»   » ತಮಿಳು-ಹಿಂದಿಯಲ್ಲಿ ಶರಣ್ ಚಿತ್ರಕ್ಕೆ ಡಿಮ್ಯಾಂಡ್..!

ತಮಿಳು-ಹಿಂದಿಯಲ್ಲಿ ಶರಣ್ ಚಿತ್ರಕ್ಕೆ ಡಿಮ್ಯಾಂಡ್..!

Posted By:
Subscribe to Filmibeat Kannada

ಕಾಮಿಡಿ ಖಿಲಾಡಿ ಶರಣ್ ಹುಟ್ಟುಹಬ್ಬದಂದು ಈ ವರ್ಷ ಒಂದು ಗಿಫ್ಟ್ ಸಿಕ್ಕಿತ್ತು. ಅತಿಯಾದ ನಿರೀಕ್ಷೆ, ಕುತೂಹಲ, ಕಾತರಗಳಿಂದ ತೆರೆಗೆ ಅಪ್ಪಳಿಸಿದ 'ರಾಜ ರಾಜೇಂದ್ರ' ಈಗೆಲ್ಲೂ ಪತ್ತೆ ಇಲ್ಲ.

ಫಸ್ಟ್ ಡೇ ಫಸ್ಟ್ ಶೋ ನೋಡಿ ಬಂದ ಪ್ರೇಕ್ಷಕರ ಮೊಗದಲ್ಲಿ ಮಂದಹಾಸ ಇರ್ಲಿಲ್ಲ. ಕಲೆಕ್ಷನ್ ವಿಷಯದಲ್ಲೂ 'ರಾಜ ರಾಜೇಂದ್ರ' ಡಲ್ ಆಯ್ತು. ಆದರೇನಂತೆ, 'ರಾಜ ರಾಜೇಂದ್ರ'ನಿಗೆ ಬಹುಪರಾಕ್ ಹೇಳೋಕೆ ತಮಿಳು ಮತ್ತು ಹಿಂದಿ ಪ್ರಿಯರು ರೆಡಿಯಾಗಲಿದ್ದಾರೆ.! [ಶರಣ್ 'ರಾಜ ರಾಜೇಂದ್ರ'ನ ಬಗ್ಗೆ ಯಾರು ಏನೆಂದರು? ]


Sharan starrer Raja Rajendra to be remade in Tamil and Hindi

ಕನ್ನಡಿಗರಿಗೆ ಇಷ್ಟವಾಗದ 'ರಾಜ ರಾಜೇಂದ್ರ' ಇದೀಗ ಕಾಲಿವುಡ್ ಮತ್ತು ಬಾಲಿವುಡ್ ಸಿನಿ ಪ್ರಿಯರನ್ನ ರಂಜಿಸುವುದಕ್ಕೆ ಸಿದ್ದತೆ ನಡೆಯುತ್ತಿದೆ. ಹಾರರ್ ಕಾಮಿಡಿ ಹೊಂದಿರುವ 'ರಾಜ ರಾಜೇಂದ್ರ' ಚಿತ್ರವನ್ನ ನಿರ್ಮಾಪಕ ಉದಯ್.ಕೆ.ಮೆಹ್ತಾ ಮತ್ತು ನಿರ್ದೇಶಕ ಪಿ.ಕುಮಾರ್ ಪರಭಾಷೆಯಲ್ಲಿ ರೀಮೇಕ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ.


'ರಾಜ ರಾಜೇಂದ್ರ' ಬಿಡುಗಡೆಯಾದಾಗ, ಕಾಲಿವುಡ್ ನ ಖ್ಯಾತ ನಿರ್ದೇಶಕ ಕೆ.ಎಸ್.ರವಿಕುಮಾರ್, ಚಿತ್ರವನ್ನ ನೋಡಿ ಕೊಂಡಾಡಿದ್ದರಂತೆ. ಇದರಿಂದ ಖುಷ್ ಆದ ನಿರ್ದೇಶಕ ಪಿ.ಕುಮಾರ್ ತಮಿಳಿನಲ್ಲಿ ಚಿತ್ರ ನಿರ್ದೇಶಿಸುವುಕ್ಕೆ ಮುಂದಾಗಿದ್ದಾರೆ. [ಎತ್ತ ಕಳೆದುಹೋದರು 'ರಾಜ ರಾಜೇಂದ್ರ' ಶರಣ್..?]


ಹಿಂದಿ ಅವತರಣಿಕೆ ಬಗ್ಗೆ ಇನ್ನೂ ಮಾತುಕತೆ ಹಂತದಲ್ಲಿದ್ದು, ಅಗತ್ಯ ಬಿದ್ದರೆ ಅವರೇ ಹಿಂದಿ ಚಿತ್ರವನ್ನೂ ನಿರ್ದೇಶಿಸಲಿದ್ದಾರಂತೆ. ಆದ್ರೆ, ತಾರಾಬಳಗದಲ್ಲಿ ಶರಣ್ ಇರುತ್ತಾರೋ, ಇಲ್ಲವೋ ಅಂತ ಇನ್ನೂ ಡಿಸೈಡ್ ಆಗಿಲ್ಲ. ಶರಣ್ ಮನಸ್ಸು ಮಾಡಿದ್ರೆ, ಕಾಲಿವುಡ್ ಮತ್ತು ಬಾಲಿವುಡ್ ಗೂ ಹಾರಬಹುದು. (ಏಜೆನ್ಸೀಸ್)

English summary
Kannada Actor Sharan starrer Raja Rajendra, is ready to be remade in Tamil and Hindi. Apparently, Tamil version of the movie will be directed by P.Kumar. Casting has not been finalized yet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada