»   » ಫ್ಯಾಷನ್ ಲೋಕಕ್ಕೆ ಕಾಲಿಟ್ಟ ನಟಿ ಶಾನ್ವಿ ಶ್ರೀವಾಸ್ತವ

ಫ್ಯಾಷನ್ ಲೋಕಕ್ಕೆ ಕಾಲಿಟ್ಟ ನಟಿ ಶಾನ್ವಿ ಶ್ರೀವಾಸ್ತವ

Posted By:
Subscribe to Filmibeat Kannada

ಶಾನ್ವಿ ಶ್ರೀವಾತ್ಸವ ಚಂದನವನದ ಮುದ್ದಾದ ನಾಯಕಿ. ಒಂದು ರೀತಿಯಲ್ಲಿ ಚಿತ್ರರಂಗದಲ್ಲಿ ಲಕ್ಕಿ ನಾಯಕಿ ಎಂದರು ತಪ್ಪಾಗುವುದಿಲ್ಲ. ಶಾನ್ವಿ ಕನ್ನಡ ಸಿನಿಮಾರಂಗಕ್ಕೆ ಬಂದ ಮೇಲೆ ಸುಮಾರು ಏಳು ಚಿತ್ರಗಳಲ್ಲಿ ಅಭಿನಯಿಸಿದ್ದು ಅದರಲ್ಲಿ ಬಹುತೇಕ ಸಿನಿಮಾಗಳು ಹಿಟ್ ಲೀಸ್ಟ್ ಸೇರಿಕೊಂಡಿವೆ. ಸದ್ಯ ರಕ್ಷಿತ್ ಶೆಟ್ಟಿ ಜೊತೆಯಲ್ಲಿ ಅವನೇ 'ಶ್ರೀ ಮನ್ನಾರಾಯಣ' ಸಿನಿಮಾದಲ್ಲಿ ಬ್ಯುಸಿ ಆಗಿರುವ ಶಾನ್ವಿ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದಾರೆ.

ಬಣ್ಣದ ಜಗತ್ತಿನಲ್ಲಿ ವೃತ್ತಿ ಜೀವನವನ್ನ ಕಂಡುಕೊಂಡಿರುವ ಶಾನ್ವಿ ತನ್ನದೇ ಸ್ವಂತ ಉದ್ಯೋಗ ಆರಂಭಕ್ಕೆ ನಾಂದಿ ಹಾಡಿದ್ದಾರೆ. ತನ್ನ ಸ್ನೇಹಿತೆ ನಿಶಾರ ಜೊತೆ ಸೇರಿ 'ಮನಃ ಕೌಚರ್' ಎನ್ನುವ ಫ್ಯಾಷನ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಇಂಥದೊಂದು ಕೆಲಸವನ್ನ ಕರ್ನಾಟಕದಲ್ಲೇ ಆರಂಭ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಶಾನ್ವಿ ತಮ್ಮ ಕನಸಿನ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

Shanvi Srivastava started costume design company name of Manah Couture

ಕನ್ನಡಿಗರಿಗಾಗಿ ಶಾನ್ವಿ ನಟನೆ ಜೊತೆಗೆ ಏನೆಲ್ಲಾ ಮಾಡ್ತಿದ್ದಾರೆ !

'ಮನಃ ಕೌಚರ್' ಅಡಿಯಲ್ಲಿ ಸಾನ್ವಿ ಹಾಗೂ ನಿಶಾರ ಡಿಸೈನ್ ಮಾಡಿದ ಉಡುಪುಗಳು ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಸದ್ಯ ಹೆಸರನ್ನ ಫೈನಲ್ ಮಾಡಿರುವ ಮಾಸ್ಟರ್ ಪೀಸ್ ಬೆಡಗಿ ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿರುವ ಲೋಗೋವನ್ನು ಅನಾವರಣ ಮಾಡಲಿದ್ದಾರೆ.

Shanvi Srivastava started costume design company name of Manah Couture

ಶಾನ್ವಿ ಕನಸಿಗೆ ಅಭಿಮಾನಿಗಳು ಬೆನ್ನು ತಟ್ಟಿದ್ದು ಸ್ಯಾಂಡಲ್ ವುಡ್ ನ ಸಿಂಡ್ರೆಲಾ ಸ್ನೇಹಿತೆಯ ಕೆಲಸಕ್ಕೆ ಶುಭಾಶಯ ಕೋರಿದ್ದಾರೆ. "ನಮ್ಮ ಕ್ಯೂಟಿ ಪೈ ಶಾನ್ವಿ ಹೊಸ ವಸ್ತ್ರವಿನ್ಯಾಸದ ಕಂಪನಿಯನ್ನ ಆರಂಭ ಮಾಡುತ್ತಿದ್ದಾರೆ. ಅತ್ಯುತ್ತಮವಾದ ಆಯ್ಕೆಗಳು ಮನಃ ಕೌಚರ್ ಮೂಲಕ ಎಲ್ಲರಿಗೂ ಲಭ್ಯವಾಗಲಿ ಆಲ್ ದ ಬೆಸ್ಟ್ ಶಾನ್ವಿ" ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಇಂದು ಸೆಟ್ಟೇರಿತು 'ಅವನೇ ಶ್ರೀಮನ್ನಾರಾಯಣ' : ಇಂದೇ ಬಿಡುಗಡೆ ದಿನ ಹೇಳಿದ ರಕ್ಷಿತ್

English summary
Kannada Masterpiece, Mufti movie fame actress Shanvi Srivastava has started her own costume design company. Shavi's design was launched in the name of" Manah Couture".

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X