'ವಿಲನ್' ಗೆ ಟ್ವಿಸ್ಟ್: ಶರತ್ ಲೋಹಿತಾಶ್ವ ರಾವಣ, ಕಥೆ ಹೀಗಿರಬಹುದು.?

Recommended Video

TheVillain : ಸಿನಿಮಾ ಕಥೆಗೆ ಟ್ವಿಸ್ಟ್ ಕೊಟ್ಟ ರಾವಣನ ಪಾತ್ರ..! | FILMIBEAT KANNADA

'ದಿ ವಿಲನ್' ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಪೋಸ್ಟರ್, ಟೀಸರ್, ಹಾಡುಗಳನ್ನ ಕೇಳಿ ಥ್ರಿಲ್ ಆಗಿರುವ ಪ್ರೇಕ್ಷಕರು ಮೊದಲ ದಿನವೇ ಈ ಸಿನಿಮಾ ನೋಡಬೇಕು ಎಂಬ ಆಸೆಯಿಂದ ಕಾಯ್ತಿದ್ದಾರೆ.

ಈ ಮಧ್ಯೆ ವಿಲನ್ ಚಿತ್ರಗಳ ಹಾಡಿನ ಟೀಸರ್ ಬಿಡುಗಡೆಯಾಗಿದೆ. ಎಲ್ಲ ಹಾಡುಗಳು ಮೇಕಿಂಗ್ ತುಣಕನ್ನ ಚಿತ್ರತಂಡ ರಿಲೀಸ್ ಮಾಡಿದೆ. ಈ ಹಾಡುಗಳ ಪೈಕಿ 'ರಾವಣ.......'ಹಾಡಿನ ಮೇಕಿಂಗ್ ಹೆಚ್ಚು ಗಮನ ಸೆಳೆಯುತ್ತಿದೆ. ಯಾಕಂದ್ರೆ, ಈ ಹಾಡಿನಲ್ಲಿ ನಿಜವಾದ ರಾವಣ ಪ್ರತ್ಯಕ್ಷನಾಗಿದ್ದಾರೆ.

ಸದ್ಯದ, ಮಟ್ಟಿಗೆ ವಿಲನ್ ಯಾರೂ, ವಿಲನ್ ಯಾರೂ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇದರ ಜೊತೆ ಶಿವರಾಜ್ ಕುಮಾರ್ ರಾವಣನ ವ್ಯಕ್ತಿತ್ವ ಹೊಂದಿರುವ ಪಾತ್ರ ನಿರ್ವಹಿಸಿದ್ದಾರೆ ಎಂಬ ಸುಳಿವು ಸಿಕ್ಕಿದೆ.

sharath lohitashwa ravana in the villain movie

ಇದಕ್ಕೆಲ್ಲಾ ಈಗ ಟ್ವಿಸ್ಟ್ ಸಿಕ್ಕಿದೆ. ಹೌದು, ರಾವಣ ಹಾಡಿನ ಮೇಕಿಂಗ್ ನಲ್ಲಿ ನಿಜವಾದ ರಾವಣ ಎಂಟ್ರಿ ಕೊಟ್ಟಿದ್ದಾರೆ. ನಟ ಶರತ್ ಲೋಹಿತಾಶ್ವ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ರೆ, ದಿ ವಿಲನ್ ಸಿನಿಮಾದಲ್ಲಿ ನಡೆಯುವ ನಾಟಕದಲ್ಲಿ ಶರತ್ ಲೋಹಿತಾಶ್ವ ರಾವಣನ ಗೆಟಪ್ ಹಾಕಿದ್ದಾರೆ. ಇದು 'ದಿ ವಿಲನ್' ಕಥೆಗೆ ಪೂರಕವಾಗಿದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಬಹುಶಃ ಶರತ್ ಲೋಹಿತಾಶ್ವ ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರ ತಂದೆ. ಶರತ್ ಲೋಹಿತಾಶ್ವ ರಾವಣ ಪಾತ್ರಕ್ಕೆ ಫೇಮಸ್ ಆಗಿರ್ತಾನೆ. ರಾವಣನ ಬಗ್ಗೆ ಮಕ್ಕಳಿಗೆ ಕಥೆ ಹೇಳಿರ್ತಾನೆ. ಚಿಕ್ಕವಯಸ್ಸಿನಲ್ಲಿ ಶಿವಣ್ಣ ಮತ್ತು ಸುದೀಪ್ ರಾವಣ ರೀತಿ ಆಗ್ಬೇಕು ಎಂಬ ಕನಸು ಕಾಣ್ತಾರೆ. ಹಾಗಾಗಿ, ರಾವಣನ ರೀತಿಯಲ್ಲಿ ಇಬ್ಬರು ವಿಲನ್ ಗಳಾಗ್ತಾರೆ ಎಂದು ಕಥೆ ಊಹಿಸುತ್ತಿದ್ದಾರೆ.

ಹೀಗೆ, ದೃಶ್ಯಕ್ಕೊಂದು ಕಥೆ, ಹಾಡಿಗೊಂದು ಕಥೆ ಹುಟ್ಟಿಕೊಳ್ಳುತ್ತಿದೆ. ಆದ್ರೆ, ನಿಜವಾದ ಕಥೆ ಅಕ್ಟೋಬರ್ 18ರಂದು ಸ್ವತಃ ಪ್ರೇಮ್ ಅವರೇ ಬಹಿರಂಗಪಡಿಸಲಿದ್ದಾರೆ.

More from Filmibeat

English summary
Actor Sudeep and Shivarajkumar starring 'The Villain' kannada movie songs teaser released. The movie is directed by Prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X