ಟಾಲಿವುಡ್‌ನಲ್ಲಿ ಶರ್ಮಿಳಾ ಮಾಂಡ್ರೆ ಹೊಸ ಇನ್ನಿಂಗ್ಸ್

By Rajendra

'ಧನ್ ಧನಾ ಧನ್' ಚಿತ್ರದ ಬಳಿಕ ಗಾಂಧಿನಗರದಿಂದ ದೂರವೇ ಉಳಿದಿರುವ ಶರ್ಮಿಳಾ ಮಾಂಡ್ರೆ ಈಗ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಈಗಾಗಲೆ ತಮಿಳಿನಲ್ಲಿ ನಟಿಸಿರುವ ಮಾಂಡ್ರೆ ಅವರಿಗೆ ಇದು ಚೊಚ್ಚಲ ತೆಲುಗು ಚಿತ್ರ.

ಕಳೆದ ಒಂದು ವರ್ಷದಿಂದ ಯಾವುದೇ ಕನ್ನಡ ಚಿತ್ರಕ್ಕೆ ಶರ್ಮಿಳಾ ಸಹಿ ಹಾಕದಿದ್ದರೂ ತೆಲುಗು ಮತ್ತು ತಮಿಳು ಚಿತ್ರರಂಗ ಹೊಸ ಹೊಸ ಅವಕಾಶಗಳ ಬಾಗಿಲನ್ನು ತೆರೆದಿದೆ. ತಮಿಳು ಚಿತ್ರದಲ್ಲಿ ಅಭಿನಯಿಸುವ ಮೂಲಕ ಒಳ್ಳೆಯ ಆರಂಭ ಪಡೆದ ಮಾಂಡ್ರೆ ಈಗ ತೆಲುಗಿನತ್ತ ಹೊರಟಿರುವುದು ವಿಶೇಷ.

ಇಷ್ಟಕ್ಕೂ ಮಾಂಡ್ರೆ ಅಭಿನಯಿಸುತ್ತಿರುವುದು 'ಕೆವ್ವು ಕೇಕ' ಎಂಬ ಚಿತ್ರದಲ್ಲಿ. ಚಿತ್ರದ ನಾಯಕ ನಟ ಅಲ್ಲರಿ ನರೇಶ್. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಂತೆ. ಚಿತ್ರದ ಶೂಟಿಂಗ್ ಫನ್ನಿಯಾಗಿರುತ್ತದೆ. ಭಾಷೆ ಬೇರೆ ನನಗೆ ಹೊಸದಾಗಿರುವುದರಿಂದ ಒಂದಷ್ಟು ಕಾಲಾವಕಾಶವನ್ನೂ ಕೇಳಿದ್ದೇನೆ ಎಂದಿದ್ದಾರೆ ಶರ್ಮಿಳಾ.

ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಒಂದಷ್ಟು ತಯಾರಿ ಮಾಡಿಕೊಳ್ಳಬೇಕಾಗಿದೆ. ಒಂದು ತಿಂಗಳ ಕಾಲಾವಕಾಶ ಸಿಕ್ಕಿದೆ. ಅಷ್ಟರಲ್ಲಿ ರೆಡಿಯಾಗುತ್ತೇನೆ ಎಂದಿದ್ದಾರೆ ಶರ್ಮಿಳಾ. ಇದರ ಜೊತೆಗೆ ಹಿಂದಿಯ ರೀಮೇಕ್ ಚಿತ್ರದ ಬಗ್ಗೆಯೂ ಮಾತುಕತೆ ನಡೆಯುತ್ತಿದೆಯಂತೆ. ಇದೊಂದು ತೆಲುಗು, ತಮಿಳು ದ್ವಿಭಾಷಾ ಚಿತ್ರ ಎನ್ನುತ್ತಾರೆ.

ಕನ್ನಡದ ಕೃಷ್ಣ, ಸಜನಿ, ನವಗ್ರಹ, ವೆಂಕಟ ಇನ್ ಸಂಕಟ, ಸ್ವಯಂವರ ಹಾಗೂ ಕರಿಚಿರತೆ ಚಿತ್ರಗಳು ಶರ್ಮಿಳಾ ಅವರಿಗೆ ಒಂದಷ್ಟು ಹೆಸರು ತಂದುಕೊಟ್ಟಂತಹವು. ಒಟ್ಟಿನಲ್ಲಿ ಕನ್ನಡದ ಹುಡುಗಿ ಪರಭಾಷೆಯಲ್ಲಿ ಮಿಂಚುತ್ತಿರುವುದು ಆಕೆಯ ಅಭಿಮಾನಿಗಳಿಗೆ ಒಂಥರಾ ಖುಷಿ ಕೊಡುವ ಸಮಾಚಾರ. (ಏಜೆನ್ಸೀಸ್)

More from Filmibeat

English summary
Sajani, Venkata in Sankata, Swayamvara fame Kannada actress debuts in Telugu with Kevvu Keka opposite Allari Naresh. It is a romantic comedy film. After 'Dhan Dhana Dhan' the actor has been away from Kannada films for over a year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X