ರಿಲೀಸ್‌ಗೂ ಮುನ್ನ ಟ್ರೈಲರ್ ಬಿಟ್ಟು ಕುತೂಹಲ ಮೂಡಿಸಿದ 'ಅವತಾರ ಪುರುಷ': ಸೀಕ್ವೆಲ್ಸ್ ತಾರೆಯರು ಸಾಥ್

By ಫಿಲ್ಮಿಬೀಟ್ ಡೆಸ್ಕ್

ಐಪಿಎಲ್, ಎಲೆಕ್ಷನ್ ಮಧ್ಯೆನೂ ಕನ್ನಡ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿವೆ. ಅದರಲ್ಲೂ ಏಪ್ರಿಲ್ 5 ಕನ್ನಡ ಸಿನಿಪ್ರಿಯರಿಗೆ ಹಬ್ಬ ಅಂತಲೇ ಹೇಳಬೇಕು. ಕನ್ನಡದ ಪ್ರಮುಖ ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ. ಅದರಲ್ಲಿ ಶರಣ್ ಹಾಗೂ ಆಶಿಕಾ ರಂಗನಾಥ್ ನಟಿಸಿದ 'ಅವತಾರ ಪುರುಷ 2' ಕೂಡ ಒಂದು.

'ಅವತಾರ ಪುರುಷ 2' ಈಗಾಗಲೇ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುತ್ತಿತ್ತು. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ಮಸ್ತ್ ಆಗಿರುವ ಟ್ರೈಲರ್ ರಿಲೀಸ್ ಮಾಡಿದೆ. ಈ ಟ್ರೈಲರ್ ರಿಲೀಸ್ ಮಾಡುವುದಕ್ಕೆ ಕನ್ನಡ ಚಿತ್ರರಂಗದ ನಟರು ಆಗಮಿಸಿದ್ದು ವಿಶೇಷ.

Sharan Ashika Ranganath movie Avatara Purusha 2 Trailer Out

'ನೆನಪಿರಲಿ' ಪ್ರೇಮ್, ರಿಷಿ, ವಿಕ್ಕಿ ವರುಣ್, ಪ್ರವೀಣ್ ತೇಜ್ ಹಾಗೂ ನಿರ್ದೇಶಕ ಸಂತು 'ಅವತಾರ ಪುರುಷ 2' ಸಿನಿಮಾದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶರಣ್ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. 'ಅವತಾರ ಪುರುಷ' ಮೊದಲ ಭಾಗ ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ಬಳಿಕ ಓಟಿಟಿ ಹಾಗೂ ಟಿವಿಯಲ್ಲಿ ಬಿಡುಗಡೆಯಾಗಿತ್ತು.

ಥಿಯೇಟರ್‌ಗಿಂತ ಹೆಚ್ಚಾಗಿ ಟಿವಿಯಲ್ಲಿ ಈ ಸಿನಿಮಾವನ್ನು ಹೆಚ್ಚು ಮಂದಿ ವೀಕ್ಷಿಸಿದ್ದರು. ಈಗ ಇದೇ ಸಿನಿಮಾದ ಎರಡನೇ ಭಾಗ ಬಿಡುಗಡೆಯಾಗುತ್ತಿದೆ. ಮೊದಲ ಭಾಗವನ್ನು ನೋಡಿರುವ ಪ್ರೇಕ್ಷಕರಿಗೆ ಪಾರ್ಟ್ 2 ಮತ್ತಷ್ಟು ಇಷ್ಟ ಆಗುತ್ತೆ. ಸಿಂಪಲ್ ಸುನಿ ನಿರ್ದೇಶಿಸಿದ ಈ ಸಿನಿಮಾ ಪ್ರೇಕ್ಷಕರಿಗೆ ಥಿಯೇಟರ್‌ನಲ್ಲಿ ಸಖತ್ ಕಿಕ್ ಕೊಡುತ್ತೆ.

Sharan Ashika Ranganath movie Avatara Purusha 2 Trailer Out

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾ ಬಗ್ಗೆ ಸಖತ್ ಖುಷಿಯಾಗಿದ್ದಾರೆ. ಈ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದೇ ಗೆಲ್ಲುತ್ತೆ ಅನ್ನುವ ವಿಶ್ವಾಸದಲ್ಲಿದ್ದಾರೆ. ಇನ್ನು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಶರಣ್ ಸಖತ್ ಖುಷಿಯಾಗಿದ್ದಾರೆ. ಇಂತಹದ್ದೇ ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು ಅನ್ನುವ ಆಸೆಯನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಸದ್ಯ ಪರಭಾಷೆಯಲ್ಲಿ ಬ್ಯುಸಿಯಾಗಿರುವ ಆಶಿಕಾ ರಂಗನಾಥ್‌ಗೂ 'ಅವತಾರ ಪುರುಷ 2' ವಿಶೇಷ ಸಿನಿಮಾ. ಪರಭಾಷೆಯಲ್ಲಿಯೂ ಈ ಸಿನಿಮಾ ಬಗ್ಗೆ ಕ್ರೇಜ್ ಇದೆ ಎಂದು ಆಶಿಕಾ ಟ್ರೈಲರ್ ರಿಲೀಸ್ ವೇಳೆ ಹೇಳಿಕೊಂಡಿದ್ದಾರೆ. ಶರಣ್ ಜೊತೆ ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯಾ ಸೇರಿದಂತೆ ಹಲವರು ನಟಿಸಿದ್ದಾರೆ.

More from Filmibeat

English summary
Sharan Ashika Ranganath movie Avatara Purusha 2 Trailer Out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X