ಶೀತಲ್ ಹುಟ್ಟುಹಬ್ಬಕ್ಕೆ ಬಂತು 'ಪತಿ ಬೇಕು.com ಫಸ್ಟ್ ಲುಕ್
Recommended Video

ಶೀತಲ್ ಹುಟ್ಟುಹಬ್ಬಕ್ಕೆ ಸಿಕ್ತು ಸ್ಪೆಷಲ್ ಗಿಫ್ಟ್ ..! | Filmibeat Kannada
ಖ್ಯಾತ ನಿರೂಪಕಿ, ನಟಿ ಶೀತಲ್ ಶೆಟ್ಟಿ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಈ ವರ್ಷದ ಅವರ ಹುಟ್ಟುಹಬ್ಬಕ್ಕೆ 'ಪತಿ ಬೇಕು.com' ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
'ಪತಿ ಬೇಕು.com' ಶೀತಲ್ ಶೆಟ್ಟಿ ಅಭಿನಯದ ಹೊಸ ಸಿನಿಮಾವಾಗಿದೆ. ಈ ಚಿತ್ರದ ಕಥೆ ಒಬ್ಬ ಮಧ್ಯಮ ವರ್ಗದ ಹುಡುಗಿಯ ಮೇಲೆ ನಿಂತಿದೆ. ಮಿಡಲ್ ಕ್ಲಾಸ್ ಮನೆಗಳಲ್ಲಿ ಹೆಣ್ಣುಮಕ್ಕಳ ಮದುವೆ ಮಾಡುವುದು ಎಷ್ಟು ಕಷ್ಟ ಎನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ವಿಷಯ ಅನೇಕ ಕುಟುಂಬಗಳಿಗೆ ಹತ್ತಿರ ಆಗಲಿದೆ ಎನ್ನುವುದು ಚಿತ್ರತಂಡದ ವಿಶ್ವಾಸ. ಇನ್ನು ರಾಕೇಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅವರು 'ತರ್ಲೆ ನನ್ ಮಕ್ಳು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

'ಪತಿ ಬೇಕು.com' ಚಿತ್ರತಂಡ ಶೀತಲ್ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿಸಿ ಆಚರಿಸಿದೆ. ಜೊತೆಗೆ ಫಸ್ಟ್ ಲುಕ್ ಅನ್ನು ಉಡುಗೊರೆಯಾಗಿ ನೀಡಿದೆ. ಅಂದಹಾಗೆ, ಈ ಚಿತ್ರದ ಜೊತೆಗೆ ಶೀತಲ್ 'ಚೇಸ್' ಎಂಬ ಚಿತ್ರದಲ್ಲಿ ಸಹ ಬಿಜಿ ಇದ್ದಾರೆ.
More from Filmibeat
English summary
Kannada actress Sheetal Shetty 'Pathi Beku.Com' movie first look released


Click it and Unblock the Notifications











