For Quick Alerts
  ALLOW NOTIFICATIONS  
  For Daily Alerts

  ಶಾನ್ವಿ ಶ್ರೀವಾಸ್ತವ್ ಈ ಬಾರಿ ಯಾವ ನಟನಿಗೆ ನಾಯಕಿ ಆಗ್ತಿದ್ದಾರೆ ಗೊತ್ತಾ?

  By Bharath Kumar
  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಾಸ್ಟರ್ ಪೀಸ್' ಚಿತ್ರದ ನಂತರ ನಟಿ ಶಾನ್ವಿ ಶ್ರೀವಾಸ್ತವ್ ಸಂಪೂರ್ಣವಾಗಿ ಕನ್ನಡದಲ್ಲೇ ತೊಡಗಿಕೊಂಡಿದ್ದಾರೆ. ಒಂದರ ಹಿಂದೆ ಒಂದರಂತೆ ಶಾನ್ವಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು, ಸ್ಟಾರ್ ನಟರ ನೆಚ್ಚಿನ ನಾಯಕಿ ಎನಿಸಿಕೊಂಡಿದ್ದಾರೆ.

  ಸದ್ಯ, ದರ್ಶನ್ ಅಭಿನಯದ 'ತಾರಕ್' ಚಿತ್ರದಲ್ಲಿ ನಟಿಸಿರುವ ಶಾನ್ವಿ, ಈಗ ಮತ್ತೊಂದು ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಬೇಡಿಕೆ ನಟಿಯರ ಪೈಕಿ ಶಾನ್ವಿ ಕೂಡ ಒಬ್ಬರಾಗಿದ್ದಾರೆ.

  ಹಾಗಿದ್ರೆ, ಶಾನ್ವಿ ಶ್ರೀವಸ್ತವ್ ಅಭಿನಯಿಸಲಿರುವ ಮುಂದಿನ ಚಿತ್ರ ಯಾವುದು? ಈ ಚಿತ್ರಕ್ಕೆ ನಾಯಕ ಯಾರು? ಮುಂದೆ ಓದಿ.....

  ಯುವನಟನಿಗೆ ಜೋಡಿಯಾದ ಶಾನ್ವಿ

  ಯುವನಟನಿಗೆ ಜೋಡಿಯಾದ ಶಾನ್ವಿ

  'ರೋಗ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಇಶಾನ್ ಮುಂದಿನ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ.

  'ಪಿಚ್ಚಕಾರನ್' ಕನ್ನಡ ರೀಮೇಕ್

  'ಪಿಚ್ಚಕಾರನ್' ಕನ್ನಡ ರೀಮೇಕ್

  ಇಶಾನ್ ಮತ್ತು ಶಾನ್ವಿ ಅಭಿನಯಿಸಲಿರುವ ಈ ಚಿತ್ರ ತಮಿಳಿನ ಸೂಪರ್ ಹಿಟ್ 'ಪಿಚ್ಚಕಾರನ್' ಸಿನಿಮಾದ ರೀಮೇಕ್ ಆಗಿದೆ.

  ಕನ್ನಡದಲ್ಲಿ ಟೈಟಲ್ ಏನು?

  ಕನ್ನಡದಲ್ಲಿ ಟೈಟಲ್ ಏನು?

  ತಮಿಳಿನ 'ಪಿಚ್ಚಕಾರನ್' ಚಿತ್ರ ಕನ್ನಡ ಅವತರಣಿಕಗೆ 'ಅಮ್ಮ.....ಐ ಲವ್ ಯೂ' ಎಂದು ಟೈಟಲ್ ಇಡಲಾಗಿದೆ.

  ಅಕ್ಟೋಬರ್ ನಿಂದ ಆರಂಭ

  ಅಕ್ಟೋಬರ್ ನಿಂದ ಆರಂಭ

  ಅಂದ್ಹಾಗೆ, ಈ ಚಿತ್ರವನ್ನ ಕೆ.ಎಂ ಚೈತನ್ಯ ನಿರ್ದೇಶನ ಮಾಡುತ್ತಿದ್ದು, ದ್ವಾರಕೀಶ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಅಕ್ಟೋಬರ್ ನಲ್ಲಿ ಆರಂಭವಾಗಲಿದೆ.

  English summary
  Actress Shanvi Srivatsav has be selected as heroine for CR Manohar's nephew Ishan next movie. The film will be directed by KM Chaitanya and it is the 51st production of Dwarkish Films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X