For Quick Alerts
  ALLOW NOTIFICATIONS  
  For Daily Alerts

  'ಕಸ್ತೂರಿ ಮಹಲ್' ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್

  |

  ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ 50ನೇ ಚಿತ್ರ 'ಕಸ್ತೂರಿ ಮಹಲ್‌'ನಲ್ಲಿ ಶಾನ್ವಿ ಶ್ರೀವಸ್ತವ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಗೊತ್ತಿರುವ ಸಂಗತಿ.

  ಇದೀಗ, ಕಸ್ತೂರಿ ಮಹಲ್ ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಯುವರಾಣಿ ಗೆಟಪ್‌ನಲ್ಲಿ ಶಾನ್ವಿ ಮಿಂಚಿದ್ದು, ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೊಂದು ಹಾರರ್ ಥ್ರಿಲ್ಲಿಂಗ್ ಕಥೆಯಾಗಿದ್ದು, ಶಾನ್ವಿ ಸಹ ಹೆಚ್ಚು ನಿರೀಕ್ಷೆ ಹೊಂದಿದ್ದಾರೆ.

  'ಕಸ್ತೂರಿ ಮಹಲ್' ಚಿತ್ರಕ್ಕೆ ರಚಿತಾ ರಾಮ್ ಬದಲು ಮತ್ತೊಬ್ಬ ಸ್ಟಾರ್ ನಟಿ!'ಕಸ್ತೂರಿ ಮಹಲ್' ಚಿತ್ರಕ್ಕೆ ರಚಿತಾ ರಾಮ್ ಬದಲು ಮತ್ತೊಬ್ಬ ಸ್ಟಾರ್ ನಟಿ!

  ಈ ಕುರಿತು ಟ್ವೀಟ್ ಮಾಡಿದ್ದ ಶಾನ್ವಿ ''ನನ್ನ ಮುಂದಿನ ಕನ್ನಡ ಚಿತ್ರ ಪ್ರಖ್ಯಾತ ನಿರ್ದೇಶಕರಾದ ದಿನೇಶ್ ಬಾಬು ಸರ್ ಅವರ ಕಸ್ತೂರಿ ಮಹಲ್ ಎಂದು ನಿಮ್ಮೆಲ್ಲರಿಗೂ ತಿಳಿಸಲು ನನಗೆ ಸಂತೋಷವಾಗುತ್ತದೆ. ನನ್ನ ಕನ್ನಡದ ಮೊದಲ ಚಿತ್ರದ ನಂತರ ಮತ್ತೊಮ್ಮೆ ಹಾರರ್ ಚಿತ್ರ ಮಾಡುತ್ತಿದ್ದು, ಇನ್ನೂ ಅನೇಕ ಒಳ್ಳೆಯ ಅವಕಾಶದ ನಿರೀಕ್ಷೆಯಲ್ಲಿದ್ದೇನೆ. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹಕ್ಕೆ ಚಿರಋಣಿ'' ಎಂದು ಸಂತಸ ಹಂಚಿಕೊಂಡಿದ್ದರು.

  ಅಂದ್ಹಾಗೆ, ಕಸ್ತೂರಿ ಮಹಲ್ ಚಿತ್ರಕ್ಕೆ ಇದಕ್ಕೂ ಮೊದಲು ರಚಿತಾ ರಾಮ್ ಆಯ್ಕೆಯಾಗಿದ್ದರು. ಚಿತ್ರದ ಮುಹೂರ್ತ ಸಮಾರಂಭದಲ್ಲೂ ಭಾಗಿಯಾಗಿದ್ದ ನಟಿ ನಂತರ ಚಿತ್ರದಿಂದ ಹಿಂದೆ ಸರಿದರು. ಆ ಜಾಗಕ್ಕೆ ಶಾನ್ವಿ ಎಂಟ್ರಿಯಾಗಿದ್ದು, ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada

  ಅಕ್ಟೋಬರ್ 5 ರಿಂದ ಕಸ್ತೂರಿ ಮಹಲ್ ಸಿನಿಮಾ ಚಿತ್ರೀಕರಣ ಆರಂಭಿಸಲಿದ್ದು, ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಹಾಗೂ ಸ್ಕಂದ ಅಶೋಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Dinesh Baboo's 50th Directional, a horror thriller Kasthuri Mahal starring Shanvi Srivastava first look poster is out now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X