»   » 'ನೀರ್ ದೋಸೆ' ನಿರ್ದೇಶಕರಿಗಾಗಿ 120 ಕೆ.ಜಿ ತೂಗಲು ಶರ್ಮಿಳಾ ರೆಡಿ

'ನೀರ್ ದೋಸೆ' ನಿರ್ದೇಶಕರಿಗಾಗಿ 120 ಕೆ.ಜಿ ತೂಗಲು ಶರ್ಮಿಳಾ ರೆಡಿ

Posted By: Naveen
Subscribe to Filmibeat Kannada

ನಟಿ ಶರ್ಮಿಳಾ ಮಾಂಡ್ರೆ ನಟಿಸಿರುವ 'ಆಕೆ' ಸಿನಿಮಾ ರಿಲೀಸ್ ಗೆ ರೆಡಿ ಇದೆ. ಈ ಚಿತ್ರದ ಬಳಿಕ ಈಗ ಮತ್ತೊಂದು ಹೊಸ ಸಿನಿಮಾದಲ್ಲಿ ಶರ್ಮಿಳಾ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಅದು ಸಹ 'ನೀರ್ ದೋಸೆ' ನಿರ್ದೇಶಕರ ಸಿನಿಮಾದಲ್ಲಿ ಎನ್ನುವುದು ವಿಶೇಷ.

'ನೀರ್ ದೋಸೆ' ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ವಿಜಯ ಪ್ರಸಾದ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಚಿತ್ರಕ್ಕೆ 'ಲೇಡಿಸ್ ಟೈಲರ್' ಎನ್ನುವ ಶೀರ್ಷಿಕೆ ಫಿಕ್ಸ್ ಆಗಿದ್ದು, ಚಿತ್ರದ ನಾಯಕಿಗಾಗಿ ಶರ್ಮಿಳಾ ಮಾಂಡ್ರೆ ಆಯ್ಕೆಯಾಗಿದ್ದಾರೆ.

'ಲೇಡಿಸ್ ಟೈಲರ್' ಸಿನಿಮಾಗಾಗಿ ಶರ್ಮಿಳಾ ಮಾಂಡ್ರೆ ಬರೋಬ್ಬರಿ 120 ಕೆ.ಜಿ ವರೆಗೂ ತೂಕ ಹೆಚ್ಚಿಸಿಕೊಳ್ಳಲು ಓಕೆ ಎಂದಿರುವುದು ಇಂಟ್ರೆಸ್ಟಿಂಗ್ ವಿಷಯ. ಮುಂದೆ ಓದಿ...

ಲೇಡಿಸ್ ಟೈಲರ್ ಜೊತೆ ಶರ್ಮಿಳಾ

'ಲೇಡಸ್ ಟೈಲರ್' ಚಿತ್ರದ ಲೀಡ್ ರೋಲ್ ನಲ್ಲಿ ನಟಿ ಶರ್ಮಿಳಾ ಮಾಂಡ್ರೆ ನಟಿಸುವುದು ಪಕ್ಕಾ ಆಗಿದೆ.

120 ಕೆ.ಜಿ ತೂಗಲು ಶರ್ಮಿಳಾ ಮಾಂಡ್ರೆ ರೆಡಿ

ಶರ್ಮಿಳಾ ಮಾಂಡ್ರೆ ಈ ಸಿನಿಮಾಗಾಗಿ ಬರೋಬ್ಬರಿ 120 ಕೆ.ಜಿ ತೂಗಲು ಒಪ್ಪಿಕೊಂಡಿದ್ದಾರೆ.

ವಿಜಯ ಪ್ರಸಾದ್ ನಿರ್ದೇಶನ

ವಿಜಯ ಪ್ರಸಾದ್ ನಿರ್ದೇಶದಲ್ಲಿ 'ಲೇಡಿಸ್ ಟೈಲರ್' ಚಿತ್ರ ಮೂಡಿ ಬರಲಿದೆ. ಈ ಹಿಂದೆ 'ಸಿದ್ಲಿಂಗು' ಮತ್ತು 'ನೀರ್ ದೋಸೆ' ಚಿತ್ರಗಳನ್ನ ಮಾಡಿದ್ದ ಇವರ ಮೂರನೇ ಸಿನಿಮಾ ಇದಾಗಿದೆ.

ಯಾವ ತರಹದ ಸಿನಿಮಾ

'ಲೇಡಿಸ್ ಟೈಲರ್' ಸಿನಿಮಾ ಪಕ್ಕಾ ವಿಜಯ ಪ್ರಸಾದ್ ಅವರ ಸ್ಟೈಲ್ ನಲ್ಲಿ ಇರಲಿದೆಯಂತೆ. ಸಿನಿಮಾದಲ್ಲಿ ಪಂಚಿಂಗ್ ಡೈಲಾಗ್ಸ್ ಇದ್ದು, ಚಿತ್ರದ ತುಂಬ ಕಾಮಿಡಿ ಸನ್ನಿವೇಶಗಳಿರಲಿದೆ.

ಮಹಿಳಾ ಪ್ರಧಾನ ಸಿನಿಮಾ

'ಲೇಡಿಸ್ ಟೈಲರ್' ಚಿತ್ರ ಒಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ. 120 ಕೆ.ಜಿ ತೂಕದ ಹುಡುಗಿಯ ಕಥೆ ಚಿತ್ರದಲ್ಲಿರಲಿದೆ. ಚಿತ್ರದ ಈ ವಿಭಿನ್ನ ಕಥೆಗೆ ಶರ್ಮಿಳಾ ಮಾಂಡ್ರೆ ಮನಸೋತಿದ್ದಾರಂತೆ.

ಮುಂದಿನ ತಿಂಗಳು ಶೂಟಿಂಗ್ ಶುರು

ಚಿತ್ರದ ಸ್ಕ್ರಿಪ್ಟ್ ಕೆಲಸಗಳನ್ನ ನಿರ್ದೇಶಕರು ಈಗಾಗಲೇ ಮುಗಿಸಿದ್ದಾರೆ. ಅಲ್ಲದೆ ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

'ಸೈಜ್ ಝೀರೋ' ಅನುಷ್ಕಾ

ಟಾಲಿವುಡ್ ನಲ್ಲಿ 'ಸೈಜ್ ಝೀರೋ' ಎಂಬ ಸಿನಿಮಾದಲ್ಲಿ ಸಹ ನಾಯಕಿಗೆ ಇದೇ ರೀತಿಯ ಪಾತ್ರ ಇತ್ತು. ಈ ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ಬರೋಬ್ಬರಿ 20 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು.

English summary
Kannada Actress 'Sharmiela Mandre' is selected to play lead role in Kannada Movie 'Ladies tailor' Directed by Vijaya prasad.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada