»   » ಜ್ಯೋತಿ ಸಂಪ್ರದಾಯ ಬದ್ಧವಾಗಿ ಹಸಮಣೆ ಏರಿದ್ದಾರೆ.

ಜ್ಯೋತಿ ಸಂಪ್ರದಾಯ ಬದ್ಧವಾಗಿ ಹಸಮಣೆ ಏರಿದ್ದಾರೆ.

Posted By: Staff
Subscribe to Filmibeat Kannada

ನ್ನಡದ ಉದಯೋನ್ಮುಖ ನಟಿ ಅನು ಪ್ರಭಾಕರ್‌ ಅಮೆರಿಕದ ಹುಡುಗನ್ನ ಮದುವೆ ಆಕ್ತಾ ಇದ್ದಾರೆ ಎನ್ನುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ, 'ಇಲ್ಲ ಇಲ್ಲ ನಾನು ಮದುವೆ ಆಕ್ತಾ ಇಲ್ಲ " ಎನ್ನುವ ನಿರಾಕರಣೆ ಅನುಪ್ರಭಾಕರ್‌ರಿಂದಲೇ ಬಂತು. ಇದಕ್ಕೂ ಮುನ್ನ ಜನುಮದ ಜೋಡಿಯ ಶಿಲ್ಪ ಎನ್ನುವ ಆಮದು ತಾರೆ ಮದುವೆ ಆದರು ಎಂಬ ಸುದ್ದಿಯೂ ಸ್ಯಾಂಡಲ್‌ವುಡ್‌ನಲ್ಲಿ ಹಬ್ಬಿತ್ತು.

ಶಿಲ್ಪಾ ಕೂಡ ತಾವು ಮದುವೆನೇ ಆಗಿಲ್ಲ ಇದು ಕೇವಲ ಚಾರುಲತೆಯ ಸೃಷ್ಟಿ ಎಂದು ತಮ್ಮ ಮದುವೆಯ ಸುದ್ದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಇನ್ನು ಮೂರು ವರ್ಷ ಯಾವುದೇ ಕಾರಣಕ್ಕೂ ಮದುವೆ ಆಗೋದೇ ಇಲ್ಲ ಎಂದು ಪ್ರಮಾಣ ಮಾಡಿದವರಂತೆ ಮಾತಾಡಿದ್ದರು. ಆದರೆ, ಈಗ ಶಿಲ್ಪ , ಏಕಾ ಏಕಿ ಸಿನಿಮೀಯ ರೀತಿಯಲ್ಲಿ ಮದುವೆಯಾಗಿದ್ದಾರೆ. ಅದೂ ಮನೆ ಬಿಟ್ಟು ಓಡಿ ಹೋಗಿ.

ಶಿಲ್ಪ ಳ ಕೈಹಿಡಿದ ವರ ಮಲೆಯಾಳಂ ಚಿತ್ರಗಳ ಪ್ರೊಡಕ್ಷನ್‌ ಕಂಟ್ರೋಲರ್‌ ರಣಜಿತ್‌. ಶಿಲ್ಪ - ರಣಜಿತ್‌ ಬಹಳ ವರ್ಷಗಳಿಂದ ಪ್ರೀತಿಸ್ತಾ ಇದ್ದರಂತೆ. ಯಥಾಪ್ರಕಾರ ಮನೆಯವರು ಒಪ್ಪದಿದ್ದಾಗ, ಥೇಟ್‌ ಸಿನಿಮಾ ಸ್ಟೈಲ್‌ನಲ್ಲೇ ಓಡಿ ಹೋಗಿ ಮದುವೆ ಆಗಿದ್ದಾರೆ. ಯಾವುದಕ್ಕೂ ಮದುವೆ ಗಟ್ಟಿಯಾಗಿರಲಿ ಎಂದು ಮತ್ತೊಮ್ಮೆ ರಿಜಿಸ್ಟರ್‌ ಮ್ಯಾರೇಜೂ ಆಗಿದ್ದಾರೆ. ಈ ವರ್ತಮಾನ ತಿರುವನಂತಪುರದಿಂದ ಬಂದಿದೆ.

ಜನಮದು ಜೋಡಿ ಚಿತ್ರದಲ್ಲಿ ಶಿವರಾಜ್‌ಕುಮಾರ್‌ರೊಂದಿಗೆ ನಾಯಕಿಯಾಗಿ ನಟಿಸಿದ ಕೇರಳದ ಈ ಆಮದು ನಟಿ, ಮುಂಗಾರಿನ ಮಿಂಚು, ಲಕ್ಷ್ಮೀ - ಮಹಾಲಕ್ಷ್ಮೀ, ಕೌರವ ಮೊದಲಾದ ಚಿತ್ರದಲ್ಲಿ ನಟಿಸಿರುವ ಚಿಪ್ಪಿ ಅರ್ಥಾತ್‌ ಶಿಲ್ಪ ಈಗ ಧರ್ಮ ದೇವತೆ, ಭೂಮಿ ತಾಯಿ ಮಕ್ಕಳು, ಇಲ್ಲೇ ಸ್ವರ್ಗ ಇಲ್ಲೇ ನರಕ ಮೊದಲಾದ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ಜ್ಯೋತಿ ಮದುವೆ : ಈ ಮಧ್ಯೆ ಹತ್ತಾರು ಕನ್ನಡ ಚಿತ್ರಗಳು ಹಾಗೂ ಟಿ.ವೀ. ಧಾರಾವಾಹಿಗಳಲ್ಲಿ ನಟಿಸಿದ ಪೋಷಕ ನಟಿ ಜ್ಯೋತಿ ಕೂಡ ಮದುವೆ ಆಗಿದ್ದಾರೆ. ರಾಮಾಚಾರಿ, ಕರುಣಾಮಯಿ, ಯಾರೆ ನೀನು ಚೆಲುವೆ, ಯುಗಪುರುಷ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಜ್ಯೋತಿ ಮದುವೆಯಾಗಿರುವ ಹುಡುಗ ಕೈಗಾರಿಕೋದ್ಯಮಿ. ಹೆಸರು ಗುರುಚರಣ್‌. ಇವರ ಮದುವೆ ಇತ್ತೀಚೆಗೆ ಬೆಂಗಳೂರಿನಲ್ಲಿ ನೆರವೇರಿತ-ಚಚ್ಚ್ಠಠಿಛಿ.

English summary
Kannada cine actress jyothi and shilpa tie knot
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada