For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ರಿಲೀಸ್‌ ಮಾಡಿದ 'ಲವ್ 360' ಟ್ರೈಲರ್‌ಗೆ ಭಾರಿ ಮೆಚ್ಚುಗೆ

  |

  ಲವ್‌ ಸ್ಟೋರಿಗಳ ಸರದಾರ ಶಶಾಂಕ್. ಇದೂವರೆಗೂ ನಿರ್ದೇಶಿಸಿದ ಲವ್‌ ಸ್ಟೋರಿಗಳು ಸೋತಿದ್ದೇ ಇಲ್ಲ. ಇದೇ ನಿರ್ದೇಶಕ 'ಲವ್ 360' ಅನ್ನೋ ಮತ್ತೊಂದು ಲವ್‌ ಸ್ಟೋರಿಯನ್ನು ನಿರ್ದೇಶನ ಮಾಡಿದ್ದಾರೆ. ಹೊಸಬರಿಗಾಗಿ ಮಾಡಿದ ಈ ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದೆ.

  ಇತ್ತೀಚೆಗಷ್ಟೇ ಶಶಾಂಕ್ ನಿರ್ದೇಶಿಸಿದ 'ಲವ್ 360' ಸಿನಿಮಾದ ಟ್ರೈಲರ್‌ ಅನ್ನು ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್ ಬಿಡುಗಡೆ ಮಾಡಿದ್ದರು. ಈ ಟ್ರೈಲರ್‌ ಬಹುತೇಕ ಮಂದಿಗೆ ಇಷ್ಟ ಆಗಿದೆ. ಇದೇ ಸಿನಿಮಾ ಆಗಸ್ಟ್ 19 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ವಿಶೇಷ ಅಂದ್ರೆ, ಶಶಾಂಕ್ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾವನ್ನು ಮಾಡಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಾಧ್ಯವಾಗಿರಲಿಲ್ಲ.

  ಶಶಾಂಕ್ ನಿರ್ದೇಶನದಲ್ಲಿ ಶಿವಣ್ಣ ಸಿನಿಮಾ

  "ಶಶಾಂಕ್ ನನ್ನ ಅಚ್ಚುಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಅವರ ನಿರ್ದೇಶನದಲ್ಲಿ ನಾನು ನಟಿಸಬೇಕಿತ್ತು. ಕಾರಣಾಂತರದಿಂದ ಆಗಿಲ್ಲ. ಮುಂದೆ ನಮಿಬ್ಬರ ಕಾಂಬಿನೇಶನ್ ನಲ್ಲಿ ಚಿತ್ರ ಬರುತ್ತದೆ. ಸದ್ಯ ಶಶಾಂಕ್ ನಿರ್ದೇಶನದ "ಲವ್ 360" ಚಿತ್ರದ ಟ್ರೈಲರ್ ನೋಡಿದೆ ಚೆನ್ನಾಗಿದೆ." ಎಂದಿದ್ದಾರೆ ಶಿವರಾಜ್‌ಕುಮಾರ್‌.

  "ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ 'ಜಗವೇ ನೀನು ಗೆಳತಿಯೆ' ಹಾಡಂತೂ ನನಗೆ ಬಹಳ ಇಷ್ಟ. ನಾಯಕ, ನಾಯಕಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಾನು ಬಿಡುಗಡೆ ದಿನದಂದೇ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೆ ನೋಡುತ್ತೇನೆ" ಎಂದಿದ್ದಾರೆ ನಟ ಶಿವರಾಜಕುಮಾರ್.

  Shashank Directed Love 360 Theatrical Trailer Getting Good Response

  ರಿಲೀಸ್‌ಗೂ ಮುನ್ನ ಸಿನಿಮಾಗೆ ಸಖತ್ ರೆಸ್ಪಾನ್ಸ್

  ರಿಲೀಸ್ ಮುನ್ನ ಬೇರೆ ಬೇರೆ ಊರುಗಳಿಗೆ ಭೇಟಿ ನೀಡುತ್ತಿದ್ದಾರೆ. ಹೋದ ಕಡೆಯಲ್ಲೆಲ್ಲಾ ಜನರಿಂದ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಗುತ್ತಿದೆ. ವಿಶೇಷ ಅಂದರೆ, ಕೆಆರ್ ಜಿ ಸ್ಟುಡಿಯೋಸ್ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳು ಕೂಡ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಅಲ್ಲದೆ ಶಶಾಂಕ್ ಹೆಣೆದ ಸ್ಟೋರಿ ಹೇಗಿದೆ? ಅನ್ನೋ ಕುತೂಹಲ ಪ್ರೇಕ್ಷಕರ ಮುಂದಿದೆ.

  Recommended Video

  Darshan Phone Call Audio Viral | Filmibeat Kannada

  ನನ್ನ ಸ್ನೇಹಿತನೊಬ್ಬ "ನೀನು ಹೀರೋ ತರಹ ಇಲ್ಲ. ನಿನ್ನ ಸಿನಿಮಾ ಯಾರು ನೋಡುತ್ತಾರೆ ಅಂದಿದ್ದ. ಆ ಮಾತು‌ ನನ್ನ ಮನಸ್ಸಿನಲ್ಲೇ ಇತ್ತು. ಆದರೆ ಈಗ ಬೇರೆ ಬೇರೆ ಊರುಗಳಿಗೆ, ಅದರಲ್ಲೂ ಕಾಲೇಜುಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳು ನನ್ನನ್ನು ಗುರುತಿಸುತ್ತಿದ್ದು ಖುಷಿ ಕೊಟ್ಟಿದೆ." ಎನ್ನುತ್ತಾರೆ ಹೀರೋ ಪ್ರವೀಣ್.

  English summary
  Shashank Directed Love 360 Theatrical Trailer Getting Good Response, Know More.
  Tuesday, August 9, 2022, 10:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X