ಕನ್ನಡಿಗರಿಗಾಗಿ ಶಾನ್ವಿ ನಟನೆ ಜೊತೆಗೆ ಏನೆಲ್ಲಾ ಮಾಡ್ತಿದ್ದಾರೆ !

By Pavithra

Recommended Video

ಶಾನ್ವಿ ನಟನೆ ಜೊತೆಗೆ ಏನೆಲ್ಲಾ ಮಾಡ್ತಿದ್ದಾರೆ ! | Filmibeat Kannada

ಶಾನ್ವಿ ಶ್ರೀವಾತ್ಸವ ಕನ್ನಡ ಸಿನಿಮಾರಂಗದಲ್ಲಿ ಮುದ್ದಾದ ಬೆಡಗಿ ಅಂತಾನೇ ಗುರುತಿಸಿಕೊಂಡಿರುವ ನಟಿ. ಅಭಿನಯಿಸಿದ ಮೊದಲ ಚಿತ್ರದಿಂದಲೇ ಶಾನ್ವಿ ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಕೇವಲ ಗ್ಲಾಮರ್ ಪಾತ್ರಗಳಲ್ಲಿ ಮಾತ್ರವಲ್ಲದೆ ಎಂಥದ್ದೆ ಪಾತ್ರವನ್ನೂ ನಿಭಾಯಿಸಲ್ಲ ನಟಿ ಎಂದು ಈಗಾಗಲೇ ನಿರೂಪಿಸಿರುವ ಶಾನ್ವಿ ತಮ್ಮನ್ನ ತುಂಬು ಹೃದಯದಿಂದ ಸ್ವೀಕರಿಸಿರುವ ಕನ್ನಡಿಗರಿಗಾಗಿ ಒಳ್ಳೆಯ ಕೆಲಸ ಮಾಡಲು ಮುಂದಾಗಿದ್ದಾರೆ.

ಕನ್ನಡದ ಐದು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡದ ಹುಡುಗಿ ಎನ್ನುವಂತಾಗಿರು ಶಾನ್ವಿ ಅಭಿನಯದ ಜೊತೆ ಜೊತೆಯಲ್ಲಿ ಒಂದ್ ಒಳ್ಳೆ ಕೆಲಸ ಮಾಡುವ ಉದ್ದೇಶದಲ್ಲಿದ್ದಾರೆ. ಯಾವುದೇ ಕೆಲಸ ಮಾಡಬೇಕಾದರೆ ಇಂದೇ ಆರಂಭ ಮಾಡಬೇಕು ಎಂದು ನಂಬಿರುವ ಶಾನ್ವಿ ಕನ್ನಡದ ನೆಲದಲ್ಲಿ ತನ್ನ ಸ್ವಂತ ಉದ್ಯೋಗವನ್ನ ಆರಂಭ ಮಾಡಿದ್ದಾರೆ.

ತಮ್ಮ ಮೇಲೆ ಮೊದಲ ಪ್ರಯೋಗ ಮಾಡಿಕೊಂಡಿರುವ ಶಾನ್ವಿ ಆರಂಭಿಸಿರುವ ಉದ್ಯೋಗ ಕಾಸ್ಟ್ಯೂಮ್ಸ್ ಡಿಸೈನಿಂಗ್ ಮತ್ತು ಸ್ಟೈಲಿಂಗ್. ಹೌದು ಶಾನ್ವಿ ಇನ್ನು ಮುಂದೆ ಕೇವಲ ನಟಿ ಮಾತ್ರವಲ್ಲ, ಅದನ್ನು ಹೊರತು ಪಡಿಸಿ ಸ್ಟೈಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲಿದ್ದಾರೆ. ಶಾನ್ವಿ ಅವರಿಗೆ ಈಗ ಇಂತ ಆಲೋಚನೆ ಬಂದಿದ್ದೇಕೆ? ಏನಲ್ಲಾ ತಯಾರಿ ಮಾಡಿಕೊಂಡಿದ್ದಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಕನ್ನಡ ನೆಲದಲ್ಲಿ ಶಾನ್ವಿ ಸ್ವದ್ಯೋಗ

ಕನ್ನಡ ನೆಲದಲ್ಲಿ ಶಾನ್ವಿ ಸ್ವದ್ಯೋಗ

'ಚಂದ್ರಲೇಖ' ಹಾಗೂ 'ಮಾಸ್ಟರ್ ಪೀಸ್' ಸಿನಿಮಾ ಮೂಲಕ ಪ್ರೇಕ್ಷಕರ ಮಧ್ಯೆ ಗುರುತಿಸಿಕೊಂಡಿರುವ ನಟಿ ಶಾನ್ವಿ ಶ್ರೀವಾತ್ಸವ ಸ್ವಂತ ಉದ್ಯೋಗ ಆರಂಭ ಮಾಡಿದ್ದಾರೆ. ಸಿನಿಮಾಗಳಲ್ಲಿ ಅಭಿನಯಿಸುವುದ ಜೊತೆಯಲ್ಲಿ ವಸ್ತ್ರ ವಿನ್ಯಾಸ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

ಹೊಸ ಕೆಲಸಕ್ಕೆ ಚಾಲನೆ

ಹೊಸ ಕೆಲಸಕ್ಕೆ ಚಾಲನೆ

ಶಾನ್ವಿ ಇಂದಿನಿಂದಲೇ ತಮ್ಮ ವಸ್ತ್ರ ವಿನ್ಯಾಸದ ಕೆಲಸವನ್ನ ಆರಂಭ ಮಾಡಿದ್ದಾರೆ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಮಹೂರ್ತಕ್ಕೆ ತಾವೇ ಡಿಸೈನ್ ಮಾಡಿದ ಕಾಸ್ಟ್ಯೂಮ್ಸ್ ಹಾಕಿಕೊಂಡಿದ್ದರು ಶಾನ್ವಿ. ವಿಶೇಷ ಅಂದರೆ ಶಾನ್ವಿ ಧರಿಸಿದ್ದ ಬಟ್ಟೆಯ ಮೇಲೆ 'ನಂಬಿಕೆ' ಅಂತ ಡಿಸೈನ್ ಮಾಡಲಾಗಿತ್ತು. ಮಾಸ್ಟರ್ ಪೀಸ್ ಬೆಡಗಿಗೆ ಸ್ವಂತ ಉದ್ಯೋಗದಲ್ಲಿ ಸಾಥ್ ನೀಡಿದ್ದು ಸ್ನೇಹಿತೆ ನಿಶಾರ ಕಿರಣ್.

ನಂಬಿಕೆಯ ಮೂಲಕ ಕೆಲಸ

ನಂಬಿಕೆಯ ಮೂಲಕ ಕೆಲಸ

ಶಾನ್ವಿ ಉತ್ತರ ಪ್ರದೇಶದ ವಾರಣಾಸಿ ಯ ಮೂಲದವರಾದರೂ ವಿದ್ಯಾಭ್ಯಾಸ, ಉದ್ಯೋಗ ಅಂತ ಆರಂಭ ಮಾಡಿದ್ದು ಮುಂಬೈನಲ್ಲಿ. ಆದರೆ ಜನರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡಿದ್ದು ಮಾತ್ರ ಕರ್ನಾಟಕದಲ್ಲಿ ಅದಕ್ಕಾಗಿ ತಮ್ಮ ಉದ್ಯೋಗವನ್ನ ಕನ್ನಡ ರಾಜ್ಯದಲ್ಲೇ ಶುರು ಮಾಡಲು ಮುಂದಾಗಿದ್ದಾರೆ.

ಎಲ್ಲರಿಗೂ ಲಭ್ಯವಾಗಲಿದೆ ಶಾನ್ವಿ ಡಿಸೈನ್ಸ್

ಎಲ್ಲರಿಗೂ ಲಭ್ಯವಾಗಲಿದೆ ಶಾನ್ವಿ ಡಿಸೈನ್ಸ್

ಶಾನ್ವಿ ತಮಗಷ್ಟೇ ಅಲ್ಲದೆ ಕರ್ನಾಟಕದ ಎಲ್ಲಾ ಜನರಿಗೂ ತಾವು ಡಿಸೈನ್ ಮಾಡಿದ ವಸ್ತ್ರಗಳನ್ನ ಖರೀದಿ ಮಾಡುವಂತಹ ಅವಕಾಶವನ್ನ ಕಲ್ಪಿಸುತ್ತಿದ್ದಾರೆ. ತಮ್ಮದೇ ಡಿಸೈನಿಂಗ್ ಅಂಗಡಿ ಓಪನ್ ಮಾಡಿ ಎಲ್ಲರಿಗೂ ಕೊಂಡುಕೊಳ್ಳುವಂತಹ ಬೆಲೆಯಲ್ಲಿ ವಸ್ತ್ರಗಳನ್ನ ಮಾರಾಟಕ್ಕೆ ಇಡಲಿದ್ದಾರೆ.

More from Filmibeat

English summary
Kannada actress Shanvi Srivastava will work on costume designs along with acting in films, Shanvi Srivastava has acted as a heroine in Masterpiece, Mafti and Chandralekha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X