For Quick Alerts
  ALLOW NOTIFICATIONS  
  For Daily Alerts

  ಖೋ ಖೋ ಖದರ್.. 'ಗುರುಶಿಷ್ಯರು' ಟ್ರೈಲರ್ ಸೂಪರ್!

  |

  ಸೂಪರ್ ಹಿಟ್ 'ಗುರು ಶಿಷ್ಯರು' ಸಿನಿಮಾ ಟೈಟಲ್‌ನಲ್ಲಿ ನಿರ್ಮಾಣವಾಗಿರೋ ಹೊಸ ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ. ಶಿಕ್ಷಕರ ದಿನಾಚರಣೆಯ ದಿನವೇ ಚಿತ್ರದ ಅಫೀಷಿಯಲ್ ಟ್ರೈಲರ್ ರಿಲೀಸ್ ಆಗಿದ್ದು ಕನ್ನಡ ಸಿನಿರಸಿಕರ ಮನ ಗೆದ್ದಿದೆ. ಚಿತ್ರದಲ್ಲಿ ಶರಣ್ ಖೋ ಖೋ ಕೋಚ್ ಪಾತ್ರದಲ್ಲಿ ನಟಿಸ್ತಿದ್ದು, 6 ಜನ ಸ್ಟಾರ್ಸ್ ಮಕ್ಕಳು ತಾರಾಗಣದಲ್ಲಿರುವುದು ವಿಶೇಷ.

  ಜಡೇಶ್ ಕೆ. ಹಂಪಿ ನಿರ್ದೇಶನದ ಸ್ಪೋರ್ಟ್ಸ್‌ ಡ್ರಾಮಾ 'ಗುರು ಶಿಷ್ಯರು'. ಖೋ ಖೋ ಆಟ ಚಿತ್ರದ ಕೇಂದ್ರಬಿಂದು. ಬೆಂಗಳೂರಿನಿಂದ ಬೆಟ್ಟದಪುರದ ಸರ್ಕಾರಿ ಶಾಲೆಗೆ ದೈಹಿಕ ಶಿಕ್ಷಕನಾಗಿ ಹೋಗುವ ಮೇಷ್ಟ್ರರ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. 1995ರ ಕಾಲಘಟ್ಟದಲ್ಲಿ ಮೈಸೂರು ಭಾಗದ ಹಳ್ಳಿಯೊಂದರಲ್ಲಿ ಇಡೀ ಸಿನಿಮಾ ಕಥೆ ಸಾಗುತ್ತದೆ. ಶಾಲೆಯ ಶಿಷ್ಯರು ಹಾಗೂ ಹಳ್ಳಿಮೇಷ್ಟ್ರ ನಡುವಿನ ಭಾವನಾತ್ಮಕ ಕಥೆಯನ್ನು ನೋಡಬಹುದು. ಲಡ್ಡು ಸಿನಿಮಾ ಹೌಸ್, ತರುಣ್ ಸುಧೀರ್ ಕ್ರಿಯೇಟಿವ್ಸ್ ಬ್ಯಾನರ್‌ನಲ್ಲಿ 'ಗುರು ಶಿಷ್ಯರು' ಸಿನಿಮಾ ನಿರ್ಮಾಣವಾಗಿದೆ.

  ದ್ವಾರಕೀಶ್ ನಿರ್ಮಿಸಿ ನಟಿಸಿದ್ದ 'ಗುರು ಶಿಷ್ಯರು' 80ರ ದಶಕದಲ್ಲಿ ದಾಖಲೆ ಬರೆದಿತ್ತು. ಅದೇ ಸಿನಿಮಾ ಟೈಟಲ್‌ನಲ್ಲಿ ಹೊಸ ಸಿನಿಮಾ ಮೂಡಿ ಬರ್ತಿದೆ. ತುರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಶರಣ್‌ ಜೊತೆ ಸೇರಿ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಖತ್ ಸದ್ದು ಮಾಡ್ತಿದ್ದು, ಸಿನಿಮಾ ನೋಡಲೇಬೇಕು ಎನ್ನುವ ಕುತೂಹಲ ಮೂಡಿಸ್ತಿದೆ.

