ಅಂದು ಆರ್ಕೆಸ್ಟ್ರಾದಲ್ಲಿದ್ದ ಯುವಕ ಇಂದು ಸ್ಯಾಂಡಲ್ ವುಡ್ ಸ್ಟಾರ್ ನಟ
Recommended Video
ಚಿತ್ರರಂಗಕ್ಕೆ ಬರಬೇಕು ಎಂದುಕೊಂಡವರೆಲ್ಲಾ ಚಿತ್ರರಂಗದ ಹಿನ್ನೆಲೆ ಹೊಂದಿರುವ ಕುಟುಂಬದಿಂದಲೇ ಬಂದಿರಲ್ಲ. ಯಾವುದೇ ಹಿನ್ನೆಲೆ ಇಲ್ಲದೇ ಬಂದಿರುವವರು ಕೂಡ ಇದ್ದಾರೆ. ಇನ್ನು ಕೆಲವರು ಸಿನಿಮಾ ಇಂಡಸ್ಟ್ರಿಯ ನಂಟು ಹೊಂದಿದ್ದರು ಅವಕಾಶಕ್ಕಾಗಿ ಸಿಕ್ಕಾಪಟ್ಟೆ ಕಷ್ಟಪಟ್ಟಿರುತ್ತಾರೆ.
ಹೀಗೆ, ಬಹಳ ಕಷ್ಟಪಟ್ಟು ಬಂದ ಕಲಾವಿದರಲ್ಲಿ ನಟ ಶರಣ್ ಕೂಡ ಒಬ್ಬರು. ಶರಣ್ ಇಂದು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಮತ್ತು ಹೆಚ್ಚು ಸಂಭಾವನೆ ಪಡೆಯುವ ನಟ. ಇದೇ ನಟ ಒಂದು ಸಮಯದಲ್ಲಿ ಮದುವೆ, ಗಣೇಶ ಹಬ್ಬ, ಅಣ್ಣಮ್ಮನ ಉತ್ಸವ ಹೀಗೆ ಆರ್ಕೆಸ್ಟ್ರಾಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕ.
ಸಿನಿಮಾರಂಗದಲ್ಲಿ ನೆಲೆ ನಿಲ್ಲಬೇಕು ಎಂಬ ಉದ್ದೇಶದಿಂದ ಒಳ್ಳೆಯ ಅವಕ್ಕಾಗಿ ಕಾಯುತ್ತಿದ್ದ ಶರಣ್, ಬದುಕಿಗಾಗಿ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಆರ್ಕೆಸ್ಟ್ರಾ ಜೀವನ ಹೇಗಿತ್ತು ಎಂಬುದಕ್ಕೆ ಹಳೆಯ ಫೋಟೋವೊಂದನ್ನ ಶೇರ್ ಮಾಡಿ ಸ್ಮರಿಸಿಕೊಂಡಿದ್ದಾರೆ.

ಆರ್ಕೆಸ್ಟ್ರಾವೊಂದರಲ್ಲಿ ಟೆಕ್ನಿಷಿಯನ್ ಆಗಿ ಕಾಣಿಸಿಕೊಂಡಿರುವ ಶರಣ್ ಟ್ವಿಟ್ಟರ್ ನಲ್ಲಿ ಆ ಫೋಟೋ ಹಂಚಿಕೊಂಡು ''ನನ್ನ ಆರ್ಕೆಸ್ಟ್ರಾ ದಿನಗಳು....ಹೊಸ ಹಾಡಿನ ಅಭ್ಯಾಸ...ಮದುವೆ ಅಣ್ಣಮ್ಮನ ಉತ್ಸವದ ಕಾರ್ಯಕ್ರಮಗಳು....ಮದುವೆ ಊಟ, ತಡರಾತ್ರಿ ಪ್ರಯಾಣ...ದಿನಗಳು ಕಷ್ಟದಲ್ಲಿದ್ದವು ಆದರೆ ಜೀವನವಲ್ಲ...ಯಾಕಂದ್ರೆ ನಮ್ಮವರ ಜೊತೆ ಸಮಯ ಕಳೆಯುವ ಅವಕಾಶ ಇತ್ತು. (ಮೊಬೈಲ್ ಗಳು ಇರಲಿಲ್ಲ)..ನಿಮ್ಮೊಂದಿಗೆ ಈ ಫೋಟೋ ಹಂಚಿಕೊಳ್ಳಬೇಕು ಎನಿಸಿತು'' ಎಂದು ಬರೆದುಕೊಂಡಿದ್ದಾರೆ.
Rambo ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಟನಾಗಿ ಪ್ರವೇಶ ಮಾಡಿದ ಶರಣ್, ವಿಕ್ಟರಿ, ಅಧ್ಯಕ್ಷ, ಜಯಲಲಿತಾ, ರಾಜ ರಾಜೇಂದ್ರ, ಬುಲೆಟ್ ಬಸ್ಯಾ, ಜೈ ಮಾರುತಿ 800, ನಟರಾಜ ಸರ್ವೀಸ್, ರಾಜ್ ವಿಷ್ಣು, ಸತ್ಯ ಹರಿಶ್ಚಂದ್ರ, ವಿಕ್ಟರಿ 2, Rambo 2 ಅಂತಹ ಚಿತ್ರಗಳನ್ನ ನೀಡಿದರು.
ಪ್ರಸ್ತುತ 'ಅಧ್ಯಕ್ಷ ಇನ್ ಅಮೆರಿಕಾ' ಚಿತ್ರದಲ್ಲಿ ನಟಿಸುತ್ತಿರುವ ಶರಣ್ ಅದರ ಜೊತೆಗಿನ ಅವತಾರ್ ಪುರುಷ ಸಿನಿಮಾ ಕೂಡ ಮಾಡುತ್ತಿದ್ದಾರೆ.


Click it and Unblock the Notifications











