ಜುಲೈಯಿಂದ ಅಮೆರಿಕದಲ್ಲಿ ಕನ್ನಡ ಅಧ್ಯಕ್ಷನ ದರ್ಬಾರ್?

ಸ್ಯಾಂಡಲ್ ವುಡ್ ನ ಅಧ್ಯಕ್ಷ, ಕಾಮಿಡಿ ಕಿಂಗ್ ಶರಣ್ ಅಭಿನಯದ ಬಹು ನಿರೀಕ್ಷೆಯ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಮುಗಿಸಿ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ತೊಡಗಿಕೊಂಡಿದೆ ಚಿತ್ರತಂಡ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶರಣ್ ಅಮೆರಿಕ ಸೇರಿ ಅನೇಕ ದಿನಗಳೆ ಆಗಿತ್ತು.

ಸ್ಯಾಂಡಲ್ ವುಡ್ ನಲ್ಲಿ ಅಧ್ಯಕ್ಷನಾಗಿ ಮೆರೆದ ಶರಣ್ ಈಗ ಅಮೆರಿಕದಲ್ಲಿ ದರ್ಬಾರ್ ಮಾಡುತ್ತಿದ್ದಾರೆ. ಅಂದ್ಹಾಗೆ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರ ಜುಲೈನಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ ಎಂದು ಹೇಳಲಾಗಿದೆ. ಈಗಾಗಲೆ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆಯಂತೆ ಅಧ್ಯಕ್ಷ ಟೀಂ.

ಅಂದ್ಹಾಗೆ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟೈಟಲ್ ಗೆ ತಕ್ಕದಾಗಿ ಬಹುತೇಕ ಚಿತ್ರೀಕರಣ ಅಮೆರಿಕದಲ್ಲಿ ಮಾಡಿ ಮುಗಿಸಿದೆ ಚಿತ್ರತಂಡ. ಹಾಗಾಗಿ ಚಿತ್ರ ನೋಡಿದ ಪ್ರೇಕ್ಷಕರಿಗೆ ಅಮೆರಿಕ ಸುತ್ತಿದ ಅನುಭವ ಆಗುವುದರಲ್ಲಿ ಯಾವುದೆ ಅನುಮಾನವಿಲ್ಲ.

Sharan starrer Adhyaksha In America film all set be release in July

ವಿಶೇಷ ಅಂದ್ರೆ ಚಿತ್ರದಲ್ಲಿ ಶರಣ್ ಗೆ ನಾಯಕಿಯಾಗಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಶರಣ್ ಮತ್ತು ರಾಗಿಣಿ ಒಟ್ಟಿಗೆ ಕಾಣಿಸಿಕೊಂಡಿದ್ದು ಇಬ್ಬರ ಕಾಂಬಿನೇಷನ್ ನೋಡಲು ಚಿತ್ರಪ್ರಿಯರು ಕಾತುರರಾಗಿದ್ದಾರೆ.

ಸದ್ಯ ಚಿತ್ರೀಕರಣ ಮುಗಿಸಿ ರಿ ರೆಕಾರ್ಡಿಂಗ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರ, ಸಧ್ಯದಲ್ಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೊದಲ ಬಾರಿಗೆ ಶರಣ್ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ.

More from Filmibeat

English summary
Kannada actor Sharan starrer 'Adhyaksha In America' film all set be release in July. This movie is directed by Yoganand Muddhan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X