  ಹಳ್ಳಿಮೇಷ್ಟ್ರ ಏಳುಬೀಳಿನ ಕಥೆ

  ಹಳ್ಳಿಮೇಷ್ಟ್ರ ಏಳುಬೀಳಿನ ಕಥೆ

  ಮೈಸೂರಿನಿಂದ ಹಳ್ಳಿಯೊಂದಕ್ಕೆ ಚಿತ್ರದ ನಾಯಕ ಪೀಟಿ ಮಾಸ್ತರ್ ಆಗಿ ಹೋಗುತ್ತಾನೆ. ಆತ ಊರಿಗೆ ಹೋದಮೇಲೆ ಏನೆಲ್ಲಾ ಘಟನೆಗಳು ನಡೆಯುತ್ತದೆ. ಆ ಘಟನೆಗಳಲ್ಲಿ ಆತ ಹೇಗೆ ಭಾಗಿಯಾಗುತ್ತಾ ಹೋಗುತ್ತಾನೆ ಎನ್ನುವುದನ್ನು 'ಗುರು ಶಿಷ್ಯರು' ಚಿತ್ರದಲ್ಲಿ ಹೇಳಲಾಗ್ತಿದೆ. ಚೂರಿ ತಮಾಷೆ, ಒಂಚೂರು ಭಾವುಕ ಅಂಶಗಳನ್ನು ಸೇರಿಸಿ ಜಡೇಶ್ ಕೆ. ಹಂಪಿ ಕಂಪ್ಲೀಟ್ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ ಕಟ್ಟಿಕೊಟ್ಟಿದ್ದಾರೆ. ಟ್ರೈಲರ್ ಕೂಡ ಅದನ್ನೇ ಸಾರಿ ಸಾರಿ ಹೇಳುತ್ತಿದೆ.

  ಮೂವರು ಸಂಸಾರಸ್ಥರ 'ಬ್ಯಾಚುಲರ್ ಪಾರ್ಟಿ'ಗೆ ರಕ್ಷಿತ್ ಶೆಟ್ಟಿನೇ ಸ್ಪಾನ್ಸರ್!ಮೂವರು ಸಂಸಾರಸ್ಥರ 'ಬ್ಯಾಚುಲರ್ ಪಾರ್ಟಿ'ಗೆ ರಕ್ಷಿತ್ ಶೆಟ್ಟಿನೇ ಸ್ಪಾನ್ಸರ್!

  ಖೋ ಕೋ ಆಟದ ಕಥಾನಕ

  ಖೋ ಕೋ ಆಟದ ಕಥಾನಕ

  ಪೀಟಿ ಮಾಸ್ತರ್ ಆಗಿ ಹಳ್ಳಿಗೆ ಹೋಗುವ ನಾಯಕ ಹಳ್ಳಿಯ ಶಾಲಾ ಮಕ್ಕಳ ಖೋ ಖೋ ತಂಡ ಕಟ್ಟಿಕೊಂಡು ತಾಲೂಕು ಮಟ್ಟದ ಪಂದ್ಯಗಳಲ್ಲಿ ಭಾಗವಹಿಸುವುದನ್ನು ನೋಡಬಹುದು. ತಮಾಷೆಯಾಗಿ ಶುರುವಾಗುವ ಕಥೆ ನಿಧಾನವಾಗಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಶಾಲೆಗೆ, ಊರಿಗೆ ಸಂಕಷ್ಟ ಎದುರಾದಾಗ ಮೇಷ್ಟ್ರು ಶಿಷ್ಯರ ಜೊತೆ ಸೇರಿ ಹೇಗೆ ಅದನ್ನು ಬಗೆಹರಿಸುತ್ತಾನೆ, ಖೋ ಖೋ ಆಟ ಅದಕ್ಕೆ ಹೇಗೆ ದಾಳವಾಗುತ್ತದೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ನೆಗೆಟಿವ್ ರೋಲ್‌ನಲ್ಲಿ ಅಪೂರ್ವ ಕಾಸರವಳ್ಳಿ ನಟಿಸಿದ್ದಾರೆ.

  ಶಿಷ್ಯರ ಬಳಗದಲ್ಲಿ ಸ್ಟಾರ್ ಕಿಡ್ಸ್

  ಶಿಷ್ಯರ ಬಳಗದಲ್ಲಿ ಸ್ಟಾರ್ ಕಿಡ್ಸ್

  'ಗುರು ಶಿಷ್ಯರು' ಚಿತ್ರದ ವಿಶೇಷ ಅಂದರೆ 13 ಜನ ಖೋ ಖೋ ತಂಡದ ಸದಸ್ಯರಲ್ಲಿ 6 ಜನ ಸ್ಟಾರ್‌ಗಳ ಮಕ್ಕಳು ಬಣ್ಣ ಹಚ್ಚಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್ ಮಗ ಏಕಾಂತ್, ಬುಲೆಟ್ ಪ್ರಕಾಶ್ ಮಗ ರಕ್ಷಕ್, ಶಾಸಕ ರಾಜು ಗೌಡ ಪುತ್ರ ಮಣಿಕಂಠ ನಾಯಕ್, ರವಿಶಂಕರ್‌ ಗೌಡ ಮಗ ಸೂರ್ಯ, ನವೀನ್ ಕೃಷ್ಣ ಮಗ ಹರ್ಷಿತ್ ಬಣ್ಣ ಹಚ್ಚಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ಶಿಷ್ಯರ ದರ್ಬಾರ್ ಕೂಡ ಜೋರಾಗಿರೋದನ್ನು ನೋಡಬಹುದು. 90ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ.

  ಹಳ್ಳಿಮೇಷ್ಟ್ರ ಜೊತೆ ಸೂಜಿ ಪ್ರೇಮರಾಗ

  ಹಳ್ಳಿಮೇಷ್ಟ್ರ ಜೊತೆ ಸೂಜಿ ಪ್ರೇಮರಾಗ

  ನಾಯಕಿ ನಿಶ್ವಿಕಾ ನಾಯ್ಡು ಚಿತ್ರದಲ್ಲಿ ಹಾಲು ಮಾರುವ ಹಳ್ಳಿ ಹುಡುಗಿ ಸೂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಾಯಕಿ ನಾಯಕಿಯ ಹಿಂದೆ ಬಳೂವು ಕಥೆಗಳೇ ಹೆಚ್ಚು. ಆದರೆ ಇಲ್ಲಿ ಸೂಜಿಗೆ ಮೊದಲು ಹಳ್ಳಿಮೇಷ್ಟ್ರ ಮೇಲೆ ಲವ್ವಾಗುತ್ತದೆ. ಇನ್ನು ಚಿತ್ರದ ಕೆಲ ಸನ್ನಿವೇಶಗಳು ಕ್ರೇಜಿಸ್ಟಾರ್ ರವಿಚಂದ್ರನ್‌ ನಟನೆಯ ಹಳ್ಳಿಮೇಷ್ಟ್ರು ಚಿತ್ರವನ್ನು ನೆನಪಿಸುವಂತಿದೆ. ಈಗಾಗಲೇ 'ಆಣೆ ಮಾಡಿ ಹೇಳುತ್ತೀನಿ' ಸಾಂಗ್ ಸೂಪರ್ ಹಿಟ್ ಆಗಿದೆ.

  Recommended Video

  Kantara Trailer Review | ಹೊಂಬಾಳೆ ಫಿಲ್ಮ್ಸ್‌ನ ಮತ್ತೊಂದು ಮೈಲಿಗಲ್ಲಾಗುತ್ತಾ 'ಕಾಂತಾರ' | Rishab Shetty
  ಸೆಪ್ಟೆಂಬರ್ 23ಕ್ಕೆ ಸೆಪ್ಟೆಂಬರ್ 23ಕ್ಕೆ ರಿಲೀಸ್

  ಸೆಪ್ಟೆಂಬರ್ 23ಕ್ಕೆ ಸೆಪ್ಟೆಂಬರ್ 23ಕ್ಕೆ ರಿಲೀಸ್

  ದೇಶದಲ್ಲಿ ಕ್ರಿಕೆಟ್‌ ಸೇರಿದಂತೆ ಬೇರೆ ಕ್ರೀಡೆಗಳಿಗೆ ಸಿಕ್ಕಿರುವ ಪ್ರಾಮುಖ್ಯತೆ ದೇಸಿ ಕ್ರೀಡೆ ಖೋ ಖೋಗೆ ಮಾತ್ರ ಸಿಕ್ಕಿಲ್ಲ. ಈ ಬಗ್ಗೆ ಟ್ರೈಲರ್ ಕೊನೆಯಲ್ಲಿ ಸಂಭಾಷಣೆಕಾರ ಮಾಸ್ತಿ ಒಂದೊಳ್ಳೆ ಡೈಲಾಗ್ ಕೂಡ ಬರೆದಿದ್ದಾರೆ. ಇನ್ನು ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆ ಕ್ರೀಡಾಕೂಟದಲ್ಲಿ ನಡೆಯುವ ತಮಾಷೆಯ ಸನ್ನಿವೇಶಗಳನ್ನು ಬಹಳ ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಸೆಪ್ಟೆಂಬರ್ 23ಕ್ಕೆ ಸಿಲ್ವರ್‌ ಸ್ಕ್ರೀನ್‌ ಮೇಲೆ 'ಗುರು ಶಿಷ್ಯರ' ಹಾವಳಿ ಶುರುವಾಗಲಿದೆ.

  English summary
  Sharan Starrer Guru Shishyaru Trailer Out. Know More
  Monday, September 5, 2022, 14:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X