ಚಿತ್ರೀಕರಣ ಮುಗಿಸಿ ತವರಿಗೆ ಬಂದ 'Rambo' ಶರಣ್
Rambo ಸಿನಿಮಾ ಮೂಲಕ ಇಡೀ ಕನ್ನಡ ಸಿನಿಮಾರಂಗವನ್ನೇ ನಕ್ಕುನಗಿಸಿದ ಶರಣ್ ಅಂಡ್ ಟೀಮ್ ಮತ್ತೆ ಬರ್ತಿದ್ದಾರೆ. Rambo ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ನಾಯಕನಾಗಿ ಶರಣ್ ಪರಿಚಯವಾಗಿದ್ರು. ಸಿನಿಮಾ ನೋಡಿದ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟು ಚಿತ್ರವನ್ನ ಸಕ್ಸಸ್ ಮಾಡಿದ್ರು.
ಹೀರೋ ಆಗಿದ್ದ ಸಿನಿಮಾದ ಟೈಟಲ್ ಇಟ್ಟುಕೊಂಡು ನಟ ಶರಣ್ ನಿರ್ಮಾಣದಲ್ಲಿ ಸೆಟ್ಟೇರಿದ್ದ ರ್ಯಾಂಬೋ-2 ಚಿತ್ರದ ಶೂಟಿಂಗ್ ಮುಗಿಸಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. 'ದಿಲ್ ವಾಲ', 'ಕೃಷ್ಣ ರುಕ್ಕು' ಸಿನಿಮಾ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಅನಿಲ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ರ್ಯಾಂಬೋ ಚಿತ್ರಕ್ಕೆ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ನಿರ್ವಹಿಸಿದ್ದಾರೆ. 'ಲಡ್ಡು' ಸಿನಿಮಾ ಹೌಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಕಾಮಿಡಿ ಕಿಂಗ್ ಶರಣ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ರ್ಯಾಂಬೋ ಚಿತ್ರಕ್ಕೂ ರ್ಯಾಂಬೋ2 ಸಿನಿಮಾಗೂ ಟೈಟಲ್ ಅಷ್ಟೇ ಸಾಮ್ಯತೆ ಇದ್ದು ಹೊಸ ಕತೆಯೊಂದಿಗೆ ಬರ್ತಿದ್ದಾರೆ ತರುಣ್ ಮತ್ತು ತಂಡ.

ಬೆಂಗಳೂರು, ಬಿಜಾಪುರ, ಗೋವಾ, ರಾಮೇಶ್ವರ ಹಾಗೂ ರಾಜಸ್ಥಾನದಲ್ಲಿ ಚಿತ್ರೀಕರಣ ಮುಗಿಸಿ ಬಂದಿರುವ ರ್ಯಾಂಬೋ ಚಿತ್ರತಂಡ ಹಾಡುಗಳ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ. ಆರು ವರ್ಷದ ನಂತರ ಮತ್ತೆ ಒಂದಾಗಿರುವ Rambo ತಂಡ ಮುಂದಿನ ವರ್ಷ ಕನ್ನಡ ಸಿನಿಮಾ ರಸಿಕರನ್ನ ನಗೆಗಡಲಲ್ಲಿ ತೇಲಿಸೋದು ಗ್ಯಾರೆಂಟಿ .


Click it and Unblock the Notifications











