For Quick Alerts
  ALLOW NOTIFICATIONS  
  For Daily Alerts

  ಸನ್ನಿ ಲಿಯೋನ್'ನ ಹಿಂದಿಕ್ಕಿ ಚೀನಾ ಸಿನಿಮಾಗೆ ಟಿಕೆಟ್ ಗಿಟ್ಟಿಸಿಕೊಂಡ ಶಾನ್ವಿ.!

  By Bharath Kumar
  |
  shanvi shreevathsav acting in china movie| watch this video | Filmibeat Kannada

  ಕನ್ನಡ ಮತ್ತು ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಶಾನ್ವಿ ಶ್ರೀವಾಸ್ತವ್ ಈಗ ಹೊರದೇಶದಲ್ಲೂ ಕಮಾಲ್ ಮಾಡುತ್ತಿದ್ದಾರೆ. ಸದ್ಯ, ದರ್ಶನ್ ಅಭಿನಯದ 'ತಾರಕ್' ಚಿತ್ರದಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿಕೊಂಡಿರುವ ಶಾನ್ವಿ, ಅಷ್ಟರಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.

  ಹೌದು, ನೀಲಿ ಜಗತ್ತಿನ ಮಾಜಿ ರಾಣಿ, ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ಅವರನ್ನೇ ಹಿಂದಿಕ್ಕಿ ಚೀನಾದ ಚಿತ್ರವೊಂದರಲ್ಲಿ 'ಶಾನ್ವಿ' ಅಭಿನಯಿಸಿದ್ದಾರೆ.

  ಅಷ್ಟಕ್ಕೂ, ಶಾನ್ವಿ ಶ್ರೀವಾಸ್ತವ್ ಅಭಿನಯಿಸಿರುವ ಚೀನಾ ಸಿನಿಮಾ ಯಾವುದು? ಯಾವ ಪಾತ್ರ, ಸನ್ನಿ ಮಾಡಬೇಕಿದ್ದ ಈ ಪಾತ್ರ ಶಾನ್ವಿ ಕೈಸೇರಿದ್ದು ಹೇಗೆ ಎಂದು ತಿಳಿಯಲು ಮುಂದೆ ಓದಿ.....

  ಚೈನೀಸ್ ವೆಬ್ ಸೀರಿಸ್ ನಲ್ಲಿ ಶಾನ್ವಿ

  ಚೈನೀಸ್ ವೆಬ್ ಸೀರಿಸ್ ನಲ್ಲಿ ಶಾನ್ವಿ

  ಮಲೇಶಿಯನ್ ನಿರ್ದೇಶಕ ಚಾಂಗ್ ಆಕ್ಷನ್ ಕಟ್ ಹೇಳುತ್ತಿರುವ ಚೈನೀಸ್ ವೆಬ್ ಸೀರಿಸ್ ನಲ್ಲಿ ಶಾನ್ವಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಭಾರತೀಯ ರಾಣಿ ಪಾತ್ರ

  ಭಾರತೀಯ ರಾಣಿ ಪಾತ್ರ

  ಚೀನಾ ಮತ್ತು ಭಾರತದ ಕಥಾಹಂದರವುಳ್ಳು ಈ ವೆಬ್ ಸೀರಿಸ್ ನಲ್ಲಿ ಶಾನ್ವಿ, ಭಾರತೀಯ ರಾಣಿ ಪಾತ್ರವನ್ನ ನಿರ್ವಹಿಸಿದ್ದಾರೆ. ಭಾರತೀಯ ರಾಣಿಯಾಗಿ ಚೈನಾದಲ್ಲಿ ಟ್ರಾವೆಲ್ ಮಾಡೋದೇ ಈ ಸಿನಿಮಾದ ಕಥೆ.

  ಚೀನಾ ಭಾಷೆ ಕಲಿತ ನಟಿ

  ಚೀನಾ ಭಾಷೆ ಕಲಿತ ನಟಿ

  ಈ ಪಾತ್ರವನ್ನ ನಿರ್ವಹಿಸಲು ನಟಿ ಶಾನ್ವಿ ಚೀನಾ ಭಾಷೆಯನ್ನ ಕಲಿತಿದ್ದಾರಂತೆ. ಭಾಷಾಂತರಕಾರರ ನೆರವಿನಿಂದ ಸ್ವತಃ ಭಾಷೆ ಕಲಿತಿದ್ದಾರೆ.

  ಸನ್ನಿಗೆ ಕಿಕ್ ಔಟ್.!

  ಸನ್ನಿಗೆ ಕಿಕ್ ಔಟ್.!

  ಮೊದಲಿಗೆ ಈ ಪಾತ್ರಕ್ಕಾಗಿ ನಟಿ ಸನ್ನಿ ಲಿಯೋನ್ ಅವರನ್ನ ಆಯ್ಕೆ ಮಾಡಿತ್ತು. ಆದರೆ ಬೇಬಿ ಡಾಲ್ ಸ್ಟಾರ್ ಸನ್ನಿ ಈ ಪಾತ್ರಕ್ಕೆ ಒಗ್ಗುವುದಿಲ್ಲ ಎಂದು ನಿರ್ಧರಿಸಿ ಶಾನ್ವಿಗೆ ಮಣೆ ಹಾಕಿದೆ.

  'ದಿ ಡಾರ್ಕ್ ಲಾರ್ಡ್' ವೆಬ್ ಸೀರಿಸ್

  'ದಿ ಡಾರ್ಕ್ ಲಾರ್ಡ್' ವೆಬ್ ಸೀರಿಸ್

  ಅಂದ್ಹಾಗೆ, ಶಾನ್ವಿ ಅಭಿನಯಿಸಿರುವ ವೆಬ್ ಸೀರಿಸ್ ಚೈನೀಸ್ ಟೆಲಿವಿಷನ್ ನಲ್ಲಿ ಪ್ರಸಾರವಾಗುತ್ತಿದ್ದು, ಅದರ ಹೆಸರು 'ದಿ ಡಾರ್ಕ್ ಲಾರ್ಡ್'. ಇತ್ತೀಚೆಗೆ ಚೀನಾಗೆ ತೆರಳಿದ್ದ ಶಾನ್ವಿ ಚಿತ್ರೀಕರಣದಲ್ಲಿ ಪಾಳ್ಗೊಂಡಿದ್ದರು. 11 ಎಪಿಸೋಡ್'ಗಳ ಈ ವೆಬ್ ಸೀರಿಸ್ ನಲ್ಲಿ 7 ಎಪಿಸೋಡ್'ನಲ್ಲಿ ಶಾನ್ವಿ ಕಾಣಿಸಿಕೊಳ್ಳಲಿದ್ದಾರಂತೆ.

  English summary
  According to sources Shanvi Srivastava has played the role of an Indian princess for a Chinese web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X