»   » ಪ್ರತಿಮಾ ಪ್ರತಿಷ್ಠಿತರ ಸಾಲಿಗೆ ಬಡ್ತಿ ಹೊಂದಿದ ಶಾರುಖ್‌ ಖಾನ್‌

ಪ್ರತಿಮಾ ಪ್ರತಿಷ್ಠಿತರ ಸಾಲಿಗೆ ಬಡ್ತಿ ಹೊಂದಿದ ಶಾರುಖ್‌ ಖಾನ್‌

Subscribe to Filmibeat Kannada

ಖುಷ್‌ಬೂಗೆ ಗುಡಿಯ ಕಟ್ಟಿದರು, ಅಮಿತಾಬ್‌ಬಚ್ಚನ್‌ಗೆ ಗುರು ವಂದನೆ ಎಂದು ಪೂಜೆ ಮಾಡಿದರು, ಸನ್ನಿ ಡಿಯೋಲ್‌ ಅಭಿಮಾನಾರ್ಥ ಹತ್ತು ಕಿಮೀ ಉರುಳು ಸೇವೆ ಮಾಡಿದರು. ಅಭಿಮಾನಿಗಳ ಅಭಿಮಾನ ದೊಡ್ಡದು ಹುಚ್ಚಪ್ಪಗಳಿರಾ!
ಈಗ ಬಾಲಿವುಡ್‌ನ ಜನಪ್ರಿಯ ನಾಯಕ ಶಾರುಖ್‌ ಖಾನ್‌ ಅಭಿಮಾನಿಗಳ ಅಭಿಮಾನ ಜಾಗೃತವಾಸ್ಥೆಯಲ್ಲಿದೆ. ಅವರು ಪ್ರೀತಿಯ ನಾಯಕನಿಗಾಗಿ ಗುಡಿ ಕಟ್ಟಲಿಲ್ಲ , ಪೂಜೆ- ಉರುಳು ಸೇವೆಯನ್ನೂ ಮಾಡಲಿಲ್ಲ . ಏನಾದರೂ ಹೊಸತು ಅನ್ನುವ ಶಾರುಖ್‌ ತಂತ್ರವೇ ಅಭಿಮಾನಿಗಳಿಗೆ ಮಂತ್ರ. ಆ ಕಾರಣದಿಂದಾಗಿ ನಾಯಕನ ಪ್ರತಿಮೆ ಪ್ರತಿಷ್ಠಾಪನೆಗೆ ಅಭಿಮಾನಿಗಳು ಮುಂದಾಗಿದ್ದಾರೆ. ಅದಕ್ಕೆ ಶಾರುಕ್‌ ಅವರ ಸಮ್ಮತಿಯೂ ದೊರೆತಿದೆ.

ನಾಯಕನ ಹೆಸರನ್ನು ರಸ್ತೆಗೆ, ಸರ್ಕಲ್ಲಿಗೆ ಇಟ್ಟ ಉದಾಹರಣೆಯಿದೆ; ಪ್ರತಿಮೆ ಸ್ಥಾಪನೆಯ ವಿಷಯ ಹೊಸತು. ಗಾಂಧಿ, ಕೆಂಗೆಲ್‌, ರಾಜೀವ್‌ ಗಾಂಧಿ, ಶಿವಾಜಿ, ಬಸವಣ್ಣ ಸೇರಿದಂತೆ ಬೆಂಗಳೂರಿನಲ್ಲಿ ಗಲ್ಲಿಗೊಂದರಂತೆ ಕಾಣುವ ಪ್ರತಿಮೆಗಳ ನಾಯಕರೆಲ್ಲ ದಿವಂಗತರು; ಬಿಸಿಲು-ಮಳೆ-ಗಾಳಿಗಂಜದ ಗಟ್ಟಿಗರು. ಇಂಥ ಪ್ರತಿಮಾ ಪ್ರತಿಷ್ಠಿತರ ಸಾಲಿಗೆ ಶಾರುಖ್‌ ಸೇರುತ್ತಿದ್ದಾರೆ, ಜೀವಂತ ಇರುವಾಗಲೇ.

ಅಂದಹಾಗೆ, ಶಾರುಖ್‌ ಅವರ ಪ್ರತಿಮೆ ಬಯಲಲ್ಲಿಲ್ಲ - ಆಲಯದಲ್ಲಿದೆ ; ಅದು ವಸ್ತು ಪ್ರದರ್ಶನಾಲಯ. ಜೀವಿಗಳಿಗೆ ನೆರಳು-ನೆಲೆ ಬೇಕೆನ್ನುವ ಸತ್ಯ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತು . ಶಾರುಖ್‌ ಜೀವನ ಚಿತ್ರ ಬಿಂಬಿಸುವ ಚಿತ್ರಗಳು, ಪ್ರಮುಖ ನಿಯತಕಾಲಿಕಗಳಲ್ಲಿನ ಸಂದರ್ಶನಗಳು ಆಲಯದಲ್ಲಿವೆ. ದಿಲ್‌ ಸೆ ಸಿನಿಮಾದಲ್ಲಿ ಚಯ್ಯ ಚಯ್ಯಾ ಹಾಡಿನಲ್ಲಿ ತೊಟ್ಟಿದ್ದ ಜಾಕೆಟ್‌, ಅಶೋಕಾ ಸಿನಿಮಾದ ಕತ್ತಿ ಹಾಗೂ ಮೊಹಬ್ಬತೇನ್‌ನಲ್ಲಿನ ವಯಲಿನ್‌ಗಳನ್ನು ಶಾರುಖ್‌ ಪ್ರದರ್ಶನಾಲಯಕ್ಕೆ ನೀಡಿದ್ದಾರೆ.
ಜೀವಂತ ದಂತಕಥೆ ಅನ್ನುವ ಮಾತಿಗೆ ಶಾರುಖ್‌ ಉದಾಹರಣೆ ಅನ್ನಬಹುದೇನೊ!?

What do you think about Sharuks Exhibition?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada