»   » ಸಾಕ್ಷಿ ಶಿವಾನಂದ್‌ ಉರುಫ್‌ ಶೀಬಾಳ ಅಕ್ಕ ಶಿಕಾ ಉರುಫ್‌ ಶಿಲ್ಪ ವೆಬ್‌ ಡಿಸೈನರ್‌ ಕೆಲಸ ಬಿಟ್ಟು ಸಿನಿಮಾಗೆ ಸೇರಿದ್ದಾಳೆ. ಬಿಚ್ಚಮ್ಮನಾಗಲು ಸೈ ಎಂದರೂ, ಈಕೆ ಅಕ್ಕನಂತಲ್ಲ

ಸಾಕ್ಷಿ ಶಿವಾನಂದ್‌ ಉರುಫ್‌ ಶೀಬಾಳ ಅಕ್ಕ ಶಿಕಾ ಉರುಫ್‌ ಶಿಲ್ಪ ವೆಬ್‌ ಡಿಸೈನರ್‌ ಕೆಲಸ ಬಿಟ್ಟು ಸಿನಿಮಾಗೆ ಸೇರಿದ್ದಾಳೆ. ಬಿಚ್ಚಮ್ಮನಾಗಲು ಸೈ ಎಂದರೂ, ಈಕೆ ಅಕ್ಕನಂತಲ್ಲ

Subscribe to Filmibeat Kannada

ನಿಮಗೆ ನೆನಪಿದೆಯಾ; ಸೈನಿಕ ಚಿತ್ರೀಕರಣ ಶುರುವಾದ ಕೆಲವೇ ದಿನಗಳಲ್ಲಿ ಸಾಕ್ಷಿ ಶಿವಾನಂದ್‌ ಎಂಬ ನಟಿ ವಿವಾದಕ್ಕೆ ಸಿಲುಕಿದ್ದು? ಥೇಟ್‌ ತನ್ನದೇ ರೂಪಿನ ಅವಳಿ ಅಕ್ಕ ಶಿಕಾಳನ್ನು ಬೇಕಾದಾಗ ತನ್ನ ಬದಲಿಗೆ ಶೂಟಿಂಗ್‌ನಲ್ಲಿ ತೊಡಗಿಸುತ್ತಿದ್ದಳು ಅನ್ನುವುದು ಆ ಆರೋಪ. ಈ ಆರೋಪ ಮಾಡಿದ್ದವರು ಶಾಸಕ ಕಂ ಉದಯೋನ್ಮುಖ ನಟ (?) ಕಂ ’ಸೈನಿಕ’ ಯೋಗೇಶ್ವರ್‌. ಸಾಕಷ್ಟು ಯಬಡಾತಬಡಾ ಆದ ನಂತರ ಆಕೆಯ ಅಮ್ಮ ಸಮಜಾಯಿಷಿ ಕೊಟ್ಟು, ತನ್ನ ಮಗಳ ಪರವಾಗಿ ಮಾತಾಡಿ, ಪ್ರಕರಣ ತಣ್ಣಗಾಗುವಂತೆ ಮಾಡಿದ್ದರು.

ಶಿಕಾ ಅರ್ಥಾತ್‌ ಸಾಕ್ಷಿ (ಶೀಬಾ) ಯ ಅಕ್ಕ ಅವಳಿಯಲ್ಲ. ಜವಳಿಯೂ ಅಲ್ಲ. ಸಾಕ್ಷಿಗಿಂತ ಇಪ್ಪತ್ತು ತಿಂಗಳು ಮುಂಚೆ ಹುಟ್ಟಿದವಳು. ಅವಳು ಈಗ ತಾನೆ ಓದು ಮುಗಿಸಿ, ವೆಬ್‌ಡಿಸೈನ್‌ ಮಾಡುತ್ತಿದ್ದಾಳೆ ಅಂತ ಅವರಮ್ಮ ಸಮಜಾಯಿಷಿ ಕೊಟ್ಟು, ಯೋಗೇಶ್ವರ್‌ ಅವರನ್ನು ಸಮಾಧಾನ ಮಾಡಿದ್ದರು.


ಇದೀಗ ಉಪ್ಪಿ ನಾಯಕತ್ವದ ಡಿ.ರಾ. ಬಾಬು ನಿರ್ದೇಶನದ ಶೂಟಿಂಗ್‌ ಶುರುವಾಗುವ ಮುನ್ನವೇ ಕಿರಿಕ್‌ಗೆ ಈಡಾಗಿರುವ ನಿಂಗ್ಯಾಕೆ ಚಿತ್ರದ ಹೊಸ ನಾಯಕಿಯಾಗಿ ಇದೇ ಸಾಕ್ಷಿ ಶಿವಾನಂದ್‌ ಆಯ್ಕೆಯಾಗಿದ್ದಾಳೆ. ಮೊದಲು ಈ ಚಿತ್ರದ ನಾಯಕಿಯಾಗಿ ಪ್ರೀತಿ ಝಂಗಿಯಾನಿ ಆಯ್ಕೆಯಾಗಿದ್ದಳು. ಸದ್ಯಕ್ಕೆ ಆಕೆಗೆ ಸಿನಿಮಾ ಬೇಡವಾದ ಕಾರಣ ಅಥವಾ ಉಪ್ಪಿಗೆ ಆಕೆ ಬೇಡವಾದ ಕಾರಣ ಸಾಕ್ಷಿ ಇರಲಿ ಎನ್ನಲಾಗಿದೆ.

ಇತ್ತ ಸಾಕ್ಷಿಗೆ ಬುಲಾವು ಬರುತ್ತಿದ್ದರೆ, ಅಲ್ಲಿ , ನಮ್ಮ ಪಕ್ಕದ ಟಾಲಿವುಡ್ಡಿನಲ್ಲಿ ‘ಬೇಜವಾಡ ಪೊಲೀಸ್‌ ಸ್ಟೇಷನ್‌’ ಎಂಬೊಂದು ಸಿನಿಮಾ ರೆಡಿಯಾಗಿದೆ. ಅದರ ನಾಯಕಿ ಯಾರು ಗೊತ್ತೆ? ಗೆಸ್‌ ಮಾಡಿ. ಇನ್ಯಾರು ಇದೇ ಸಾಕ್ಷಿ ಅಂದಿರಾ? ಅಲ್ಲವೇ ಅಲ್ಲ. ಈ ಚಿತ್ರದ ನಾಯಕಿ ಸಾಕ್ಷಿಯ ಅಕ್ಕ- ಶಿಕಾ ಉರುಫ್‌ ಶಿಲ್ಪ ಶಿವಾನಂದ್‌. ಸಾಫ್ಟ್‌ವೇರ್‌ ಕಂಪನಿಯ ಕೆಲಸಕ್ಕೆ ಟಾಟಾ ಹೇಳಿ, ಶಿಲ್ಪ ಸಿನಿಮಾ ಪ್ರವೇಶಿಸಿದ್ದಾಗಿದೆ. ಇಬ್ಬರಿಗೂ ಮುಖದಲ್ಲಿ ಯಥಾವತ್‌ ಹೋಲಿಕೆಯಿಲ್ಲದಿದ್ದರೂ ಸಾಮ್ಯತೆ ಇಲ್ಲ ಎಂದೇನೂ ಅಲ್ಲ. ಅವುಗಳನ್ನು ಪಟ್ಟಿ ಮಾಡುವುದಾದರೆ...

  • ಎತ್ತರ ಬೇರೆ ಬೇರೆಯಾದರೂ ಇಬ್ಬರೂ ಬೆಳ್ಳಗಿದ್ದಾರೆ.
  • ಮಿನಿ ತೊಟ್ಟು ಕುಣಿಯುವುದು ಇಬ್ಬರಿಗೂ ಇಷ್ಟ.
  • ಬಿಚ್ಚಮ್ಮನಾಗಲು ಅಕ್ಕ- ತಂಗಿ ಇಬ್ಬರೂ ಒಲ್ಲೆ ಎನ್ನುವುದಿಲ್ಲ.
ಈಗ ಇಬ್ಬರಿಗೂ ಇರುವ ವ್ಯತ್ಯಾಸ ಗಮನಿಸಿ...
  • ಸಾಕ್ಷಿ ಅಂದರೆ ನಿರ್ಮಾಪಕರ ಕಣ್ಣಲ್ಲಿ ನೀರೂರುತ್ತದೆ. ಶಿಲ್ಪಾ ಅಂದರೆ, ಎರಡೂ ಕೈ ಅಗಲಿಸಿ ನಿರ್ಮಾಪರು ಓಡೋಡಿ ಬರುತ್ತಾರೆ.
  • ಇದಕ್ಕೆ ಕಾರಣವಿದೆ. ಹೇಳಿದ ಟೈಮಿಗೆ ಸಾಕ್ಷಿ ಶೂಟಿಂಗ್‌ಗೆ ಹಾಜರಾಗಿದ್ದು ಎಲ್ಲೋ ಅಪರೂಪ. ಶಿಲ್ಪಾ ಹಾಗಲ್ಲ. ತಾನು ಕೆಲಸ ಮಾಡುತ್ತಿದ್ದ (ಇದೀಗ ರಾಜೀನಾಮೆ ಕೊಟ್ಟಿರುವ) ಸಾಫ್ಟ್‌ವೇರ್‌ ಕಂಪನಿಗೆ ಹೋಗುತ್ತಿದ್ದಷ್ಟೇ ಪಂಕ್ಚುಯಲ್‌ ಆಗಿ ಶೂಟಿಂಗ್‌ಗೆ ಬರುತ್ತಾರೆ.
  • ಸಾಕ್ಷಿ ಬಿನ್ನಾಣಗಿತ್ತಿ. ಶಿಲ್ಪಾ .. ಸೋ ಸಿಂಪಲ್‌.
  • ಸಾಕ್ಷಿಗೆ ನಾಚಿಕೆಯೇ ಇಲ್ಲ. ಶಿಲ್ಪಾಳನ್ನು ಹೊಗಳಿದರೆ ಸಾಕು, ಕರಗಿ ಹೋಗುತ್ತಾಳಂತೆ!
ಶಿಕಾ, ಶೀಬಾ, ಸಾಕ್ಷಿ, ಶಿಲ್ಪಾ.... ಈಗಲೂ ನೀವು ಗೊಂದಲದಲ್ಲಿದ್ದರೆ ವಿ ಆರ್‌ ಹೆಲ್ಪ್‌ಲೆಸ್‌. ನಿಮ್ಮ- ನಮ್ಮ ಸ್ಥಿತಿಯೇ ಹೀಗಾದರೆ ಇನ್ನು ನಿರ್ಮಾಪಕರ ಗತಿ ಏನು?

What do you think?

ಅಕ್ಕತಂಗಿ ಅಪ್ಪಾಳೆ ತಿಪ್ಪಾಳೆ
ಇರುವುದೊಬ್ಬಳೇ ಸಾಕ್ಷಿ ಸ್ವತಃ ಅಮ್ಮನ ಸಾಕ್ಷಿ
ಶಿಕಾ + ಶೀಬಾ = ಸಾಕ್ಷಿ ಶಿವಾನಂದ್‌

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...