ವಿಡಿಯೋ : ನಾಯಕಿಯ ಬಳಿಕ ನಿರ್ದೇಶಕಿಯಾದ ಶೀತಲ್ ಶೆಟ್ಟಿ
ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ ನಾಯಕಿ ಆದರು. ಅವರ 'ಪತಿ ಬೇಕು.ಕಾಂ' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿತ್ತು. ಆದರೆ, ಈಗ ಶೀತಲ್ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಶೀತಲ್ ಶೆಟ್ಟಿ ಈಗ ಒಂದು ಕಿರುಚಿತ್ರದ ಮೂಲಕ ನಿರ್ದೇಶಕಿಯಾಗಿದ್ದಾರೆ. 'ಸಂಗಾತಿ' ಎಂಬ ಕಿರುಚಿತ್ರಕ್ಕೆ ಶೀತಲ್ ಆಕ್ಷನ್ ಕಟ್ ಹೇಳಿದ್ದಾರೆ. ಒಬ್ಬ ಮಹಿಳಾ ಸುತ್ತ ಈ ಚಿತ್ರದ ಕಥೆ ಇದೆ. ಕಥೆಯನ್ನು ಸಹ ಅವರೇ ಬರೆದಿದ್ದಾರೆ.
ಒಬ್ಬಂಟಿಯಾಗಿರುವ ಒಬ್ಬ ಮಹಿಳೆಗೆ ಸಂಗಾತಿ ಮುಖ್ಯ. ಅದೇ ರೀತಿ ಈ ಕಥೆಯಲ್ಲಿ ಬರುವ ನಾಯಕಿಗೂ ಸಂಗಾತಿ ಸಿಗುತ್ತಾರೆ, ಆ ಸಂಗಾತಿ ಯಾರು ಎಂದು ತಿಳಿಯಬೇಕು ಎಂದರೆ ಕಿರುಚಿತ್ರವನ್ನೇ ನೋಡಬೇಕು

ರೂಪ ರವೀಂದ್ರನ್ ಈ ಕಿರುಚಿತ್ರದ ನಾಯಕಿಯಾಗಿ ಕಂಗೊಳಿಸಿದ್ದಾರೆ. ಚಿತ್ರದ ತುಂಬ ಅವರೇ ತುಂಬಿಕೊಂಡಿದ್ದಾರೆ. ಉದ್ದಿತ್ ಹರಿಥಸ್ ಮ್ಯೂಸಿಕ್ ನೀಡಿದ್ದಾರೆ. ಎಂ ಸಿ ಮಹೇಶ್ ಸಾಹಿತ್ಯ ಬರೆದಿದ್ದಾರೆ.
English summary
Kannada actress Sheethal Shetty direction 'Sangaati' short movie released


Click it and Unblock the Notifications