For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಶಾಸ್ತ್ರಿ' ಸಿನಿಮಾದ ನಾಯಕಿ ಮಾನ್ಯಾಗೆ ಪಾರ್ಶ್ವವಾಯು

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಶ್ರೀಮುರಳಿ, ವಿಷ್ಣುವರ್ಧನ್ ಜೊತೆ ನಟಿಸಿದ್ದ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಮಾನ್ಯಾ ಪಾರ್ಶ್ವವಾಯುಯಿಂದ ಬಳಲುತ್ತಿದ್ದಾರೆ. ಶಾಸ್ತ್ರಿ ಸಿನಿಮಾ ಮೂಲಕ ಕನ್ನಡಿಗರ ಮನೆಗೆದ್ದಿದ್ದ ನಟಿ ಮಾನ್ಯಾ, ಸಿನಿಮಾರಂಗದಿಂದ ದೂರ ಸರಿದು ಅನೇಕ ವರ್ಷಗಳಾಗಿದೆ. ಸದ್ಯ ಅಮೆರಿಕಾದಲ್ಲಿ ವಾಸಿಸುತ್ತಿರುವ ಮಾನ್ಯಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.

  ಪಾರ್ಶ್ವವಾಯು ಸಮಸ್ಯೆಗೆ ತುತ್ತಾದ ನಟಿ ಮಾನ್ಯ ನಾಯ್ಡು | Filmibeat Kannada

  ಅನಾರೋಗ್ಯಕ್ಕೆ ತುತ್ತಾದ ಬಗ್ಗೆ ನಟಿ ಮಾನ್ಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತನಗೆ ಕುಳಿತುಕೊಳ್ಳಲು, ಮಲಗಲು, ನಡೆಯಲು ಆಗುತ್ತಿಲ್ಲ ಎಂದು ತನ್ನ ಕಷ್ಟವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮತ್ತೆ ಮಾಮೂಲಿ ಸ್ಥಿತಿಗೆ ಬರುತ್ತೇನೆ, ಮತ್ತೆ ಡಾನ್ಸ್ ಮಾಡುತ್ತೇನೆ ಎನ್ನುವ ಬರವಸೆ ನೀಡಿದ್ದಾರೆ. ತನ್ನ ನೋವಿನ ಬಗ್ಗೆ ಮಾನ್ಯಾ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ..

  ಎಡ ಕಾಲು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ

  ಎಡ ಕಾಲು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ

  'ಮೂರು ವಾರಗಳ ಹಿಂದೆ ನಾನು ಗಾಯಗೊಂಡಿದ್ದೆ. ಬಳಿಕ ನನ್ನ ಎಡಭಾಗ ಪಾರ್ಶ್ವವಾಯುಗೆ ಸುತ್ತಾಯಿತು. ನನ್ನ ಎಡಗಾಲು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನಾನು ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.

  ಕುಳಿತುಕೊಳ್ಳಲು, ಮಲಗಲು ಆಗುತ್ತಿಲ್ಲ

  ಕುಳಿತುಕೊಳ್ಳಲು, ಮಲಗಲು ಆಗುತ್ತಿಲ್ಲ

  'ನನ್ನ ಬೆನ್ನಿಗೆ ಸ್ಟೀರಾಯ್ಡ್ ಚುಚ್ಚುಮದ್ದು ನೀಡಲಾಗಿದೆ. ಕೋವಿಡ್ ಕಾರಣದಿಂದ ಯಾರಿಗೂ ಪ್ರವೇಶ ನೀಡುತ್ತಿಲ್ಲ. ನಾನು ಒಬ್ಬೊಂಟಿಯಾಗಿದ್ದೀನಿ. ನಾನು ಬೇಗನೆ ಗುಣಮುಖಳಾಗುತ್ತೇನೆ ಎಂದು ಭಾವಿಸುದ್ದೇನೆ. ಮೂರು ವಾರಗಳಿಂದ ನನಗೆ ಕುಳಿತುಕೊಳ್ಳಲು, ನಡೆಯಲು, ಮಲಗಲು ಆಗುತ್ತಿಲ್ಲ. ಆದರೆ ಮತ್ತೆ ನಾನು ಮೊದಲಿನ ಸ್ಥಿತಿಗೆ ಬರಲು ಪ್ರಯತ್ನಿಸುತ್ತಿದೀನಿ.'

  ಮಾಮೂಲಿ ಸ್ಥಿತಿಗೆ ಬರುತ್ತೇನೆ ಎಂದ ಮಾನ್ಯಾ

  ಮಾಮೂಲಿ ಸ್ಥಿತಿಗೆ ಬರುತ್ತೇನೆ ಎಂದ ಮಾನ್ಯಾ

  'ನಾನು ಮತ್ತೆ ಡಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಆದರೆ ವೈದ್ಯರು ನಿಧಾನವಾಗಿ ಚೇತರಿಸಿಕೊಂಡ ಬಳಿಕ ಮತ್ತೆ ಡಾನ್ಸ್ ಮಾಡಬಹುದು ಎಂದು ಹೇಳಿದ್ದಾರೆ. ನಾನು ನಿಧಾನವಾಗಿ ಗುಣಮುಖಳಾಗುತ್ತಿದ್ದೀನಿ ಇದಕ್ಕೆ ದೇವರಿಗೆ ಧನ್ಯವಾದ ತಿಳಿಸುತ್ತೇನೆ' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  ಮತ್ತೆ ಡಾನ್ಸ್ ಮಾಡುತ್ತೇನೆ-ಮಾನ್ಯಾ

  ಮತ್ತೆ ಡಾನ್ಸ್ ಮಾಡುತ್ತೇನೆ-ಮಾನ್ಯಾ

  'ನಿಮ್ಮನ್ನು ನೀವು ಯಾವತ್ತು ಬಿಟ್ಟುಕೊಡಬೇಡಿ. ಪ್ರತಿಯೊಂದು ಚಿಕ್ಕ ವಿಚಾರಕ್ಕೂ ಹೋರಾಟ ಮಾಡಿ. ನಿಮ್ಮನ್ನು ಬಲಪಡಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಆ ಸಮಯದಲ್ಲಿ ನಾನು ತುಂಬಾ ನೊಂದಿದ್ದೆ. ತುಂಬಾ ಅತ್ತಿದ್ದೇನೆ. ಆದರೆ ಗೆದ್ದು ಬರುತ್ತೇನೆ. ಮತ್ತೆ ನಾನು ಡಾನ್ಸ್ ಮಾಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.

  English summary
  Shastri movie fame actress Manya suffering from paralyze.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X