ಇದೇ ವಾರ ಶೀತಲ್ ಶೆಟ್ಟಿಗೆ ಪತಿ ಸಿಗುತ್ತಾರೆ
ನಟಿ ಶೀತಲ್ ಶೆಟ್ಟಿ ಅವರ 'ಪತಿ ಬೇಕು.ಕಾಮ್' ಸಿನಿಮಾ ಈಗಾಗಲೇ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳನ್ನು ನೋಡಿ ಮೆಚ್ಚಿಕೊಂಡಿದ್ದ ಜನರ ಮುಂದೆ ಈಗ ಸಿನಿಮಾ ಬರಲಿದೆ. ಅಂದಹಾಗೆ, ಇದೇ ಶುಕ್ರವಾರ ಈ ಸಿನಿಮಾ ಬಿಡುಗಡೆಯಾಗುತ್ತಿದೆ.
'ಪತಿ ಬೇಕು.ಕಾಮ್' ಸಿನಿಮಾವನ್ನು ಚಿತ್ರರಂಗ ಅನೇಕರು ಮೆಚ್ಚಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್, ಸುದೀಪ್, ನಿರ್ದೇಶಕ ಪ್ರೇಮ್, ನಟಿ ಆಮಿ ಜಾಕ್ಸನ್, ನಟಿ ಶ್ರಾವ್ಯ ಚಿತ್ರದ ಟ್ರೇಲರ್ ನೋಡಿ ಇಷ್ಟ ಪಟ್ಟಿದ್ದಾರೆ.

ಇನ್ನು ರಾಕೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಶೀತಲ್ ಈ ಚಿತ್ರದಲ್ಲಿ ಒಬ್ಬ ಸಾಮಾನ್ಯ ಹುಡುಗ ಪಾತ್ರ ಮಾಡಿದ್ದಾರೆ. ಮದುವೆ ವಯಸ್ಸಿಗೆ ಬಂದ ಹುಡುಗಿಯನ್ನು ಅವರ ಮನೆಯವರು ಮತ್ತೆ ಸಮಾಜದವರು ಹೇಗೆ ನೋಡುತ್ತಾರೆ ಎನ್ನುವ ವಿಷಯದ ಮೇಲೆ ಚಿತ್ರದ ಕಥೆ ಇದೆ.

ಇತ್ತೀಚಿಗಷ್ಟೆ 'ಪತಿ ಬೇಕು.ಕಾಮ್' ಸಿನಿಮಾದ ಒಂದು ಹಾಡು ಬಿಡುಗಡೆಯಾಗಿದೆ. 'ಆಡುಸ್ತ ದ್ಯಾವರೇ..' ಹಾಡು ಯೂ ಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.
English summary
Kannada actress Sheetal Shetty 'Pathi Beku.Com' movie will be releasing this friday ( September 7th).


Click it and Unblock the Notifications