For Quick Alerts
  ALLOW NOTIFICATIONS  
  For Daily Alerts

  ಕೇವಲ 20 ದಿನಗಳಲ್ಲಿ ಹೊಸ ಸಿನಿಮಾದ ಚಿತ್ರೀಕರಣ ಮುಗಿಸಿದ ನಟಿ ಶಾನ್ವಿ

  |

  ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವ ಇತ್ತೀಚಿಗೆ ಕಸ್ತೂರಿ ಮಹಲ್ ಸಿನಿಮಾ ಒಪ್ಪಿಕೊಂಡಿದ್ದರು. ನಟಿ ರಚಿತಾ ರಾಮ್ ಹೊರಬಂದ ಜಾಗಕ್ಕೆ ಶಾನ್ವಿ ಎಂಟ್ರಿ ಕೊಟ್ಟಿದ್ದರು. ವಿಶೇಷ ಎಂದರೆ ಈಗಾಗಲೇ ಸಿನಿಮಾದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಅಂದ್ಹಾಗೆ ನಿರ್ದೇಶಕ ದಿನೇಶ್ ಬಾಬು ಅವರ 50ನೇ ಸಿನಿಮಾವಿದು. ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭಮಾಡಿದ್ದ ಚಿತ್ರತಂಡ ಈಗಾಗಲೇ ಚಿತ್ರೀಕರಣ ಮುಗಿಸಿ ಅಚ್ಚರಿ ಮೂಡಿಸಿದೆ.

  ಕಡಿಮೆ ಸಮಯದಲ್ಲಿ ಚಿತ್ರೀಕರಣ ಮುಗಿಸುವುದರಲ್ಲಿ ನಿರ್ದೇಶಕ ದಿನೇಶ್ ಬಾಬು ಎತ್ತಿದ ಕೈ. ಸಾಕಷ್ಟು ಸಿನಿಮಾಗಳನ್ನು ಕಡಿಮೆ ಅವಧಿಯಲ್ಲಿ ಶೂಟಿಂಗ್ ಮುಗಿಸಿ ದಾಖಲೆ ಮಾಡಿದ್ದಾರೆ. ಕಸ್ತೂರಿ ಮಹಲ್ ಸಿನಿಮಾವನ್ನು ಸಹ ಕಡಿಮೆ ಅವಧಿಯಲ್ಲಿ ಶೂಟಿಂಗ್ ಮಾಡಿ ಮುಗಿಸಿದ್ದಾರೆ.

  'ಕಸ್ತೂರಿ ಮಹಲ್' ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್'ಕಸ್ತೂರಿ ಮಹಲ್' ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್

  ಈ ತಿಂಗಳ ಪ್ರಾರಂಭದಲ್ಲಿ ಚಿತ್ರತಂಡ ಚಿಕ್ಕಮಗಳೂರಿನ ಕೊಟ್ಟಿಗೆ ಹಾರ, ಬಾಲೂರು ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಆರಂಭವಾಗಿತ್ತು. ಆಯುಧ ಪೂಜೆಯ ಶುಭದಿನದಂದು ಅದೇ ಸ್ಥಳದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿದೆ. ಸುಮಾರು 20 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಕ್ತಾಯಗೊಂಡಿದೆ.

  ಈ ಸಿನಿಮಾದಲ್ಲಿ ನಾಯಕನಾಗಿ ಸ್ಕಂಧ ಅಶೋಕ್ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ಶ್ರುತಿ ಪ್ರಕಾಶ್, ನೀನಾಸಂ ಅಶ್ವಥ್, ಅಕ್ಷರ್ ಸೇರಿದಂತೆ ಅನೇಕರಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲಲ್ ಮಾದರಿಯ ಕಸ್ತೂರಿ ಮಹಲ್ ಹೇಗಿರಲಿದೆ ಎನ್ನುವುದು ಸಿನಿಪ್ರೇಕ್ಷಕರ ಕುತೂಹಲ.

  Junior Chiru ಹೊಸ ಹೆಸರಿಟ್ಟ Meghna Raj | Chiru Sarja Son Name | Filmibeat Kannada

  ಅಂದ್ಹಾಗೆ ಕಸ್ತೂರಿ ಮಹಲ್ ಸಿನಿಮಾಗೆ ಈ ಮೊದಲು ಕಸ್ತೂರಿ ನಿವಾಸ ಎಂದು ಟೈಟಲ್ ಇಡಲಾಗಿತ್ತು. ಡಾ.ರಾಜ್ ಕುಮಾರ್ ಅಭಿನಯದ ಸಿನಿಮಾದ ಟೈಟಲ್ ಅನ್ನು ಮರುಬಳಕೆ ಮಾಡಿಕೊಂಡಿದ್ದರ ವಿರುದ್ಧ ರಾಜ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸಿನಿಮಾಗೆ ಕಸ್ತೂರಿ ಮಹಲ್ ಎಂದು ಶೀರ್ಷಿಕೆ ಇಡಲಾಗಿದೆ.

  English summary
  Shanvi Srivastava starrer Kasturi Mahal kannada shooting completes in 20 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X