For Quick Alerts
  ALLOW NOTIFICATIONS  
  For Daily Alerts

  ಚಂದನವನದಲ್ಲಿ ಭದ್ರವಾಗಿ ನೆಲೆಯೂರಿದ ಶಾನ್ವಿ ಶ್ರೀವಾಸ್ತವ

  By Pavithra
  |

  ಶಾನ್ವಿ ಶ್ರೀವಾಸ್ತವ.. 'ಚಂದ್ರಲೇಖ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗವನ್ನು ಪ್ರವೇಶಿಸಿದ ನಾಯಕ ನಟಿ. ಮುಂಬೈ ಬೆಡಗಿ ಆದರೂ ಕೂಡ ಶಾನ್ವಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಕನ್ನಡ ಸಿನಿಮಾದಲ್ಲಿ. ಬ್ಯಾಕ್ ಟು ಬ್ಯಾಕ್ ಸ್ಟಾರ್ ಕಲಾವಿದರ ಜೊತೆ ಕಾಣಿಸಿಕೊಂಡ ಶಾನ್ವಿಗೆ ಬೇಡಿಕೆ ಹೆಚ್ಚಾಗಿದೆ.

  ಚಿರಂಜೀವಿ ಸರ್ಜಾ, ಯಶ್, ಶ್ರೀ ಮುರಳಿ, ದರ್ಶನ್ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಟಿ ಶಾನ್ವಿ ಕನ್ನಡದಲ್ಲಿ ಬೇಡಿಕೆ ನಟಿಯಾಗಿ ಉಳಿದುಕೊಂಡಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಶಾನ್ವಿ ಕೈನಲ್ಲಿರುವ ಚಿತ್ರಗಳ ಸಂಖ್ಯೆ.

  ರಾಜ್ ಕುಟುಂಬದ ಕುಡಿಯ ಹೊಸ ಚಿತ್ರಕ್ಕೆ ಶಾನ್ವಿ ನಾಯಕಿ ರಾಜ್ ಕುಟುಂಬದ ಕುಡಿಯ ಹೊಸ ಚಿತ್ರಕ್ಕೆ ಶಾನ್ವಿ ನಾಯಕಿ

  ಕಳೆದ ವರ್ಷವೇ ಮುಂದಿನ ವರ್ಷ ವಿಭಿನ್ನ ಸಿನಿಮಾ ಹಾಗೂ ಪಾತ್ರಗಳನ್ನ ನಿರೀಕ್ಷೆ ಮಾಡುತ್ತಿದ್ದೇನೆ ಎಂದು ಟ್ವಿಟ್ಟರ್ ಮೂಲಕ ತನ್ನ ಆಸೆಯನ್ನು ವ್ಯಕ್ತ ಪಡಿಸಿದ್ದ ಶಾನ್ವಿ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಶಾನ್ವಿ ಕೈ ನಲ್ಲಿರುವ ಸಿನಿಮಾಗಳ ಸಂಖ್ಯೆ ಎಷ್ಟು, ಯಾವ ಚಿತ್ರದಲ್ಲಿ ಯಾವ ರೀತಿಯ ಪಾತ್ರ ಮಾಡುತ್ತಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ಬೇಡಿಕೆ ನಟಿಯಾದ ಶಾನ್ವಿ ಶ್ರೀವಾಸ್ತವ

  ಬೇಡಿಕೆ ನಟಿಯಾದ ಶಾನ್ವಿ ಶ್ರೀವಾಸ್ತವ

  ಶಾನ್ವಿ ಶ್ರೀವಾಸ್ತವ.. ಸ್ಯಾಂಡಲ್ ವುಡ್ ನಲ್ಲಿ ತನ್ನ ಸೌಂದರ್ಯ ಹಾಗೂ ಅಭಿನಯದ ಮೂಲಕವೇ ಗುರುತಿಸಿಕೊಂಡಿರುವ ನಟಿ. ಬಹುತೇಕ ಸ್ಟಾರ್ ಗಳ ಜೊತೆಯಲ್ಲಿ ಅಭಿನಯ ಮಾಡಿರುವ ಶಾನ್ವಿ ಸದ್ಯ ಕನ್ನಡದಲ್ಲಿ ಬೇಡಿಕೆಯ ನಟಿ.

  'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಶಾನ್ವಿ

  'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಶಾನ್ವಿ

  ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಶಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕಾಣಿಸಿಕೊಂಡ ಚಿತ್ರಗಳಿಗಿಂತಲೂ ವಿಭಿನ್ನ ಗೆಟಪ್ ನಲ್ಲಿ ಶಾನ್ವಿ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

  ಅಖಿಲ್ ಚಿತ್ರಕ್ಕೆ ನಾಯಕಿ

  ಅಖಿಲ್ ಚಿತ್ರಕ್ಕೆ ನಾಯಕಿ

  ನವ ನಾಯಕ ನಟ ಡಾ ರಾಜ್ ಕುಮಾರ್ ಕುಟುಂಬದ ಸಂಬಂಧಿಯಾದ ಸೂರಜ್ ಕುಮಾರ್ ಅಭಿನಯದ 'ಅಖಿಲ್' ಚಿತ್ರದಲ್ಲಿಯೂ ಶಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಶಾನ್ವಿ ಪಾತ್ರ ಬೇರೆ ರೀತಿಯಲ್ಲಿರುತ್ತಂತೆ.

  ಕ್ರೇಜಿಸ್ಟಾರ್ ಚಿತ್ರದಲ್ಲಿ ಶಾನ್ವಿ

  ಕ್ರೇಜಿಸ್ಟಾರ್ ಚಿತ್ರದಲ್ಲಿ ಶಾನ್ವಿ

  ಉಪೇಂದ್ರ ಹಾಗೂ ರವಿಚಂದ್ರನ್ ಅಭಿನಯದ ಹೊಸ ಚಿತ್ರದಲ್ಲಿಯೂ ಶಾನ್ವಿ ಕಾಣಿಸಿಕೊಳ್ಳಲಿದ್ದಾರೆ. ಓಂ ಪ್ರಕಾಶ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಶಾನ್ವಿಯನ್ನು ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸಿದ್ದೇ ಓಂ ಪ್ರಕಾಶ್ ರಾವ್. ರವಿಚಂದ್ರನ್ ಮಗಳ ಪಾತ್ರವನ್ನು ಶಾನ್ವಿ ನಿರ್ವಹಿಸುತ್ತಿದ್ದಾರೆ ಎನ್ನುವ ಸುದ್ದಿಯೂ ಇದೆ.

  ಮತ್ತೆರಡು ಚಿತ್ರಕ್ಕೆ ಸಹಿ ಹಾಕಿದ ನಟಿ

  ಮತ್ತೆರಡು ಚಿತ್ರಕ್ಕೆ ಸಹಿ ಹಾಕಿದ ನಟಿ

  ಈ ಮೂರು ಸಿನಿಮಾಗಳನ್ನು ಬಿಟ್ಟು ಮತ್ತೆರೆಡು ಚಿತ್ರಗಳಲ್ಲಿ ನಟಿಸಲು ಶಾನ್ವಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲಾ ಚಿತ್ರದ ಪಾತ್ರಗಳು ವಿಭಿನ್ನವಾಗಿದೆ ಎನ್ನುವುದು ಶಾನ್ವಿ ಮಾತು. ಕನ್ನಡ ಸಿನಿಮಾರಂಗದಲ್ಲೇ ನೆಲೆ ಕಂಡುಕೊಳ್ಳಬೇಕು ಎನ್ನುವ ಆಸೆಯೂ ಕೂಡ ಇದೆಯಂತೆ.

  English summary
  actress Shanvi Srivastava is busy in Kannada cinema. Actress Shanvi acting as a heroin in Rakshit Shetty, Ravichandran, Upendra, and Suraj Kumar films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X