ಶೀತಲ್ ಶೆಟ್ಟಿಯ ಈ 'ಡೈಲಾಗ್' ಸೌಂಡ್ ಮಾಡೋದು ಪಕ್ಕಾ

By Bharath Kumar

ಟೈಟಲ್ ನಿಂದಲೇ ಹೆಚ್ಚು ಗಮನ ಸೆಳೆಯುತ್ತಿರುವ ಶೀತಲ್ ಶೆಟ್ಟಿಯ ಸಿನಿಮಾ ಈಗ ಟೀಸರ್ ರಿಲೀಸ್ ಮಾಡಿ ಮತ್ತೆ ಮೋಡಿ ಮಾಡಿದೆ.

ನಟಿ ಹಾಗೂ ನಿರೂಪಕಿ ಶೀತಲ್ ಶೆಟ್ಟಿ 'ಪತಿಬೇಕು.ಕಾಂ' ಚಿತ್ರದಲ್ಲಿ ಅಭಿನಯಿಸುತ್ತಿರೋದು ಗೊತ್ತೆ ಇದೆ. ಈಗಾಗಲೇ ಈ ಚಿತ್ರದ ಮೋಷನ್ ಪೋಸ್ಟರ್ ಮತ್ತು ಮೇಕಿಂಗ್ ಚಿತ್ರಗಳು ಗಮನ ಸೆಳೆಯುತ್ತಿದೆ. ಇದೀಗ, 47 ಸೆಕೆಂಡ್ ಗಳ ಟೀಸರ್ ಬಿಡುಗಡೆಯಾಗಿದ್ದು, ಡೈಲಾಗ್ ನಿಂದಲೇ ಸದ್ದು ಮಾಡುತ್ತಿದೆ.

ಲವ್ ಮ್ಯಾರೇಜ್ ಮತ್ತು ಅರೆಂಜ್ ಮ್ಯಾರೇಜ್ ಬಗ್ಗೆ ವಿಶ್ಲೇಷಣೆ ನೀಡುವ ಶೀತಲ್ ಶೆಟ್ಟಿ ತಮ್ಮದೇ ಸ್ಟೈಲ್ ನಲ್ಲಿ ಇದಕ್ಕೆ ವ್ಯಾಖ್ಯಾನ ನೀಡಿರುವುದು ಟೀಸರ್ ನ ಹೈಲೈಟ್.

sheethal shetty starrer pathibeku.com teaser

''ಊರೋರ್ಗೆಲ್ಲಾ ಹೆದರಿಕೊಂಡು ಇಬ್ಬರು ರೂಂ ಒಳಗೆ ಸೇರಿಕೊಂಡ್ರೆ ಅದು ಲವ್ ಮ್ಯಾರೇಜ್. ಊರೋರೆಲ್ಲಾ ಸೇರಿ ಇಬ್ಬರನ್ನ ರೂಂಗೆ ಬಿಟ್ರೆ ಅದು ಅರೇಂಜ್ ಮ್ಯಾರೇಜ್. ಒಟ್ನಲ್ಲಿ, ರೂಂಗೆ ಹೋಗೋಕೆ ಹೊಡೆದಾಡ್ತಾರೆ ಅಷ್ಟೇ''

ಈ ಡೈಲಾಗ್ ಈಗ 'ಪತಿಬೇಕು.ಕಾಂ' ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ, ಭರವಸೆ ಮೂಡಿಸಿದೆ. ಇನ್ನುಳಿದಂತೆ ರಾಕೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶೀತಲ್ ಶೆಟ್ಟಿ, ಕೃಷ್ಣ ಅಡಿಗ ಅಭಿನಯಿಸಿದ್ದಾರೆ.

'ತರ್ಲೆ ನನ್ ಮಕ್ಳು' ಚಿತ್ರ ಮಾಡಿದ್ದ ರಾಕೇಶ್ ಅವರೇ ನಿರ್ದೇಶನದ ಜೊತೆಗೆ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಕೌಷಿಕ್ ಹರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ.

More from Filmibeat

English summary
kannada actress sheethal shetty starrer pathibeku.com movie teaser released. the movie directed by rakesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X