For Quick Alerts
  ALLOW NOTIFICATIONS  
  For Daily Alerts

  'ಅವತಾರ್ ಪುರುಷ' ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

  |

  ಕನ್ನಡ ನಟ ಶರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಅವತಾರ್ ಪುರುಷ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು, ಯಾವಾಗ ತೆರೆಗೆ ಬರುತ್ತೆ ಎಂದು ಕಾಯುತ್ತಿದ್ದಾರೆ.

  ಇದೀಗ, ಬರ್ತಡೇ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಿದೆ. ಸ್ವತಃ ಅವತಾರ್ ಪುರುಷ ಚಿತ್ರತಂಡ ಪ್ರಕಟ ಮಾಡಿರುವ ಪ್ರಕಾರ, ಮೇ 28 ರಂದು ಸಿನಿಮಾ ಚಿತ್ರಮಂದಿರಕ್ಕೆ ಬರ್ತಿದೆ.

  ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!

  ಅವತಾರ್ ಪುರುಷ ಚಿತ್ರದ ಹೆಸರಿಗೆ ತಕ್ಕಂತೆ ಶರಣ್ ಈ ಚಿತ್ರದಲ್ಲಿ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಶರಣ್ ಅವರ ಗೆಟಪ್‌ಗಳ ಝಲಕ್ ಬಹಿರಂಗವಾಗಿದ್ದು, ಸಿನಿಮಾದ ಮೇಲೆ ಹೆಚ್ಚು ಭರವಸೆ ಹುಟ್ಟಿಕೊಂಡಿದೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ನಟಿ ಅಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟಿ ಸುಧಾರಾಣಿ, ಭವ್ಯ, ಸಾಯಿಕುಮಾರ್, ಸಾಧು ಕೋಕಿಲಾ, ಶ್ರೀನಗರ ಕಿಟ್ಟಿ, ಬಿ ಸುರೇಶ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

  ಶರಣ್ ಹೀರೋ ಆಗಲು ಹೊರಟಾಗ ಎದುರಾದ ಕಷ್ಟಗಳು ಒಂದೆರಡಲ್ಲ.!ಶರಣ್ ಹೀರೋ ಆಗಲು ಹೊರಟಾಗ ಎದುರಾದ ಕಷ್ಟಗಳು ಒಂದೆರಡಲ್ಲ.!

  ಮೇ ತಿಂಗಳಲ್ಲಿ ಶಿವಣ್ಣನ ಭಜರಂಗಿ 2 ಸಿನಿಮಾ ರಿಲೀಸ್ ಆಗಲಿದೆ. ಮೇ 14 ರಂದು ಭಜರಂಗಿ ಸೀಕ್ವೆಲ್ ತೆರೆಗೆ ಬರಲಿದೆ. ಇದಕ್ಕೂ ಮುಂಚೆ ಪೊಗರು, ರಾಬರ್ಟ್, ಕೋಟಿಗೊಬ್ಬ 3, ಯುವರತ್ನ, ಸಲಗ ಸಿನಿಮಾಗಳು ಬಿಡುಗಡೆಯಾಗಲಿದೆ.

  ವಿದೇಶದಲ್ಲಿ KGF 2 ಗೆ ಎದುರಾಯ್ತು ಅಡ್ಡಿ | Filmibeat Kannada
  English summary
  Kannada actor Sharan starrer Avatar Purusha movie release date announced. movie set to hit screens on may 28th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X