ಮತ್ತೊಮ್ಮೆ Rambo ಆದ ನಟ ಶರಣ್

By Bharath Kumar

ಸ್ಯಾಂಡಲ್ ವುಡ್ 'ಅಧ್ಯಕ್ಷ' ಶರಣ್ ಮತ್ತೊಮ್ಮೆ Rambo ಆಗಲಿದ್ದಾರೆ. 2012 ರಲ್ಲಿ ಬಿಡುಗಡೆಯಾಗಿದ್ದ 'Rambo' ಶರಣ್ ಅಭಿನಯದ 100ನೇ ಚಿತ್ರ ಹಾಗೂ ನಾಯಕನಾಗಿ ಕಾಣಿಸಿಕೊಂಡು ಮೊದಲ ಚಿತ್ರವಾಗಿದೆ. ಮೊದಲ ಸಿನಿಮಾ ಗೆಲುವು ತಂದುಕೊಟ್ಟ ಹಿನ್ನೆಲೆ ಈಗ ಎರಡನೇ ಬಾರಿ Rambo ಹಿಂದೆ ಬಿದ್ದಿದ್ದಾರೆ ನಟ ಶರಣ್.

ನಿರ್ದೇಶಕ ಅನಿಲ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಶರಣ್ ನಾಯಕನಾಗಿದ್ದು, ಈ ಚಿತ್ರಕ್ಕೆ 'Rambo-2' ಎಂದು ಟೈಟಲ್ ಇಡಲಾಗಿದೆ. ಈ ಚಿತ್ರವನ್ನ ಶರಣ್ ಹಾಗೂ ಅಟ್ಲಾಂಟಾ ನಾಗೇಂದ್ರ ಅವರು ಸೇರಿ ನಿರ್ಮಾಣ ಮಾಡಲಿದ್ದಾರೆ. ಈ ವಿಶೇಷ ಅಂದ್ರೆ ಇವರಿಬ್ಬರ ಜೋಡಿಯಲ್ಲೇ Rambo ಸಿನಿಮಾ ತಯಾರಾಗಿತ್ತು. ಈಗ 'Rambo-2' ಚಿತ್ರಕ್ಕೂ ಬಂಡವಾಳ ಹಾಕುತ್ತಿರುವುದು ವಿಶೇಷ.

Sharan's Next Movie Titled As Rambo 2

'Rambo-2' ಚಿತ್ರದ ಮತ್ತೊಂದು ಸ್ಪೆಷಾಲಿಟಿ ಅಂದ್ರೆ ಕನ್ನಡದ ಖ್ಯಾತ ತಂತ್ರಜ್ಞರು ಈ ಚಿತ್ರದ ನಿರ್ಮಾಣದಲ್ಲಿ ಕೈಜೋಡಿಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್, ಸಂಕಲನಕಾರ ಕೆ.ಎಂ ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಮತ್ತು ತರುಣ್ ಸುದೀರ್ ಸಹ-ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರಂತೆ.

ಸದ್ಯ, ಶರಣ್ ಅಭಿನಯದ 'ರಾಜ್-ವಿಷ್ಣು' ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಉಳಿದಂತೆ ಕಲಾವಿದರ ಹುಡುಕಾಟದಲ್ಲಿರುವ Rambo 2 ಆದಷ್ಟೂ ಬೇಗ ಸಿನಿಮಾ ಶುರು ಮಾಡಲಿದೆ. ಇದು Rambo ಚಿತ್ರದ ಮುಂದುವರೆದ ಭಾಗನ ಎಂಬುದು ಖಚಿತವಾಗಿಲ್ಲವಾದರೂ, ಟೈಟಲ್ ನಿಂದ ಇಂತಹದೊಂದು ಅನುಮಾನ ಮೂಡಿಸಿರುವುದಂತೂ ನಿಜಾ.

More from Filmibeat

English summary
Actor Sharan's film which is being directed by Anil Kumar has been titled as 'Rambo 2' and the film will be launched next week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X