»   » ಯುಗಾದಿ ಹಬ್ಬದಂದು ಮಾರುತಿಗೆ 'ಜೈ' ಅಂದುಬಿಡಿ.!

ಯುಗಾದಿ ಹಬ್ಬದಂದು ಮಾರುತಿಗೆ 'ಜೈ' ಅಂದುಬಿಡಿ.!

Posted By:
Subscribe to Filmibeat Kannada

'ಭಜರಂಗಿ', 'ವಜ್ರಕಾಯ' ಸೇರಿದಂತೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡಿರುವ ನೃತ್ಯ ಸಂಯೋಜಕ ಕಮ್ ನಿರ್ದೇಶಕ ಹರ್ಷ ಇದೀಗ 'ಜೈ ಮಾರುತಿ 800' ಮೂಲಕ ಮತ್ತೊಮ್ಮೆ ಶ್ರೀ ವೀರಾಂಜಿನೇಯನ ಸ್ಮರಣೆ ಮಾಡುತ್ತಾ ಈ ವಾರ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

'ಬುಲೆಟ್ ಬಸ್ಯಾ' ಚಿತ್ರದ ನಂತರ ಕಾಮಿಡಿ ಖಿಲಾಡಿ ಶರಣ್ ಅಭಿನಯಿಸಿರುವ, ಹರ್ಷ ನಿರ್ದೇಶನದ ಸಿನಿಮಾ 'ಜೈ ಮಾರುತಿ 800' ಈ ವಾರ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ['ಜೈ ಮಾರುತಿ 800' ಫುಲ್ ಕಾಮಿಡಿ ಸಿನಿಮಾ: ಎ ಹರ್ಷ]

ಶರಣ್ ಜೊತೆ ಶ್ರುತಿ ಹರಿಹರನ್, ಶುಭಾ ಪುಂಜ ಅಭಿನಯಿಸಿರುವ 'ಜೈ ಮಾರುತಿ 800' ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್ ಟೇನರ್.


ಹೇಳಿ ಕೇಳಿ ಇದು ಶರಣ್ ಸಿನಿಮಾ. ಅಂದ್ಮೇಲೆ, ಚಿತ್ರದಲ್ಲಿ ಬೇಜಾನ್ ಕಾಮಿಡಿ ಇರಲೇಬೇಕು. ನಿಮ್ಮನ್ನೆಲ್ಲಾ ನಕ್ಕು ನಲಿಸುವುದಕ್ಕೆ ಅಂತಲೇ ಚಿತ್ರದಲ್ಲಿ ಅರುಣ್ ಸಾಗರ್ ಸ್ಪೆಷಲ್ ಗೆಟಪ್ ಹಾಕಿದ್ದಾರೆ. ಸಾಧು ಕೋಕಿಲ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈ ಶುಕ್ರವಾರ, ಯುಗಾದಿ ಹಬ್ಬದ ಆಚರಣೆ ಜೊತೆಗೆ ನಗೆಗಡಲಲ್ಲಿ ತೇಲಬೇಕು ಅಂತಿದ್ರೆ, 'ಜೈ ಮಾರುತಿ 800' ಚಿತ್ರವನ್ನ ತಪ್ಪದೇ ವೀಕ್ಷಿಸಿ....

'ಜೈ ಮಾರುತಿ 800' ಚಿತ್ರತಂಡದ ಫೋಟೋ ಆಲ್ಬಂ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

-
-
-
-
-
-
ಯುಗಾದಿ ಹಬ್ಬದಂದು ಮಾರುತಿಗೆ 'ಜೈ' ಅಂದುಬಿಡಿ.!

ಯುಗಾದಿ ಹಬ್ಬದಂದು ಮಾರುತಿಗೆ 'ಜೈ' ಅಂದುಬಿಡಿ.!

-
-
-
-
-
-
-
-
-
-
-
-
-
-
-
English summary
Kannada Actor Sharan starrer 'Jai Maruthi 800' is all set to release on April 8th. The film features Kannada Actress Shubha Punja and Shruthi Hariharan. 'Jai Maruthi 800' is directed by A.Harsha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada