For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ ಆಟೋಗ್ರಾಫ್ ಮನೆಯಲ್ಲಿ 'ಅವತಾರ್ ಪುರುಷ' ಶರಣ್

  |

  ಕನ್ನಡದ ಸೂಪರ್ ಹಿಟ್ ಕಿಚ್ಚ ಸುದೀಪ್ ಅಭಿನಯದ 'ಮೈ ಆಟೋಗ್ರಾಫ್' ಸಿನಿಮಾ ರಿಲೀಸ್ ಆಗಿ ಸುಮಾರು 13 ವರ್ಷಗಳೇ ಆಗಿವೆ. ಆದರೂ ಆಟೋಗ್ರಾಫ್ ಸಿನಿಮಾದ ಲತಿಕಾ ಪಾತ್ರವನ್ನು ಯಾರು ಮರೆಯಲು ಸಾದ್ಯವಿಲ್ಲ. ಈ ಪಾತ್ರದ ಜೊತೆಗೆ ಚಿತ್ರೀಕರಣವಾದಂತಹ ಕೇರಳದ ಆ ಸುಂದರ ಮನೆ ಕೂಡ ಎಲ್ಲರ ಕಣ್ಮನ ಸೆಳೆದಿತ್ತು.

  ಈಗ್ಯಾಕೆ ಈ ಮನೆಯ ವಿಷಯ ಅಂತೀರಾ, ಯಾಕೆಂದರೆ ಅಂದು ಕಿಚ್ಚ ಕಾಲಿಟ್ಟಿದ್ದ ಅದೇ ಮನೆಯಲ್ಲಿ ಇಂದು ಕನ್ನಡದ ಮತ್ತೊಂದು ಸಿನಿಮಾ ಚಿತ್ರೀಕರಣವಾಗುತ್ತಿದೆ. ಹೌದು, ಶರಣ್ ಅಭಿನಯದ 'ಅವತಾರ್ ಪುರುಷ' ಚಿತ್ರದ ಚಿತ್ರೀಕರಣ ಇದೇ ದೊಡ್ಡ ಮನೆಯಲ್ಲಿ ನಡೆಯುತ್ತಿದೆ.

  ಪ್ರೀತಿಯ ಶಾಲಾ ಶಿಕ್ಷಕರನ್ನು ಕಳೆದುಕೊಂಡ ನಟ ಶರಣ್

  ವಿಶೇಷ ಅಂದರೆ ಇದು ಕೇರಳದ 300 ವರ್ಷದ ಹಳೆಯ ಮನೆ. ಸುಮಾರು 100ಕ್ಕೂ ಹೆಚ್ಚು ಎಕರೆಯ ಜಾಗದಲ್ಲಿ ವಿಶಾಲವಾಗಿರುವ ಈ ಮನೆ ಮಾಲಿವುಡ್ ಇಂಡಸ್ಟ್ರಿಯ ಲಕ್ಕಿ ಮನೆ ಅಂತೆ. ಇಲ್ಲಿ ಮಲಯಾಳಂನ ಸಾಕಷ್ಟು ಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಕೇರಳದ ಸೂಪರ್ ಸ್ಟಾರ್ ಗಳಾದ ಮಮ್ಮುಟ್ಟಿ, ಮೋಹನ್ ಲಾಲ್ ಅವರ ಚಿತ್ರದ ಒಂದು ಭಾಗವನ್ನಾದರು ಈ ಮನೆಯಲ್ಲಿ ಚಿತ್ರೀಕರಿಸಬೇಕಂತೆ ಅಷ್ಟೂ ಲಕ್ಕಿ ಈ ಮನೆ.

  ಈ ಹಳೆಯ ಮನೆಯಲ್ಲಿ ಕನ್ನಡದ 'ಮೈ ಆಟೋಗ್ರಾಫ್' ಚಿತ್ರವನ್ನು ಮೊದಲ ಬಾರಿಗೆ ಸೆರೆಹಿಡಿಯಲಾಗಿತ್ತು. ಅದು ಬಿಟ್ಟರೆ ಈಗ ಎರಡನೇ ಬಾರಿಗೆ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಅವತಾರ್ ಪುರುಷ ಚಿತ್ರದ ಚಿತ್ರೀಕರಣ ಮಾಡಲಾಗುತ್ತಿದೆ.

  ಮತ್ತೆ ಶರಣ್ ಜೊತೆ ಚುಟು ಚುಟು ಅಂತಾರೆ ಆಶಿಕಾ

  ಅಂದ್ಹಾಗೆ 'ಅವತಾರ್ ಪುರುಷ' ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ಸಿನಿಮಾ. ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನ್ ಬಂಡವಾಳ ಹೂಡಿದ್ದಾರೆ. ಕೇರಳದ 300 ವರ್ಷದ ಈ ಹಳೆಯ ಮನೆಯಲ್ಲಿ ಮಾರ್ಚ್ 16ರಿಂದ ಪ್ರಾರಂಭವಾಗಿರುವ ಚಿತ್ರೀಕರಣ ಏಪ್ರಿಲ್ 5ರವರೆಗೂ ನಡೆಲಿದೆ.

  English summary
  Kannada actor Sharan starar 'Avatar Purush' movie shooting in 300 years oldest house in Kerala. 'My Autograph' is first Kannada movie shoot in this oldest house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X