ಪ್ರಗ್ನೆನ್ಸಿ ಕುರಿತು ಅನುಭವ ಹಂಚಿಕೊಂಡ ಶಿಲ್ಪಾ ಶೆಟ್ಟಿ

Recommended Video

ತವರೂರಲ್ಲಿ ಅನುಭವ ಹಂಚಿಕೊಂಡ ಶಿಲ್ಪಿ ಶೆಟ್ಟಿ | FILMIBEAT KANNADA

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ 'ಮಹಿಳಾ ಮತ್ತು ಮಕ್ಕಳ ಕೇಂದ್ರ'ವನ್ನ ಉದ್ಘಾಟನೆ ಮಾಡಿ, ತಮ್ಮ ತಾಯ್ತನ ಬಗ್ಗೆ ತಮ್ಮ ಅನುಭವಗಳನ್ನ ಹಂಚಿಕೊಂಡರು.

''ತಾಯ್ತನ ಪ್ರತಿಯೊಂದು ಹೆಣ್ಣಿನ ಬಾಳಲ್ಲೂ ವಿಶೇಷ ಅನುಭೂತಿ ನೀಡುವ ವಿಷಯ. ಆದರೆ ಗರ್ಭಿಣಿ ದಿನಗಳ ಎಲ್ಲರಿಗೂ ಒಂದೇ ರೀತಿ ಇರಲ್ಲ. ನಾನು ಫಿಟ್ನೆಸ್ ಐಕಾನ್, ಆದರೂ ನನ್ನ ಪ್ರಗ್ನೆನ್ಸಿ ಸುಲಭವಾಗಿರಲಿಲ್ಲ. ಆಟೊಇಮ್ಯುನ್ ಡಿಸಾರ್ಡರ್ ನನ್ನನ್ನು ಭಾದಿಸಿತ್ತು. ಆರೋಗ್ಯದ ಬಗ್ಗೆ ನಾನು ಸದಾ ಜಾಗೃತಿಯಾಗಿರುತ್ತಿದ್ದೆ. ಆದರೂ ನನಗೆ ಹೀಗಾಯ್ತು.'' ಎಂದು ಹೇಳಿಕೊಂಡಿದ್ದಾರೆ.

Shilpa Shetty Shared Her Experince About Pregnancy

''ಗರ್ಭಿಣಿ ಹೆಂಗಸರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ತಾಯಿಯಾಗುವ ಸಂದರ್ಭದಲ್ಲಿ ಮಹಿಳೆಯರು ತಾನು ಮಾಡುವ ಕೆಲಸ, ತಾನು ಚಿಂತಿಸುವ ವಿಷಯಗಳ ಬಗ್ಗೆ ಅರಿವು ಹೊಂದಿರಬೇಕು. ಏಕಂದರೆ ಅದೆಲ್ಲ ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತೆ'' ಎಂದು ಸಲಹೆ ನೀಡಿದರು.

ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಅವರು ತುಳುವಿನಲ್ಲಿ ಎಲ್ಲರಿಗೂ ನಮಸ್ಕಾರ ಎಂದಿದ್ದು ಖುಷಿ ನೀಡಿದೆ. ಜೊತೆಗೆ ಮಂಗಳೂರಿನ ಬಗ್ಗೆಯೂ ಖುದ್ದು ತುಳು ಭಾಷೆಯಲ್ಲಿ ಸಂತಸ ಹಂಚಿಕೊಂಡರು.

Shilpa Shetty Shared Her Experince About Pregnancy

ಸುಮಾರು 13 ವರ್ಷದ ಬಳಿಕ ಶಿಲ್ಪಾ ಶೆಟ್ಟಿ ಬಾಲಿವುಡ್ ರೀ-ಎಂಟ್ರಿ ಕೊಡುತ್ತಿದ್ದಾರೆ. 'ನೀಕಮ್ಮಾ' ಚಿತ್ರದಲ್ಲಿ ನಟಿಸುವ ಮೂಲಕ ಶಿಲ್ಪಾ ಶೆಟ್ಟಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 2007ರಲ್ಲಿ ತೆರೆಕಂಡಿದ್ದ 'ಆಪ್ನೆ' ಚಿತ್ರದ ನಂತರ ಶಿಲ್ಪಾ ಶೆಟ್ಟಿ ನಾಯಕಿಯಾಗಿ ನಟಿಸಿಲ್ಲ.

2009ರಲ್ಲಿ ಉದ್ಯಮಿ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ವೈವಾಹಿಕ ಜೀವನ ಆರಂಭಿಸಿದ್ದರು. ಈ ದಂಪತಿಗೆ ವಿಹಾನ್ ಎಂಬ ಗಂಡು ಮಗು ಇದೆ.

More from Filmibeat

English summary
Bollywood Shilpa Shetty Shared Her Experince About Pregnancy in manglore. she launched female and children center in KMC hospital.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X