ಶಶಿಕುಮಾರ್ ಮಗನ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಎರಡನೇ ಸಿನಿಮಾ ಘೋಷಣೆ

ನಟ ಶಶಿಕುಮಾರ್ ಮಗನ ಮೊದಲ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಎರಡನೇ ಸಿನಿಮಾ ಘೋಷಣೆ ಆಗಿದೆ.

ಶಶಿಕುಮಾರ್ ಮಗ ಅಕ್ಷಿತ್ ಶಶಿಕುಮಾರ್ ಸಿನಿಮಾ ನಾಯಕನಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ. ಅವರ ನಟನೆಯ ಮೊದಲ ಸಿನಿಮಾ 'ಸೀತಾಯಣ' ಬಿಡುಗಡೆಗೆ ರೆಡಿಯಾಗಿದೆ.

ಶಶಿಕುಮಾರ್ ಮಗನ ಅದೃಷ್ಟ ಹೇಗಿದೆಯೆಂದರೆ ಮೊದಲ ಸಿನಿಮಾ ಬಿಡುಗಡೆ ಆಗುವುದಕ್ಕೆ ಮುನ್ನವೇ ಅವರಿಗೆ ಹೊಸ ಆಫರ್ ಬಂದಿದ್ದು, ಸಿನಿಮಾ ಸಹ ಘೋಷಣೆ ಆಗಿಬಿಟ್ಟಿದೆ.

 Shashikumar Son Akshits Second Movie Shooting Starts

ಅಕ್ಷಿತ್ ಅವರು 'ಸಮಿತ್' ಹೆಸರಿನ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಸಿನಿಮಾದ ಚಿತ್ರೀಕರಣ ಹೈದರಾಬಾದ್‌ ನಲ್ಲಿ ಸರಳವಾಗಿ ಮುಗಿದಿದ್ದು, ಚಿತ್ರೀಕರಣ ಸಹ ಅಲ್ಲಿಯೇ ಪ್ರಾರಂಭವಾಗಿದೆ. ಚಾಂದಿನಿ ಮತ್ತು ಅನುವರ್ಣ ಎಂಬ ಇಬ್ಬರು ನಟಿಯರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸತೀಶ್ ಮಲೆಂಪಾಟಿ ಎಂಬುವರು ಕತೆ ಬರೆದು ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಅರುಣಾ ಫಿಲಮ್ಸ್‌, ಸಿನಿಮಾವನ್ನು ನಿರ್ಮಿಸುತ್ತಿದೆ. ಸೀತಾಯಣ ಸಿನಿಮಾದಂತೆಯೇ 'ಸಮಿತ್' ಸಿನಿಮಾ ಸಹ ಮೂರು ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದೆ.

ಸೀತಾಯಣ ಸಿನಿಮಾದ ಪೋಸ್ಟರ್ ಹಾಗೂ ಒಂದು ಹಾಡು ಈಗಾಗಲೇ ಬಿಡುಗಡೆ ಆಗಿದ್ದು, ಹಾಡು ಬಹುವಾಗಿ ಗಮನ ಸೆಳೆಯುತ್ತಿದೆ. ಅಕ್ಷಿತ್ ಅವರ ಮೊದಲ ಸಿನಿಮಾಕ್ಕೆ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟ-ನಟಿಯರು ಶುಭಕೋರಿದ್ದಾರೆ. ಸಿನಿಮಾವು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ

Recommended Video

ಜೀವನದಲ್ಲಿ ಯಾವತ್ತು ಒಂದೇ ಗುರಿ ಇರ್ಬೇಕು | Shivraj K R Pete | Filmibeat Kannada

More from Filmibeat

English summary
Shashikumar son Akshit's second movie shooting starts. His first movie Seethayana yet not released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X