ಶರಣ್-ಪವನ್ 'ನಟರಾಜ ಸರ್ವೀಸ್' ಶುರುವಾಯ್ತು ಗುರು.!
ನಿರ್ದೇಶಕ ಪವನ್ ಒಡೆಯರ್ ಫುಲ್ ಝೂಮ್ ನಲ್ಲಿದ್ದಾರೆ. 'ರಣವಿಕ್ರಮ' ಹಿಟ್ ಆದ ಬಳಿಕ 'ಜೆಸ್ಸಿ' ಸಿನಿಮಾ ಕೈಗೆತ್ತಿಕೊಂಡ ಪವನ್ ಒಡೆಯರ್ ಈಗ 'ನಟರಾಜ ಸರ್ವೀಸ್' ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
ಅಂದುಕೊಂಡಂತೆ ನಿರ್ದಿಷ್ಟ ದಿನಾಂಕದ ಒಳಗೆ 'ಜೆಸ್ಸಿ' ಸಿನಿಮಾ ಕಂಪ್ಲೀಟ್ ಮಾಡಿರುವ ಪವನ್ ಒಡೆಯರ್ ನಿನ್ನೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ 'ನಟರಾಜ ಸರ್ವೀಸ್' ಚಿತ್ರದ ಮುಹೂರ್ತವನ್ನ ಸರಳವಾಗಿ ನೆರವೇರಿಸಿದ್ದಾರೆ.

ವಿಜಯದಶಮಿಯ ಶುಭದಿನದಂದು 'ನಟರಾಜ ಸರ್ವೀಸ್' ಚಿತ್ರದ ಮುಹೂರ್ತ ನಡೆದಿದೆ. ನಾಯಕ ಶರಣ್ ಜೊತೆ ಇಲ್ಲಿ ರೋಮ್ಯಾನ್ಸ್ ಮಾಡುವುದಕ್ಕೆ ತಯಾರಾಗಿರುವುದು ನಟಿ ಮಯೂರಿ. ['ನಟರಾಜ ಸರ್ವೀಸ್' ಸ್ಟೇಷನ್ ನಲ್ಲಿ ಶರಣ್ ಜೊತೆ ಮಯೂರಿ]
ಈ ಹಿಂದೆ ಸುದ್ದಿಯಾದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ನಟರಾಜ ಸರ್ವೀಸ್' ಚಿತ್ರದ ನಿರ್ಮಾಪಕ ಅಲ್ಲ. ಈ ಚಿತ್ರವನ್ನ ಪುನೀತ್ ರಾಜ್ ಕುಮಾರ್ ಅರ್ಪಿಸುತ್ತಿದ್ದಾರೆ ಅಷ್ಟೆ. 'ನಟರಾಜ ಸರ್ವೀಸ್'ಗೆ ಬಂಡವಾಳ ಹಾಕುತ್ತಿರುವುದು ಅಪ್ಪು ಆಪ್ತ ಎನ್.ಎಸ್.ರಾಜ್ ಕುಮಾರ್. [ಶರಣ್ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ನಿರ್ಮಾಪಕ..!]

ಹಾಗ್ನೋಡಿದ್ರೆ, 'ನಟರಾಜ ಸರ್ವೀಸ್' ಎರಡ್ಮೂರು ವರ್ಷಗಳ ಹಿಂದಿನ ಕಥೆ. ಸೂಕ್ತ ಹೀರೋ ಸಿಗದ ಕಾರಣ, ಇದನ್ನ ಡ್ರಾಪ್ ಮಾಡಿ ಪವನ್ ಒಡೆಯರ್ ಯಶ್ ಗಾಗಿ 'ಗೂಗ್ಲಿ' ಬಾಲ್ ಹಾಕಿದ್ರು. [ನಿರ್ದೇಶಕ ಪವನ್ ಒಡೆಯರ್ ಮುಂದಿನ ಚಿತ್ರ 'ನಟರಾಜ ಸರ್ವೀಸ್']
ಇದೀಗ ಶರಣ್ ಡೇಟ್ಸ್ ಸಿಕ್ಕಿರುವ ಕಾರಣ 'ನಟರಾಜ ಸರ್ವೀಸ್' ಶುರುವಾಗಿದೆ. ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.


Click it and Unblock the Notifications











