For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷದ ಪ್ರಯುಕ್ತ 'ಕಸ್ತೂರಿ ಮಹಲ್' ಚಿತ್ರ ಟೀಸರ್ ಬಿಡುಗಡೆ

  |

  ಕನ್ನಡದ ಹಿರಿಯ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಕಸ್ತೂರಿ ಮಹಲ್' ಸಿನಿಮಾದ ಟೀಸರ್ ಹೊಸ ವರ್ಷದ ಪ್ರಯುಕ್ತ ಬಿಡುಗಡೆಯಾಗಲಿದೆ.

  ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಟೀಸರ್ ರಿಲೀಸ್ ಮಾಡಲು ಸಿದ್ಧತೆ ನಡೆಸಿದ್ದು, ಜನವರಿ 1 ರಂದು ಕಸ್ತೂರಿ ಮಹಲ್ ಟೀಸರ್ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ನಿರ್ಧರಿಸಿದೆ.

  ಕೇವಲ 20 ದಿನಗಳಲ್ಲಿ ಹೊಸ ಸಿನಿಮಾದ ಚಿತ್ರೀಕರಣ ಮುಗಿಸಿದ ನಟಿ ಶಾನ್ವಿಕೇವಲ 20 ದಿನಗಳಲ್ಲಿ ಹೊಸ ಸಿನಿಮಾದ ಚಿತ್ರೀಕರಣ ಮುಗಿಸಿದ ನಟಿ ಶಾನ್ವಿ

  ದಸರಾ ಹಬ್ಬದ ವೇಳೆಯಲ್ಲಿ ಚಿತ್ರೀಕರಣ ಆರಂಭಿಸಿದ್ದ ಕಸ್ತೂರಿ ಮಹಲ್ ಒಂದೇ ಹಂತದಲ್ಲಿ ಇಡೀ ಚಿತ್ರದ ಶೂಟಿಂಗ್ ಮುಗಿಸಿದೆ. ಚಿಕ್ಕಮಗಳೂರಿನಲ್ಲಿ ಪೂರ್ತಿ ಸಿನಿಮಾದ ಚಿತ್ರೀಕರಣ ನಡೆದಿದೆ.

  ಕಸ್ತೂರಿ ಮಹಲ್ ಖ್ಯಾತ ನಿರ್ದೇಶಕ ದಿನೇಶ್ ಬಾಬು ಅವರ 50 ಚಿತ್ರ ಎಂಬ ಕಾರಣಕ್ಕೆ ಭಾರಿ ಕುತೂಹಲ ಮೂಡಿಸಿದೆ. ಶಾನ್ವಿ ಶ್ರೀವಸ್ತವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ನಟ ಸ್ಕಂದ ಅಶೋಕ್, ಬಿಗ್ ಬಾಸ್ ಶ್ರುತಿ ಪ್ರಕಾಶ್, ರಂಗಾಯಣ ರಘು ಕಾಣಿಸಿಕೊಳ್ಳುತ್ತಿದ್ದಾರೆ.

  ರವೀಶ್ ಆರ್‌ಸಿ, ರುಬೀನ್ ರಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಗುಮಿನೇನಿ ವಿಜಯ್ ಸಂಗೀತವಿದ್ದು, ಪಿಕೆಚ್ ದಾಸ್ ಅವರ ಛಾಯಾಗ್ರಹಣ ಇದೆ.

  Mission Impossible 7 ಸಿಬ್ಬಂದಿ ವಿರುದ್ಧ ಕೂಗಾಡಿದ Tom Cruise | Filmibeat Kannada

  'ಕಸ್ತೂರಿ ಮಹಲ್' ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್'ಕಸ್ತೂರಿ ಮಹಲ್' ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್

  ಈ ಮೊದಲು ಸಿನಿಮಾ ಆರಂಭವಾದಾಗ ಈ ಚಿತ್ರಕ್ಕೆ ಕಸ್ತೂರಿ ನಿವಾಸ ಎಂದು ಹೆಸರಿಡಲಾಗಿತ್ತು. ಆರಂಭದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದರು. ತದನಂತರ ಟೈಟಲ್ ಹಾಗೂ ನಾಯಕಿ ಬದಲಾದರು. ಕಸ್ತೂರಿ ನಿವಾಸ ಬದಲು ಕಸ್ತೂರಿ ಮಹಲ್ ಆಯ್ತು, ರಚಿತಾ ರಾಮ್ ಬದಲು ಶಾನ್ವಿ ಬಂದರು.

  English summary
  South actress Shanvi Srivastava's Kasturi Mahal teaser to be unveiled on January 1.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X