ಸ್ಯಾಂಡಲ್ ವುಡ್ ನಲ್ಲಿ 'ಶಾಸನ' ಬರೆಯಲು ಬಂದ ಹೊಸ ಹುಡುಗರು
ಕನ್ನಡದಲ್ಲಿ ದಿನೇ ದಿನೇ ಹೊಸ ಹುಡುಗರು ಸಿನಿಮಾ ಮಾಡುವ ಕನಸು ಹೊತ್ತು ಗಾಂಧಿನಗರಕ್ಕೆ ಬರುತ್ತಾರೆ. ಈಗ ಸ್ಯಾಂಡಲ್ ವುಡ್ ನಲ್ಲಿ 'ಶಾಸನ' ಬರೆಯಲು ಹೊಸ ಚಿತ್ರತಂಡ ಬಂದಿದೆ.
'ಶಾಸನ' ಸಿನಿಮಾದ ಮುಹೂರ್ತ ಕಾರ್ಯಕ್ರಮ ಇತ್ತೀಚಿಗಷ್ಟೆ ನಡೆದಿದೆ. ಈ ಚಿತ್ರದ ಮೂಲಕ ಧನು ಖಳನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಧ್ಯಮ ಕ್ಷೇತ್ರದ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡಿರುವ ಧನು ಈಗ ಬೆಳ್ಳಿತೆರೆ ಮೇಲೆ ಮಿಂಚಲು ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ವಿಲನ್ ಆಗಿ ನಟಿಸುತ್ತಿದ್ದು, ಆ ಪಾತ್ರಕ್ಕೆ ಇನ್ನೊಂದು ಶೇಡ್ ಕೂಡ ಇದೆಯಂತೆ.

ಈ ಹಿಂದೆ 'ಚಿನ್ನದ ಗೊಂಬೆ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಪಂಕಜ್ ಬಾಲನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀಧರ್ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ರಂಜಿತಾ ಮತ್ತು ಹರ್ಷಿತಾ ನಾಯಕಿಯರಾಗಿದ್ದಾರೆ. ಮನುಶ್ರೀ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.

ಸಿನಿಮಾ 18 ಹಾಗೂ 21ನೇ ಶತಮಾನದ ಶೇಡ್ ಇರುವ ಕಥೆ ಹೊಂದಿದೆಯಂತೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಜಾನರ್ ನ ಸಿನಿಮಾ ಇದಾಗಿದ್ದು, ಚಿಕ್ಕಮಗಳೂರಿನಲ್ಲಿ ಈ ತಿಂಗಳ ಕೊನೆಯಲ್ಲಿ ಶೂಟಿಂಗ್ ಶುರು ಆಗಲಿದೆ .


Click it and Unblock the Notifications











