ನಟಿ, ನಿರೂಪಕಿ ಶೀತಲ್ ಶೆಟ್ಟಿ 'ಕಾರು' ಬಿಡುಗಡೆಗೆ ಸಿದ್ಧ
ಕನ್ನಡದ ಕೆಲವು ನಟಿಯರು ಈಗಾಗಲೇ ಕಿರುಚಿತ್ರಗಳ ಮೂಲಕ ನಿರ್ದೇಶಕಿಯರಾಗಿದ್ದಾರೆ. ನಿರೂಪಕಿ, ನಟಿ, ಶೀತಲ್ ಶೆಟ್ಟಿ ಕೂಡ ಶಾರ್ಟ್ ಫಿಲ್ಮ್ ಮೂಲಕ ನಿರ್ದೇಶಕಿ ಆಗಿದ್ದಾರೆ.
'ಕಾರು' ಎಂಬ ಕಿರುಚಿತ್ರದ ತಯಾರಿಯಲ್ಲಿ ಶೀತಲ್ ಶೆಟ್ಟಿ ಬ್ಯುಸಿ ಇದ್ದಾರೆ. ಮಾಕೋನಹಳ್ಳಿ ಡ್ಯಾಂ ಬಳಿಯ ಕೆಲವು ಸ್ಥಳಗಳಲ್ಲಿ ಈ ಕಿರುಚಿತ್ರದ ಚಿತ್ರೀಕರಣ ಮಾಡಲಾಗಿದೆ. ಕಿರುಚಿತ್ರದ ಕೆಲಸಗಳು ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ.
ಡಿಸೆಂಬರ್ 15 'ಕಾರು' ಕಿರುಚಿತ್ರ ಬಿಡುಗಡೆ ಆಗುತ್ತಿದೆ. ಇದು ಪುಟ್ಟ ಹುಡುಗಿಯ ಕಥೆಯಾಗಿದೆ. ಆ ಪಾತ್ರದಲ್ಲಿ ಪುಟ್ಟಿ ನಟಿಸಿದ್ದಾರೆ. ಬಾಲ್ಯದ ಹುಡುಗಿಗೆ ಕಾರ್ ಮೇಲೆ ಹೇಗೆ ಆಕರ್ಷಣೆ ಆಗುತ್ತದೆ, ಸಣ್ಣ ಹುಡುಗಿ ಮೇಲೆ ಹೇಗೆ ಕಾರ್ ಪರಿಣಾಮ ಬೀರುತ್ತದೆ ಎನ್ನುವುದು ಕಿರುಚಿತ್ರದ ಕಥೆಯಾಗಿದೆ.

ಅನಂತ್ ಕಾಮತ್ ಕಿರುಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಯೋಗೀಶ್ವರ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಋತ್ವಿಕ್ ಸಂಕಲನ ಇದೆ. ಇಡೀ ತಂಡ ಒಂದು ಒಳ್ಳೆಯ ಕಿರುಚಿತ್ರ ನೀಡುವ ಸಂತೋಷದಲ್ಲಿ ಇದೆ.
'ಸಂಗಾತಿ' ಕಿರುಚಿತ್ರದ ಮೂಲಕ ಶೀತಲ್ ಶೆಟ್ಟಿ ನಿರ್ದೇಶಕಿ ಆಗಿದ್ದಾರೆ. ಅದಕ್ಕೂ ಹಿಂದೆ ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಆ ನಂತರ 'ಪತಿ ಬೇಕು.ಕಾಮ್' ಸಿನಿಮಾದಲ್ಲಿ ನಾಯಕಿಯಾಗಿದ್ದರು.


Click it and Unblock the Notifications











