For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಸಿನಿಮಾದಲ್ಲಿ ಬಾಲಿವುಡ್ ಟಾಪ್ ನಟಿ: ಕನ್ನಡಕ್ಕೆ ಹೊಸಬರೇನಲ್ಲ!

  |

  ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ಬಿಡುಗಡೆ ಆಗಿ ಎರಡು ವರ್ಷವಾಗುತ್ತಾ ಬಂತು. ಅವರ ಹೊಸ ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾಕ್ಕೆ ಭಾರಿ ಬಂಡವಾಳ ಹೂಡಲಾಗಿದ್ದು, ಕ್ಲೈಮ್ಯಾಕ್ಸ್ ಅನ್ನು ಅದ್ಭುತವಾಗಿ ಚಿತ್ರೀಕರಣ ಮಾಡಲಾಗಿದೆ.

  57 ದಿನ ಶೂಟ್ ಮಾಡಿದ್ದು 'ಮಾರ್ಟಿನ್' ಕ್ಲೈಮ್ಯಾಕ್ಸ್ ಅಲ್ಲ: ಧ್ರುವ ಸಿನಿಮಾದ ಸೀಕ್ರೆಟ್ ರಿವೀಲ್!57 ದಿನ ಶೂಟ್ ಮಾಡಿದ್ದು 'ಮಾರ್ಟಿನ್' ಕ್ಲೈಮ್ಯಾಕ್ಸ್ ಅಲ್ಲ: ಧ್ರುವ ಸಿನಿಮಾದ ಸೀಕ್ರೆಟ್ ರಿವೀಲ್!

  'ಮಾರ್ಟಿನ್' ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣ ಬಾಕಿ ಇದ್ದು, ಪೋಸ್ಟ್ ಪ್ರೊಡಕ್ಷನ್ ಸಹ ಬಾಕಿ ಇದೆ. ಈ ನಡುವೆ ಧ್ರುವ ಸರ್ಜಾರ ಇನ್ನೊಂದು ಹೊಸ ಸಿನಿಮಾದ ಬಗ್ಗೆ ಚರ್ಚೆ ಆರಂಭವಾಗಿದೆ.

  'ಮಾರ್ಟಿನ್' ಬಳಿಕ 'ಕೆಡಿ' ಹೆಸರಿನ ಸಿನಿಮಾದಲ್ಲಿ ಧ್ರುವ ಸರ್ಕಾ ನಟಿಸಲಿದ್ದಾರೆ. ಆ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡಲಿದ್ದು, ಹಲವು ಕಾರಣಗಳಿಗೆ ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ.

  'ಕೆಡಿ' ಸಿನಿಮಾದಲ್ಲಿ ಖ್ಯಾತ ನಾಮ ನಟರು

  'ಕೆಡಿ' ಸಿನಿಮಾದಲ್ಲಿ ಖ್ಯಾತ ನಾಮ ನಟರು

  ಕೆಡಿ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್, ತಮಿಳಿನ ವಿಜಯ್ ಸೇತುಪತಿ, ಮಲಯಾಳಂನ ಮೋಹನ್‌ಲಾಲ್ ಸೇರಿದಂತೆ ಹಲವು ಖ್ಯಾತನಾಮರು ನಟಿಸಲಿದ್ದಾರೆ. ಇವರುಗಳ ಜೊತೆಗೆ ಬಾಲಿವುಡ್‌ನ ಖ್ಯಾತ ನಟಿಯೊಬ್ಬರು ಸಹ ಧ್ರುವ ಸರ್ಜಾರ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಸುದ್ದಿಯಾಗಿದೆ.

  ಮತ್ತೆ ಕನ್ನಡಕ್ಕೆ ನಟಿ ಶಿಲ್ಪಾ ಶೆಟ್ಟಿ

  ಮತ್ತೆ ಕನ್ನಡಕ್ಕೆ ನಟಿ ಶಿಲ್ಪಾ ಶೆಟ್ಟಿ

  ಕರ್ನಾಟಕ ಮೂಲದವರೇ ಆಗಿರುವ ಶಿಲ್ಪಾ ಶೆಟ್ಟಿ, ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ನಟ ಧ್ರುವ ಸರ್ಜಾರೆ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲವಾದರೂ ಶಿಲ್ಪಾ ಶೆಟ್ಟಿಯವರು ನಟಿಸುತ್ತಿರುವುದೇ ಬಹುತೇಕ ಖಾತ್ರಿಯಾಗಿದೆ ಎಂದಿದ್ದಾರೆ ನಟ ಧ್ರುವ ಸರ್ಜಾ. ಶಿಲ್ಪಾ ಶೆಟ್ಟಿಗೆ ಕನ್ನಡ ಚಿತ್ರರಂಗ ಹೊಸದೇನೂ ಅಲ್ಲ. ರವಿಚಂದ್ರನ್ ನಟನೆಯ 'ಪ್ರೀತ್ಸೋದ್ ತಪ್ಪಾ?, 'ಒಂದಾಗೋಣ ಬಾ' ಹಾಗೂ ಉಪೇಂದ್ರ ಜೊತೆಗೆ 'ಆಟೋ ಶಂಕರ್' ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಮಾಲಾಶ್ರೀ ಮಗಳು ನಾಯಕಿ?

  ಮಾಲಾಶ್ರೀ ಮಗಳು ನಾಯಕಿ?

  ಮಾಲಾಶ್ರೀ ಮಗಳು 'ಕೆಡಿ' ಸಿನಿಮಾದಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಧ್ರುವ ಸರ್ಜಾ, ''ನನಗೆ ಆ ವಿಷಯ ಗೊತ್ತಿಲ್ಲ. ನನ್ನ ಬಳಿ ಮಾತನಾಡಿಲ್ಲ. ಆದರೆ ಯಾರು ಬಂದರೂ ಒಳ್ಳೆಯದೇ. ನಾನು ಇನ್ನೊಂದು ವಾರದ ಬಳಿಕ 'ಕೆಡಿ' ತಂಡ ಸೇರಿಕೊಳ್ಳಲಿದ್ದೇನೆ. ಆ ಬಳಿಕ ಶೂಟಿಂಗ್ ಶುರು ಮಾಡಲಿದ್ದೇನೆ'' ಎಂದಿದ್ದಾರೆ. 'ಮಾರ್ಟಿನ್' ಸಿನಿಮಾದ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿರುವ ಧ್ರುವ ಸರ್ಜಾ, 'ಬಗಳ ಗಟ್ಟಿಯಾಗಿ 'ಮಾರ್ಟಿನ್' ಪ್ರೇಕ್ಷಕರ ಎದುರು ಬರಲಿದ್ದಾನೆ' ಎಂದಿದ್ದಾರೆ.

  60 ರ ದಶಕದ ರೌಡಿಸಂ ಕತೆ

  60 ರ ದಶಕದ ರೌಡಿಸಂ ಕತೆ

  'ಕೆಡಿ' ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕತೆಯನ್ನು ದರ್ಶನ್‌ಗಾಗಿ ಮಾಡಲಾಗಿತ್ತು ಎನ್ನಲಾಗಿದೆ ಆದರೆ ಈಗ ಆ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಸಿನಿಮಾವು 60 ದಶಕದ ರೌಡಿಸಂ ಕತೆಯನ್ನು ಒಳಗೊಂಡಿದೆ. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡುತ್ತಿದ್ದು, ಇದು ಭರ್ಜರಿ ಆಕ್ಷನ್ ದೃಶ್ಯಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಸೈನಿಕನ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸಿದ್ದಾರೆ ಎನ್ನಲಾಗುತ್ತಿದೆ.

  English summary
  Bollywood actress Shilpa Shetty acting in Dhruva Sarja's upcoming movie KD. Shilpa Shetty already acted in some Kannada movies.
  Sunday, November 27, 2022, 15:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X