»   » ಹಿಮಾಚಲ ಪ್ರದೇಶದ ಶೀತದಲ್ಲಿ ಶೀತಲ್ ಶೆಟ್ಟಿ ಏನ್ ಮಾಡ್ತಿದ್ದಾರೆ?

ಹಿಮಾಚಲ ಪ್ರದೇಶದ ಶೀತದಲ್ಲಿ ಶೀತಲ್ ಶೆಟ್ಟಿ ಏನ್ ಮಾಡ್ತಿದ್ದಾರೆ?

Posted By:
Subscribe to Filmibeat Kannada

ಕಿರುತೆರೆಯ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟ ನಟಿಯರಲ್ಲಿ ಶೀತಲ್ ಶೆಟ್ಟಿ ಕೂಡ ಒಬ್ಬರು. ಒಂದಾದ ನಂತರ ಒಂದು ಸಿನಿಮಾಗಳನ್ನು ಮಾಡುತ್ತಿರುವ ಶೀತಲ್ ಶೆಟ್ಟಿ ಈಗ 'ಚೇಸ್' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ.

'ಚೇಸ್ - ಇನ್ ದ ಡಾರ್ಕ್' ಸಿನಿಮಾದ ಚಿತ್ರೀಕರಣ ಸದ್ಯ ಭರ್ಜರಿಯಾಗಿ ನಡೆಯುತ್ತಿದೆ. ಶೀತಲ್ ಶೆಟ್ಟಿ ಸಿನಿಮಾದ ಶೂಟಿಂಗ್ ಗಾಗಿ ಹಿಮಾಚಲ ಪ್ರದೇಶಕ್ಕೆ ತೆರೆಳಿದ್ದಾರೆ. ಅಲ್ಲಿನ ಸುಂದರ ತಾಣದಲ್ಲಿ ತೆಗೆದ ಕೆಲವು ಫೋಟೋಗಳನ್ನು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Chasing..:) #shoot #himachalpradesh #chase #radhika_chetan #solangvalley

A post shared by Sheethal Shetty (@isheethalshetty) on May 8, 2018 at 3:28am PDT

'ಚೇಸ್' ಸಿನಿಮಾ ಕನ್ನಡ ಮತ್ತ ತಮಿಳು ಎರಡು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಹಾಸ್ಯ ನಟ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ರಂಗಿತರಂಗ' ಖ್ಯಾತಿಯ ರಾಧಿಕಾ ಚೇತನ್ ಸಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡದ ಜೊತೆಗೆ ಸಖತ್ ಖುಷಿಯಾಗಿ ಕೆಲಸ ಮಾಡುತ್ತಿದ್ದಾರೆ.

sheetal shetty flys to himachal pradesh for chase kannada movie shooting

ಅಂದಹಾಗೆ, ಈ ಸಿನಿಮಾಗೆ ಹರಿ ಆನಂದ್ ನಿರ್ದೇಶನ ಇದೆ. ಅನಂತ್ ಅರಸ್ ಅವರ ಛಾಯಾಗ್ರಹಣ ಸಿನೆಮಾಗಿದೆ. ಕಾರ್ತಿಕ್ ಆಚಾರ್ಯ ಸಂಗೀತ ನೀಡುತ್ತಿದ್ದಾರೆ.

English summary
Kannada actress Sheetal Shetty flys to himachal pradesh for 'Chase' kannada movie shooting.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X