'ಆಂಟಿ' ಎಂದು ಕರೆದ ನೆಟ್ಟಿಗನನ್ನು ತರಾಟೆಗೆ ತೆಗೆದುಕೊಂಡ ದರ್ಶನ್ ನಾಯಕಿ

ನಟಿಮಣಿಯರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿದ್ದಾರೆ. ಅದರಲ್ಲೂ ಲಾಕ್ ಡೌನ್ ಹಿನ್ನಲೆ ಮನೆಯಲ್ಲಿಯೆ ಇರುವ ನಟಿಮಣಿಯರು ಅಭಿಮಾನಿಗಳ ಜೊತೆ ಮಾತನಾಡಲು ಸಾಮಾಜಿಕ ಜಾಲತಾಣವನ್ನು ಹೆಚ್ಚು ಬಳಸುತ್ತಿದ್ದಾರೆ. ಜೊತೆಗೆ ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರಿಸುತ್ತಿರುತ್ತಾರೆ.

Recommended Video

ಬೋರ್ ಆಯ್ತು ಎಂದು ಆಚೆ ಬರಬೇಡಿ ಎಂದ ಡಾಲಿ ಧನಂಜಯ್ | Dolly Dhananjay | Stay Home Stay Safe|Filmibeat Kannada

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಶೆರಿನ್ ಶ್ರೀನಗರ್ ಗೆ ಆಂಟಿ ಎಂದು ಕರೆದ ನೆಟ್ಟಿಗನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಮಲಯಾಳಂ ನಟಿ ಸಂಯುಕ್ತ ಮೆನನ್ ಗೆ ನೆಟ್ಟಿಗನೊಬ್ಬ "ನೀವು ವರ್ಜಿನ್ ಆಗಿದ್ದೀರಾ..?" ಎಂದು ಪ್ರಶ್ನೆ ಕೇಳಿ ಮುಟ್ಟಿನೋಡಿಕೊಳ್ಳುವಂತ ಪ್ರತಿಕ್ರಿಯೆ ಸಿಕ್ಕಿತ್ತು.

ಇದರ ಬೆನ್ನಲ್ಲೆ ಈಗ ದರ್ಶನ್ ಅಭಿನಯದ ಭೂಪತಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ಶೆರಿನ್ ಶ್ರೀನಗರ್ ಸಹ ನೆಟ್ಟಿಗನ ಪ್ರತಿಕ್ರಿಯೆಗೆ ಖಡಕ್ ಉತ್ತರ ನೀಡಿದ್ದಾರೆ. ಮುಂದೆ ಓದಿ...

ಶೆರಿನ್ ಗೆ ಆಂಟಿ ಎಂದ ನೆಟ್ಟಿಗ

ಶೆರಿನ್ ಗೆ ಆಂಟಿ ಎಂದ ನೆಟ್ಟಿಗ

ಇತ್ತೀಚಿಗೆ ಶೆರಿನ್ ಇನ್ಸ್ಟಾಗ್ರಾಮ್ ನಲ್ಲಿ ಒಂದಿಷ್ಟು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದರೆ ನೆಟ್ಟಿಗನೊಬ್ಬ ಶೆರಿನ್ ಫೋಟೋಗೆ ಆಂಟಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. "ನೀವು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಾಗ ನೀವು ಮಧ್ಯವಯಸ್ಕ ಆಂಟಿಯಂತೆ ಕಾಣುತ್ತಿದ್ದೀರಿ. ನನ್ನ ಹಾಗೆ ಅನೇಕರು ಹೀಗೆ ಹೇಳುತ್ತಿದ್ದಾರೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನೆಟ್ಟಿಗನನ್ನು ತರಾಟೆಗೆ ತೆಗೆದುಕೊಂಡ ನಟಿ

