ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ನಿಧನ
ಮಡಿಕೇರಿ, ನ.22 : ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಕೆ.ಶಶಿಧರ್ ಗುರುವಾರ(ನ.22) ರಸ್ತೆ ಅಪಘಾತದಲ್ಲಿ ಮೃತಪಟ್ಟರು.
ಗೋಣಿಕೊಪ್ಪ ಸಮೀಪ ಅಪಘಾತ ಬುಧವಾರ ರಾತ್ರಿ ಸಂಭವಿಸಿದೆ. ತಮ್ಮ ಗೆಳೆಯ ಎಂ.ಕಿರಣ್ ನಂಜಪ್ಪ ಜೊತೆ ಮೈಸೂರಿನಿಂದ ಕಾರಿನಲ್ಲಿ ಶಶಿಧರ್ ಮರಳುತ್ತಿದ್ದರು. ತಿರುವೊಂದರಲ್ಲಿ ಕಾರು ಪ್ರಪಾತಕ್ಕೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ, ಗುರುವಾರ ಬೆಳಗ್ಗೆ ಶಶಿಧರ್ ಕೊನೆ ಉಸಿರೆಳೆದರು. ಜಿಲ್ಲಾ ಪತ್ರಕರ್ತರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications