ಸೀತಾರಾಮ ಕಲ್ಯಾಣದಲ್ಲಿ ಬಿಗ್ ಸ್ಟಾರ್ ಗಳ ಸಮಾಗಮ

By Pavithra

ನಿಖಿಲ್ ಕುಮಾರ್ ಅಭಿನಯದ ಸೀತಾ ರಾಮ ಕಲ್ಯಾಣ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ರಚಿತಾ ರಾಮ್ ಹಾಗೂ ನಿಖಿಲ್ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದು ಎ ಹರ್ಷ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಚುನಾವಣೆಯ ಸಂದರ್ಭ ಆಗಿರುವುದರಿಂದ ನಟ ನಿಖಿಲ್ ಕುಮಾರ್ ಅಪ್ಪನ ಪರವಾಗಿ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ.

ಆದರೆ ಇತ್ತ ಬಿಗ್ ಸ್ಟಾರ್ ಗಳು ಸೀತಾ ರಾಮ ಕಲ್ಯಾಣ ಚಿತ್ರದಲ್ಲಿ ಅಭಿನಯಿಸಲು ಬೆಂಗಳೂರಿಗೆ ಬಂದಿಳಿದಿದ್ದಾರೆ. ಬಿಡದಿ ಬಳಿ ಇರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಸೀತಾ ರಾಮ ಕಲ್ಯಾಣ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಶರತ್ ಕುಮಾರ್, ರವಿಶಂಕರ್ ಹಾಗೂ ಆದಿತ್ಯ ಮೆನನ್ ಶೂಟಿಂಗ್ ನಲ್ಲಿ ಭಾಗಿ ಆಗಿದ್ದಾರೆ.

Sharath kumar, Ravi Shankar and Aditya Menon are playing lead roles in Seetha Rama Kalyana

ಶರತ್ ಕುಮಾರ್ ಅಭಿನಯದ ಐದನೇ ಕನ್ನಡ ಸಿನಿಮಾ ಇದಾಗಿದ್ದು ಜಾಗ್ವಾರ್ ಚಿತ್ರದ ನಂತರ ಆದಿತ್ಯ ಮೆನನ್ ಮತ್ತೆ ನಿಖಿಲ್ ಕುಮಾರ್ ಜೊತೆಯಲ್ಲಿ ಅಭಿನಯ ಮಾಡುತ್ತಿದ್ದಾರೆ. ಇನ್ನು ರವಿಶಂಕರ್ ಸೀತಾ ರಾಮ ಕಲ್ಯಾಣ ಸಿನಿಮಾದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Sharath kumar, Ravi Shankar and Aditya Menon are playing lead roles in Seetha Rama Kalyana

ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಎ ಹರ್ಷ ಆದಷ್ಟು ಬೇಗ ಸಿನಿಮಾವನ್ನ ತೆರೆ ಮೇಲೆ ತರುವ ಪ್ರಯತ್ನ ಮಾಡಲಿದ್ದಾರೆ. ಇನ್ನು ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಆಗಿರುವ ನಿಝಿಲ್ ಬಿಡುವು ಮಾಡಿಕೊಂಡು ಚಿತ್ರೀಕರಣದ ಸ್ಥಳಕ್ಕೆ ಬಂದು ತಮ್ಮ ಸಿನಿಮಾದಲ್ಲಿ ಅಭಿನಯಿಸಲು ಬಂದ ಕಲಾವಿದರನ್ನ ಭೇಟಿ ಮಾಡಿದ್ದಾರೆ.

More from Filmibeat

English summary
Sharath kumar, Ravi Shankar and Aditya Menon are playing the lead roles in Seetha Rama Kalyana movie. Nikhil kumar is acting as a hero in the movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X