For Quick Alerts
  ALLOW NOTIFICATIONS  
  For Daily Alerts

  ನಟಿ ಶಾನ್ವಿ ಹೊಡೆದ್ರಲ್ಲಾ ಚಾನ್ಸು: ಇಂತಹ ಅವಕಾಶ ಯಾರಿಗುಂಟು ಯಾರಿಗಿಲ್ಲ.?!

  By Harshitha
  |
  ಶಾನ್ವಿಗೆ ಒಲಿದ ಬಂಪರ್ ಚಾನ್ಸ್..! | Filmibeat Kannada

  ನಟಿ ಶಾನ್ವಿ ಶ್ರೀವಾಸ್ತವ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟು ಆರು ವರ್ಷಗಳು ಕಳೆದಿವೆ ಅಷ್ಟೇ. ಈ ಆರು ವರ್ಷಗಳಲ್ಲಿ ಚಿರಂಜೀವಿ ಸರ್ಜಾ, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ಮನೋರಂಜನ್ ರವಿಚಂದ್ರನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆಗೆ ಶಾನ್ವಿ ಶ್ರೀವಾಸ್ತವ ತೆರೆಹಂಚಿಕೊಂಡಿದ್ದಾರೆ.

  ಸದ್ಯಕ್ಕೆ 'ಸಿಂಪಲ್ ಹುಡುಗ' ರಕ್ಷಿತ್ ಶೆಟ್ಟಿ ಜೊತೆಗೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ಶಾನ್ವಿ ಶ್ರೀವಾಸ್ತವ ಅಭಿನಯಿಸುತ್ತಿದ್ದಾರೆ. ಈ ನಡುವೆ ಶಾನ್ವಿಗೆ ಒಂದು ಬಂಪರ್ ಚಾನ್ಸ್ ಹುಡುಕಿಕೊಂಡು ಬಂದಿದೆ.

  ಅದು ಅಂತಿಂಥ ಚಾನ್ಸ್ ಅಲ್ಲ... ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆಗೆ ಕಾಣಿಸಿಕೊಳ್ಳುವ ಅವಕಾಶ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕನಸುಗಾರ ರವಿಚಂದ್ರನ್ ಒಂದಾಗಿರುವ 'ಮಲ್ಟಿ ಸ್ಟಾರರ್' ಚಿತ್ರದಲ್ಲಿ ಅಭಿನಯಿಸುವ ಸುವರ್ಣಾವಕಾಶ ಶಾನ್ವಿಗೆ ಸಿಕ್ಕಿದೆ. ಇಂತಹ ಅದೃಷ್ಟ ಯಾರಿಗುಂಟು ಯಾರಿಗಿಲ್ಲ ಹೇಳಿ....

  ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ಶಾನ್ವಿ ನಾಯಕಿ

  ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ಶಾನ್ವಿ ನಾಯಕಿ

  ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಒಟ್ಟಿಗೆ ಸಿನಿಮಾ ಮಾಡುತ್ತಿರುವ ಸುದ್ದಿಯನ್ನ ಇದೇ ಫಿಲ್ಮಿಬೀಟ್ ಕನ್ನಡದಲ್ಲಿ ನೀವು ಓದಿದ್ರಿ. ಈಗ ಇದೇ ಚಿತ್ರಕ್ಕೆ ನಾಯಕಿ ಆಗಿ ಶಾನ್ವಿ ಶ್ರೀವಾಸ್ತವ ಆಯ್ಕೆ ಆಗಿದ್ದಾರೆ.

  ಉಪೇಂದ್ರ - ರವಿಚಂದ್ರನ್ ಕಾಂಬಿನೇಶನ್ ಚಿತ್ರಕ್ಕೆ ಈಕೆಯೇ ನಾಯಕಿ!ಉಪೇಂದ್ರ - ರವಿಚಂದ್ರನ್ ಕಾಂಬಿನೇಶನ್ ಚಿತ್ರಕ್ಕೆ ಈಕೆಯೇ ನಾಯಕಿ!

  ರವಿಚಂದ್ರನ್ ಗೆ ಶಾನ್ವಿ ಜೋಡಿ

  ರವಿಚಂದ್ರನ್ ಗೆ ಶಾನ್ವಿ ಜೋಡಿ

  ಇನ್ನೂ ಶೀರ್ಷಿಕೆ ಫೈನಲ್ ಆಗದ ಈ ಚಿತ್ರದಲ್ಲಿ 'ಮಲ್ಲ' ರವಿಚಂದ್ರನ್ ಗೆ ಜೋಡಿಯಾಗಿ ಶಾನ್ವಿ ಶ್ರೀವಾಸ್ತವ ಮಿಂಚಲಿದ್ದಾರೆ. ಈ ವಿಚಾರವನ್ನ ಖುದ್ದು ನಿರ್ಮಾಪಕ ಆರ್.ಶ್ರೀನಿವಾಸ್ ಖಚಿತ ಪಡಿಸಿದ್ದಾರೆ.

  ರಿಯಲ್ ಸ್ಟಾರ್ ಮತ್ತು ಕ್ರೇಜಿ ಸ್ಟಾರ್ ಸೇರಿ ಹೊಸ ಮಲ್ಟಿಸ್ಟಾರ್ ಸಿನಿಮಾ!ರಿಯಲ್ ಸ್ಟಾರ್ ಮತ್ತು ಕ್ರೇಜಿ ಸ್ಟಾರ್ ಸೇರಿ ಹೊಸ ಮಲ್ಟಿಸ್ಟಾರ್ ಸಿನಿಮಾ!

  ಉಪೇಂದ್ರಗೆ ನಾಯಕಿ ಯಾರು.?

  ಉಪೇಂದ್ರಗೆ ನಾಯಕಿ ಯಾರು.?

  ಇದೇ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿ ಆಗಿ ನಿಮಿಕಾ ರತ್ನಾಕರ್ ಕಾಣಿಸಿಕೊಳ್ಳಲಿದ್ದಾರೆ. ಮಂಗಳೂರು ಮೂಲದ ನಿಮಿಕಾಗೆ ಉಪೇಂದ್ರ ಜೊತೆಗೆ ಡ್ಯುಯೆಟ್ ಹಾಡುವ ಅವಕಾಶ ಲಭಿಸಿದೆ.

  ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರ

  ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರ

  ಅಂದ್ಹಾಗೆ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ರನ್ನ ಒಟ್ಟಿಗೆ ತೆರೆಮೇಲೆ ತರುವ ಪ್ರಯತ್ನಕ್ಕೆ ಕೈಹಾಕಿರುವವರು ನಿರ್ದೇಶಕ ಓಂ ಪ್ರಕಾಶ್ ರಾವ್. ಈಗಾಗಲೇ ಓಂ ಪ್ರಕಾಶ್ ರಾವ್ ನಿರ್ದೇಶನದ 'ಚಂದ್ರಲೇಖಾ' ಚಿತ್ರದಲ್ಲಿ ಶಾನ್ವಿ ನಟಿಸಿದ್ದರು. ಇದು ಓಂ ಪ್ರಕಾಶ್ ರಾವ್-ಶಾನ್ವಿ ಕಾಂಬಿನೇಶನ್ ನ ಎರಡನೇ ಸಿನಿಮಾ.

  ಸಿನಿಮಾದ ಟೈಟಲ್ ಏನು.?

  ಸಿನಿಮಾದ ಟೈಟಲ್ ಏನು.?

  ಈ ಚಿತ್ರಕ್ಕೆ 'ಹೊಯ್ಸಳ' ಎಂದು ಶೀರ್ಷಿಕೆ ಇಡುವ ಸಾಧ್ಯತೆ ಇದೆ. ಆದ್ರೆ, 'ಹೊಯ್ಸಳ' ಟೈಟಲ್ ನಿರ್ಮಾಪಕ ರಾಮು ಬಳಿ ಇದೆ. ಅವರು ಒಪ್ಪಿಗೆ ನೀಡಿ ಟೈಟಲ್ ನ ಬಿಟ್ಟುಕೊಟ್ಟರೆ, 'ಹೊಯ್ಸಳ'ದಲ್ಲಿ ಉಪೇಂದ್ರ-ರವಿಚಂದ್ರನ್ ಕಾರುಬಾರು ಜೋರಾಗಿರಲಿದೆ.

  ಸಿನಿಮಾ ಸೆಟ್ಟೇರುವುದು ಯಾವಾಗ.?

  ಸಿನಿಮಾ ಸೆಟ್ಟೇರುವುದು ಯಾವಾಗ.?

  ಈ ಸಿನಿಮಾದ ಫೋಟೋಶೂಟ್ ಆಗಸ್ಟ್ 16 ರಂದು ನಡೆಯಲಿದ್ದು, ಆಗಸ್ಟ್ 20 ರಂದು ಮುಹೂರ್ತ ನೆರವೇರಲಿದೆ. ಚಿತ್ರದ ತಾರಾಗಣ ಫೈನಲ್ ಆಗಿರುವುದರಿಂದ ಆದಷ್ಟು ಬೇಗ ಚಿತ್ರೀಕರಣ ಕೂಡ ಶುರುವಾಗಲಿದೆ.

  English summary
  Kannada Actress Shanvi Srivastava is roped in to play lead in Ravichandran-Upendra starrer Om Prakash Rao directorial Kannada Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X