twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯ ಸರ್ಕಾರದ ವಿರುದ್ಧ ಗುಟುರು ಹಾಕಿದ ಗಣೇಶ್ ಪತ್ನಿ

    By Harshitha
    |

    ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಪ್ರಕರಣದಿಂದ ವಿಧಾನ ಮಂಡಲದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅಹೋರಾತ್ರಿ ಧರಣಿ ಮಾಡಿದರೂ ಕೂಡ ಕೆ.ಜೆ.ಜಾರ್ಜ್ ರಾಜೀನಾಮೆ ಕೊಡಲು ತಯಾರಿಲ್ಲ.

    ಸಚಿವ ಕೆ.ಜೆ.ಜಾರ್ಜ್ ಪರ ಬ್ಯಾಟಿಂಗ್ ಮುಂದುವರಿಸಿರುವ ಸಿ.ಎಂ.ಸಿದ್ಧರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗುಟುರು ಹಾಕಿದ್ದಾರೆ. ['ಜಾರ್ಜ್ ರಾಜೀನಾಮೆ ಪಡೆದು, ಉತ್ತರ ಕೊಡಿ']

    Shilpa Ganesh visits DySP Ganapathi family in Kodagu

    ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಕೂಡ ಆಗಿರುವ ಶಿಲ್ಪಾ ಗಣೇಶ್ ಇಂದು ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ಇರುವ ಡಿ.ವೈ.ಎಸ್.ಪಿ ಗಣಪತಿ ಅವರ ಸ್ವಗ್ರಾಮ ರಂಗಸಮುದ್ರಕ್ಕೆ ಭೇಟಿ ನೀಡಿ, ಗಣಪತಿ ಪತ್ನಿ ಪಾವನಾ ಅವರಿಗೆ ಸಾಂತ್ವನ ಹೇಳಿದರು. [ನ್ಯಾಯಾಂಗ ತನಿಖೆ ಮೇಲೆ ನಂಬಿಕೆ ಇಲ್ಲ: ಗಣಪತಿ ಪತ್ನಿ ಪಾವನಾ]

    shilpa-ganesh-visits-dysp-ganapathi-family-in-kodagu-022026

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಿಲ್ಪಾ ಗಣೇಶ್, ''ನೈತಿಕ ಬೆಂಬಲ ನೀಡಲು ಗಣಪತಿ ನಿವಾಸಕ್ಕೆ ಭೇಟಿ ನೀಡಿದ್ದೇನೆ. ಅವರ ಸಮಸ್ಯೆಗಳನ್ನ ನಮ್ಮ ಬಳಿ ಹೇಳಿಕೊಂಡಿದ್ದಾರೆ. ಅದನ್ನ ಯಾರಿಗೆ ಹೇಳಬೇಕೋ, ಹೇಳ್ತೀವಿ. ನಾವು ಇಲ್ಲಿ ಬಂದಿದ್ದು ಒಳ್ಳೆಯದ್ದೇ ಆಯ್ತು.''[ರಾಜಕೀಯಕ್ಕೂ ಸಿನಿಮಾಗೂ ಡೈವೋರ್ಸೇ ಹೆಚ್ಚು]

    shilpa-ganesh-visits-dysp-ganapathi-family-in-kodagu-022026

    ''ಪಕ್ಷದ ಕಡೆಯಿಂದ ಬಂದಿದ್ದೀನಿ ಅಂದ ಮಾತ್ರಕ್ಕೆ ಅದು ಪೊಲಿಟಿಸೈಸ್ ಆಗೋದು ಬೇಡ. ಒಂದು ಹೆಣ್ಣಾಗಿ, ತಾಯಿ ಆಗಿ ನಾನು ಇಲ್ಲಿಗೆ ಬಂದಿದ್ದೇನೆ. ಇವತ್ತು ಬಂದ್ ಇದೆ ಅಂತ ಗೊತ್ತಾದರೂ ಕೂಡ ಬಂದು, ಅವರನ್ನ ಮೀಟ್ ಮಾಡಿದ್ದೇವೆ.'' [ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?]

    ''ರಾಜ್ಯ ಸರ್ಕಾರಕ್ಕೆ ಅಷ್ಟು ಧೈರ್ಯ ಇದ್ದರೆ ಗಣಪತಿ ಆತ್ಮಹತ್ಯೆ ಪ್ರಕರಣವನ್ನ ಸಿ.ಬಿ.ಐ ತನಿಖೆಗೆ ಕೊಟ್ಟುಬಿಡಲಿ. ಅವರು ತಪ್ಪು ಮಾಡಿದ್ದಾರೆ ಅಂತ ಗೊತ್ತಿರುವುದಕ್ಕೆ ಅದನ್ನ ಮುಚ್ಚಲು ನೋಡುತ್ತಿದ್ದಾರೆ'' ಅಂತ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

    English summary
    Kannada Actor Ganesh wife Shilpa, who is also BJP State Mahila Morcha Vice President visited DySP Ganapathi house in Rangasamudra (Somvarpert, Kodagu) today (July 14th) and offered condolences to Ganapathi's family.
    Thursday, July 14, 2016, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X