav replaces Rachita Ram in Dinesh Baboo's 50th directorial Kasturi Mahal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X