ಉಪೇಂದ್ರ ಅಭಿಮಾನಿಗಳ ಗೊಂದಲ: ಸ್ಪಷ್ಟನೆ ಕೊಟ್ಟ ಶಶಾಂಕ್

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಉಪೇಂದ್ರ-ಶಶಾಂಕ್ ಕಾಂಬಿನೇಶನ್‌ ನ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು.

Recommended Video

Upendra ಅಭಿಮಾನಿಗಳಿಗೆ ಯೋಚನೆ ಮಾಡಬೇಡಿ ಎಂದ ನಿರ್ದೇಶಕ Shashank | Filmibeat Kannada

ಪ್ರತಿಭಾವಂತ ನಿರ್ದೇಶಕ ಹಾಗೂ ಉಪೇಂದ್ರ ಜೋಡಿಯ ಸಿನಿಮಾ ಬಗ್ಗೆ ಉಪ್ಪಿ ಅಭಿಮಾನಿಗಳು, ಸಿನಿಪ್ರೇಮಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸ್ಕ್ರಿಪ್ಟ್ ಪೂಜೆ ಬಳಿಕ ಸಿನಿಮಾ ಮುಂದಕ್ಕೆ ಹೋಗಲೇ ಇಲ್ಲ. ಇದು ಉಪೇಂದ್ರ ಅಭಿಮಾನಿಗಳ ಗೊಂದಲ ಹಾಗೂ ನಿರಾಶೆಗೆ ಕಾರಣವಾಗಿತ್ತು.

ಆದರೆ ಈಗ ನಿರ್ದೇಶಕ ಶಶಾಂಕ್ ಟ್ವೀಟ್ ಮಾಡಿದ್ದು, 'ಉಪೇಂದ್ರ ಅಭಿಮಾನಿಗಳು ಗೊಂದಲ ಮತ್ತು ನಿರಾಶೆಗೊಳಗಾಗದಿರಿ. ನನ್ನ ಮತ್ತು ಉಪ್ಪಿ ಸರ್ ಕಾಂಬಿನೇಶನ್ ಸಿನಿಮಾ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪೂರ್ವ ತಯಾರಿ ಶುರುವಾಗಿದೆ' ಎಂದು ಹೇಳಿದ್ದಾರೆ.

Shashank and Upendra Combination New Movie to Launch Soon

ಶಶಾಂಕ್ ನಿರ್ದೇಶಿಸುತ್ತಿರುವ ಈ ಸಿನಿಮಾ ಕನ್ನಡ-ತೆಲುಗು-ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಉಪೇಂದ್ರ ನಟನೆಯ 54 ನೇ ಸಿನಿಮಾ ಇದಾಗಿದ್ದು, ಸಿನಿಮಾವು ನಿಜ ಘಟನೆಗಳ ಮೇಲೆ ಆಧರಿತವಾಗಲಿದೆಯಂತೆ.

ಶಶಾಂತ್ ಅವರೇ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ನಾಯಕಿಯರ ಆಯ್ಕೆಯೂ ಆಗಿದೆ. ನಿಶ್ಚಿಕಾ ನಾಯ್ಡು ಮತ್ತು ಬೀರ್‌ಬಲ್ ಸಿನಿಮಾ ಖ್ಯಾತಿಯ ರುಕ್ಮಿಣಿ ನಾಯಕಿಯರಾಗಿದ್ದಾರೆ.

ಪ್ರಸ್ತುತ, ಉಪೇಂದ್ರ ಅವರು ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ತೆಲುಗಿನಲ್ಲಿ ವರುಣ್ ತೇಜ್ ನಟನೆಯ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಬುದ್ಧಿವಂತ 2, ತ್ರಿಶೂಲಂ, ಹೋಮ್ ಮಿನಿಸ್ಟರ್, ಮಂಜು ಮಾಂಡವ್ಯ ಜೊತೆಗೆ ಒಂದು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಉಪೇಂದ್ರ.

More from Filmibeat

English summary
Shashank and Upendra combination new movie to start filming soon said director Shashank.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X