ನೆಟ್ಟಿಗನನ್ನು ತರಾಟೆಗೆ ತೆಗೆದುಕೊಂಡ ನಟಿ

ಜನರು ನಾವು ಹೇಗೆ ಕಾಣಿಸುತ್ತೇವೆ ಎನ್ನುವ ಆಧಾರದ ಮೇಲೆ ಬೇಗ ಜಡ್ಜ್ ಮಾಡುತ್ತಾರೆ. ನಾವು ನಿಜವಾಗಿಯು ಬಾಹ್ಯ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಇದು ಸ್ವಯಂ ಪ್ರೀತಿ ಮತ್ತು ಸ್ವಯಂ ಸ್ವೀಕಾರದ ಪರಿಕಲ್ಪನೆಯೊಂದಿಗೆ ಬದುಕಲು ಕಲಿಸುತ್ತೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಂತರ ಕ್ಷಮೆಯಾಚಿಸಿದ ನೆಟ್ಟಿಗ

ನಂತರ ಕ್ಷಮೆಯಾಚಿಸಿದ ನೆಟ್ಟಿಗ

ನಟಿ ಪ್ರತಿಕ್ರಿಯೆ ನೀಡುತ್ತಿದ್ದಂತೆ ನೆಟ್ಟಿಗ ಕ್ಷಮೆಯಾಚಿಸಿದ್ದಾನೆ. ಬಿಗ್ ಬಾಸ್ ನಲ್ಲಿ ಹಾಗೆ ಕಾಣಿಸುತ್ತಿದ್ದೀರಿ. ಆದರೆ ಈ ಫೋಟೋದಲ್ಲಿ ತುಂಬ ಸುಂದರವಾಗಿ ಕಾಣಿಸಿುತ್ತಿದ್ದೀರಿ. ನಾನು ಮಾಡಿದ ಪೋಸ್ಟ್ ಗೆ ಕ್ಷಮೆಯಾಚಿಸುತ್ತೇನೆ. ನಾನು ನಿಮ್ಮ ದೊಡ್ಡ ಅಭಿಮಾನಿ. ನೀವು ತುಂಬ ಒಳ್ಳೆಯವರು. ಯಾವಾಗಲು ಸಂತೋಷವಾಗಿರಿ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡದ ನಟಿ ಶೆರಿನ್

ಕನ್ನಡದ ನಟಿ ಶೆರಿನ್

ಶೆರಿನ್ ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡದ 'ಪೊಲೀಸ್ ಡಾಗ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಶೆರಿನ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 34 ವರ್ಷದ ನಟಿ ಕನ್ನಡಗಿಂತ ಹೆಚ್ಚಾಗಿ ತಮಿಳು ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದಾರೆ. ಭೂಪತಿ ಸಿನಿಮಾ ಶೆರಿನ್ ಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟ ಸಿನಿಮಾವಾಗಿದೆ. ಧ್ರುವ, ಭೂಪತಿ, ಸಿಹಿಗಾಳಿ ಸೇರಿದಂತೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಬಿಗ್ ಬಾಸ್-3 ನಲ್ಲಿ ಭಾಗಿಯಾಗಿದ್ದರು

ಬಿಗ್ ಬಾಸ್-3 ನಲ್ಲಿ ಭಾಗಿಯಾಗಿದ್ದರು

ಶೆರಿನ್ ಕೊನೆಯದಾಗಿ ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. 2015ರಲ್ಲಿ ಕೊನೆಯದಾಗಿ ತೆರೆಮೇಲೆ ಮಿಂಚಿದ್ದರು. ಕನ್ನಡದಲ್ಲಿ ಕೊನೆಯದಾಗಿ 2012ರಲ್ಲಿ ಎಕೆ 56 ಸಿನಿಮಾದಲ್ಲಿ ಬಣ್ಣಹಚ್ಚಿದ್ದರು. ಆ ನಂತರ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ವರ್ಷ ತಮಿಳು ಬಿಗ್ ಬಾಸ್-3 ನಲ್ಲಿ ಶೆರಿನ್ ಭಾಗಿಯಾಗಿದ್ದರು. ಮೂರನೆ ರನ್ನರ್ ಅಪ್ ಆಗಿ ಮನೆಯಿಂದ ಹೊರಬಂದಿದ್ದರು.

More from Filmibeat

English summary
Actress Sherin Shringar bold reaction to who called her Aunty in Social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X