'ಮಾಸ್ಟರ್ ಪೀಸ್' ಚೆಲುವೆಯ ಬಿಕಿನಿ ಫೋಟೋ: 'ಸಖತ್ ಹಾಟ್' ಎಂದ ಸೆಲೆಬ್ರಿಟಿಗಳು
ಲಾಕ್‌ಡೌನ್‌ನಿಂದ ರಿಲೀಫ್ ಸಿಗುತ್ತಿದ್ದಂತೆ ಸೆಲೆಬ್ರಿಟಿಗಳೆಲ್ಲ ವಿದೇಶಕ್ಕೆ ಹಾರಿದ್ದಾರೆ. ಶೂಟಿಂಗ್, ಕೆಲಸ ಇಲ್ಲದೇ ಎಂಟು ತಿಂಗಳು ಕಾಲ ಮನೆಯಲ್ಲಿ ಕೂತಿದ್ದ ತಾರೆಯರು ಹಾಲಿಡೇ ಎಂಜಾಯ್ ಮಾಡಲು ತಮ್ಮ ನೆಚ್ಚಿನ ತಾಣಗಳಿಗೆ ಹೋಗಿದ್ದಾರೆ.
ಸದ್ಯದ ಬಹುತೇಕ ತಾರೆಯರು ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿರುವುದು ಕಂಡು ಬಂದಿದೆ. ಸಮಂತಾ, ಕಾಜಲ್ ಅಗರ್‌ವಾಲ್ ಬಳಿಕ ಈಗ ಶಾನ್ವಿ ಶ್ರೀವಾಸ್ತವ್ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಮಾಲ್ಡೀವ್ಸ್ ಸಮುದ್ರ ತೀರಾದಲ್ಲಿ ಎಂಜಾಯ್ ಮಾಡ್ತಿರುವ ಶಾನ್ವಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿ....

ಶಾನ್ವಿ ಬಿಕಿನಿ ಫೋಟೋ
ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡ್ತಿರುವ ನಟಿ ಶಾನ್ವಿ ಶ್ರೀವಾಸ್ತವ್ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾನ್ವಿಯ ಈ ಹಾಟ್ ಫೋಟೋಗಳನ್ನು ಕಂಡ ನೆಟ್ಟಿಗರು ಬೆರಗಾಗಿದ್ದಾರೆ.

ಹಾಟ್ ಎಂದ ಸೆಲೆಬ್ರಿಟಿಗಳು
ಶಾನ್ವಿ ಶ್ರೀವಾಸ್ತವ್ ಅವರ ಬಿಕಿನಿ ಫೋಟೋಗಳನ್ನು ನೋಡಿದ ನೆಟ್ಟಿಗರು ಮಾತ್ರವಲ್ಲ, ಕೆಲವು ಸೆಲೆಬ್ರಿಟಿಗಳು ಸಹ ಅಚ್ಚರಿಯಾಗಿದ್ದಾರೆ. ಶ್ರುತಿ ಹರಿಹರನ್, ನಿದಿ ಅಗರ್‌ವಾಲ್, ಹರ್ಷಿಕಾ, ನಿಶ್ವಿಕಾ, ಆಶಿಕಾರಂಗನಾಥ್, ವಿಧಿಶ ಶ್ರೀವಾಸ್ತವ್ ಸೇರಿದಂತೆ ಹಲವರು ಕಾಮೆಂಟ್ ಮಾಡಿದ್ದು, ''ವಾಹ್,,,,,ಹಾಟ್,,,,,ಹಾಟೀ,,,,'' ಎಂದೆಲ್ಲ ಹೇಳಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಸಮಂತಾ, ಕಾಜಲ್
ಇತ್ತೀಚಿಗಷ್ಟೆ ಉದ್ಯಮಿಯೊಂದಿಗೆ ವಿವಾಹವಾದ ನಟಿ ಕಾಜಲ್ ಅಗರ್‌ವಾಲ್ ಮಾಲ್ಡೀವ್ಸ್‌ನಲ್ಲಿ ತಮ್ಮ ಹನಿಮೂನ್ ಮಾಡಿಕೊಂಡಿದ್ದರು. ಇದಾದ ಬಳಿಕ ಸಮಂತಾ ಅಕ್ಕಿನೇನಿ ಸಹ ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ, ಶಾನ್ವಿ ಶ್ರೀವಾಸ್ತವ್ ಸಹ ಮಾಲ್ಡೀವ್ಸ್‌ನಲ್ಲಿದ್ದಾರೆ.

'ಕಸ್ತೂರಿ ಮಹಲ್' ಮುಗಿಸಿದ ಶಾನ್ವಿ
ಹಿರಿಯ ನಿರ್ದೇಶಕದ ದಿನೇಶ್ ಬಾಬು ನಿರ್ದೇಶನದಲ್ಲಿ ತಯಾರಾಗುತ್ತಿರುವ ಕಸ್ತೂರಿ ಮಹಲ್ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೇವಲ 20 ದಿನದಲ್ಲಿ ಈ ಚಿತ್ರದ ಶೂಟಿಂಗ್ ಮುಗಿದಿದೆಯಂತೆ. ಈ ಸಿನಿಮಾ ಮುಗಿಸಿದ ನಂತರ ಶಾನ್ವಿ ಮಾಲ್ಡೀವ್ಸ್ ಪ್ರವಾಸಯ ಕೈಗೊಂಡಿದ್ದಾರೆ.


Click it and Unblock the Notifications











