ರಾಗಿಣಿಯ ಪ್ರೇಮಪಾಶದಲ್ಲಿ ಸಿಲುಕಿದ್ದಾರಾ ಡಿಂಗ್ರಿ ನಾಗರಾಜ್ ಮಗ ರಾಜವರ್ಧನ್ ? ಇಲ್ಲಿದೆ ಸತ್ಯ
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇನ್ನು.. ಯಾವುದಾದರೂ ಕಾರ್ಯಕ್ರಮದಲ್ಲಿ ಜೊತೆ ನಾಯಕ-ನಾಯಕಿ ಜೊತೆಯಾಗಿ ಕುಳಿತು ಕಿಲ ಕಿಲ ಎಂದು ನಕ್ಕರೆ ಸಾಕು...
ಇಬ್ಬರನ್ನು ಅನುಮಾನದ ದೃಷ್ಟಿಯಿಂದ ನೋಡಲು ಶುರು ಮಾಡುತ್ತಾರೆ. ಮೂರು ನಾಲ್ಕು ಸಲ ಜೊತೆ ಜೊತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರಂತೂ ಮುಗಿದೇ ಹೋಯ್ತು. ಇನ್ನೇನೂ ಇಬ್ಬರು ಮದುವೆ ಆಗಲಿದ್ದಾರಂತೆ ಎಂದು ಕಥೆ ಹೆಣೆದು ಬಿಡುತ್ತಾರೆ. ಉದಾಹರಣಗೆ ''ರಾಜವರ್ಧನ್'' ಮತ್ತು ''ರಾಗಿಣಿ ದ್ವಿವೇದಿ'' ಅವರ ವಿಚಾರವನ್ನೇ ತೆಗೆದುಕೊಳ್ಳಿ.

ಹೌದು.. ರಾಜವರ್ಧನ್ ಕನ್ನಡ ಚಿತ್ರರಂಗದ ಭರವಸೆಯ ನಾಯಕ. ಡಿಂಗ್ರಿ ನಾಗರಾಜ್ ಮಗನಾದ ರಾಜವರ್ಧನ್ ಸದ್ಯ ತಮ್ಮ ಅಸ್ತಿತ್ವದ ಹುಡುಕಾಟ ನಡೆಸಿದ್ಧಾರೆ. ತಂದೆಯ ನೆರಳಿನಾಚೆ ಬದುಕು ಕಟ್ಟಿಕೊಳ್ಳುವ ಆಶಯದಿಂದ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಾ ಪ್ರೇಕ್ಷಕರ ಹೃದಯ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ಮತ್ತೊಂದು ಕಡೆ ಪಂಜಾಬ್‌ನ ಪೋರಿ ರಾಗಿಣಿ ಕೂಡ ಕನ್ನಡದಲ್ಲಿ ಮತ್ತೊಂದು ಸುತ್ತಿನ ಪ್ರಯತ್ನವನ್ನು ಮಾಡುತ್ತಿದ್ದಾರೆ. ''ಸರ್ಕಾರಿ ನ್ಯಾಯ ಬೆಲೆ ಅಂಗಡಿ''.. ''ಸಿಂಧೂರಿ''.. ಸೇರಿ ಕೆಲ ಚಿತ್ರಗಳನ್ನು ಮಾಡುತ್ತಿದ್ದಾರೆ.
ಇಂಥಾ ರಾಜವರ್ಧನ್ ಮತ್ತು ರಾಗಿಣಿ ನಡುವೆ ಪ್ರೇಮಾಂಕುರವಾಗಿದ ಎನ್ನುವ ಸುದ್ದಿಯನ್ನು ಕೆಲವರು ಹಬ್ಬಿಸಿದ್ದಾರೆ. ಇದಕ್ಕೆ ಪೂರಕವಾಗಿ ಈ ಹಿಂದೆ ''ಗಜರಾಮ'' ಎಂಬ ಚಿತ್ರವನ್ನು ಜೊತೆಯಲ್ಲಿ ಮಾಡಿದ್ದ ರಾಜವರ್ಧನ್ ಮತ್ತು ರಾಗಿಣಿ ಸದ್ಯ ''ಜಾವಾ'' ಎಂಬ ಚಿತ್ರವನ್ನು ಮಾಡುತ್ತಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಸಭೆ-ಸಮಾರಂಭ ಇರಲಿ.. ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮವೇ ಇರಲಿ.. ರಾಜವರ್ಧನ್ ಮತ್ತು ರಾಗಿಣಿ ಜೊತೆಯಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರ ಈ ನಡೆ ಹಲವರಲ್ಲಿನ ಅನುಮಾನ ಹೆಚ್ಚಿಸಿದ್ದು ಇಬ್ಬರ ಸಂಬಂಧದ ಕುರಿತು ಹಬ್ಬಿರುವ ಸುದ್ದಿಯನ್ನು ಹಲವರು ಸೋಶಿಯಲ್ ಮೀಡಿಯಾದಲ್ಲಿ ನಿಜಾ ಎಂದೇ ಎಂದುಕೊಂಡಿದ್ದಾರೆ. ಈ ಕುರಿತು ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ.
ಸದ್ಯ ತಮ್ಮ ಇಬ್ಬರ ಕುರಿತು ಹರಡಿಕೊಂಡಿರುವ ಈ ಸುದ್ದಿಗೆ ಖುದ್ದು ರಾಜವರ್ಧನ್ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ''ನ್ಯೂಸ್ ಫಸ್ಟ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಜವರ್ಧನ್, ಸಿನಿಮಾ ಮೂಲಕ ಅವರು ನನಗೆ ಜೊತೆಯಾದರು, ಅಲ್ಲಿಂದ ತುಂಬಾ ಬೆಂಬಲವಾಗಿ ಅವರು ನನ್ನ ಜೊತೆ ನಿಂತರು ಎಂದು ಹೇಳಿದ್ದಾರೆ. ಅವರ ವೃತ್ತಿ ಜೀವನವನ್ನು ನೀವು ಗಮನಿಸದರೆ ದೊಡ್ಡ ದೊಡ್ಡ ಹೀರೋಗಳ ಜೊತೆ ಅವರು ಅಭಿನಯಿಸಿದ್ದಾರೆ. ಆದರೆ ನನಗೆ ನೀಡಿದಷ್ಟು ಬೆಂಬಲವನ್ನು ಅವರು ಯಾರಿಗೂ ನೀಡಿಲ್ಲ ಎಂದು ಹೇಳಿದ್ದಾರೆ.
ಇನ್ನು ನನ್ನ ಮತ್ತು ರಾಗಿಣಿ ಅವರ ಆಲೋಚನೆಗಳು ಒಂದೇ. ಇಬ್ಬರು ತುಂಬಾನೇ ಕೆಲಸ..ಕೆಲಸ.. ಎಂದು ಓಡಾಡಿಕೊಂಡು ಇರುತ್ತೇವೆ. ಬಹುಶಃ ಆ ಕೆಲಸ ನಮ್ಮ ನಡುವಿನ ಸ್ನೇಹದ ಕೊಂಡಿಯಾಯ್ತು ಎಂದು ಹೇಳಿರುವ ರಾಜವರ್ಧನ್ ನಾವು ಬೇರೆ ಮ್ಯಾಗ್‌ಜೀನ್‌ನ ತೆಗೆದುಕೊಂಡು ಅದನ್ನು ಬೇರೆ ಹಂತಕ್ಕೆ ಕೊಂಡೊಯ್ಯಬೇಕು, ಪ್ರಶಶ್ತಿ ಪ್ರದಾನ ಸಮಾರಂಭಗಳನ್ನು ಮಾಡಬೇಕೆಂಬ ಉದ್ದೇಶದಿಂದ ಇಬ್ಬರು ಕೆಲಸ ಮಾಡಲು ಶುರು ಮಾಡಿದ್ವಿ ಎಂದು ಹೇಳಿದ್ದಾರೆ.
ಇನ್ನು ಇದರ ನಡುವೆ ''ಜಾವಾ'' ಎನ್ನುವ ಸಿನಿಮಾ ಕೂಡ ಶುರುವಾಯ್ತು, ಇದೇ ಸಮಯದಲ್ಲಿ ಅವರದ್ದೇ ನಿರ್ಮಾಣ ಸಂಸ್ಥೆ ಶುರುವಾಯ್ತು, ನಾನು ಕೂಡ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದೇನೆ, ಮುಂಬರುವ ದಿನಗಳಲ್ಲಿ ನಮ್ಮ ಇಬ್ಬರ ಸಂಸ್ಥೆಯಡಿ ಹಲವು ಚಿತ್ರಗಳನ್ನು ಹೊಸಬರಿಗೆ ನಿರ್ಮಾಣ ಮಾಡಲು ನಾವು ಯೋಜನೆ ಹಾಕಿಕೊಂಡಿದ್ದೇವೆ, ಈ ಎಲ್ಲಾ ಕಾರಣಗಳಿಂದ ನಾವು ಆಗಾಗ ಜೊತೆಯಲ್ಲಿ ಕಾಣಿಸಿಕೊಳ್ಳುತ್ತೇವೆ ಎಂದು ಹೇಳಿರುವ ರಾಜವರ್ಧನ್ ಈಗ ಹೇಗಾಗಿದೆ ಅಂದರೆ ನಮ್ಮನ್ನು ಕಾರ್ಯಕ್ರಮಗಳಿಗೆ ಕರೆಯುವವರು ಕೂಡ ಇಬ್ಬರನ್ನು ಜೊತೆಯಾಗಿಯೇ ಕರೆಯುತ್ತಿದ್ದಾರೆ. ಹೀಗಾಗಿ ಹೆಚ್ಚಾಗಿ ಕ್ಯಾಮರಾ ಕಣ್ಣಿಗೆ ನಾವು ಇಬ್ಬರು ಬೀಳ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಜನರಲ್ಲಿ ನಮ್ಮಿಬ್ಬರ ಕುರಿತು ಆ ತರಹದ ಭಾವನೆ ಬಂದಿರಬಹುದು, ಅವರು ಕೂಡ ಕಾಮೆಂಟ್‌ಗಳನ್ನು ಮಾಡಿರಬಹುದು ಎಂದು ಹೇಳಿರುವ ರಾಜವರ್ಧನ್, ಅವರದ್ದೂ ತಪ್ಪಲ್ಲ ಅವರಿಗೆ ಅನಿಸಿದ್ದನ್ನು ಅವರು ವ್ಯಕ್ತಪಡಿಸಿದ್ದಾರಷ್ಟೇ ಎಂದು ಕೂಡ ಹೇಳಿದ್ದಾರೆ. ಅಂದ್ಹಾಗೇ ದಿವ್ಯಾ ಅವರನ್ನು ರಾಜವರ್ಧನ್ ಮದುವೆಯಾಗಿದ್ದಾರೆ. ಕಳೆದ ತಿಂಗಳಷ್ಟೇ ಮಾಲ್ಡೀವ್ಸ್‌ನಲ್ಲಿ ವಿವಾಹ ವಾರ್ಷಿಕೋತ್ಸವವನ್ನು ಕೂಡ ಆಚರಿಸಿಕೊಂಡಿದ್ದಾರೆ.


Click it and Unblock the Notifications











