»   » ಚಿತ್ರನಟಿ ಚಾರುಲತಾ ಅವರು ಶಿಲ್ಪಾ ಮದುವೆ ಆಗಿದ್ದಾರೆ !

ಚಿತ್ರನಟಿ ಚಾರುಲತಾ ಅವರು ಶಿಲ್ಪಾ ಮದುವೆ ಆಗಿದ್ದಾರೆ !

Posted By: Staff
Subscribe to Filmibeat Kannada

ಜನುಮದ ಜೋಡಿಯ ಮಣಿ ಮಣಿ ಮಣಿ ಮಣಿ ... ಮಣಿಗೊಂದು ದಾರದ ಹುಡುಗಿ ಶಿಲ್ಪಾಗೆ ಮದುವೆ ಆಗಿ ಹೋಗಿದೆ ಎಂಬ ಗುಸುಗುಸು ಸ್ಯಾಂಡಲ್‌ವುಡ್‌ ಸಂದಿಗೊಂದಿಗಳನ್ನೇಲ್ಲಾ ಸುತ್ತಾಡಿ, ಇಡೀ ಕರ್ನಾಟಕಕ್ಕೇ ತಿಳಿದು ಹೋಗಿತ್ತು.

ಚಿತ್ರ ತಾರೆಯರು ಹಾಗೆ ಬಿಡಿ. ಯಾವಾಗ ಮದುವೆ ಆಗ್ತಾರೆ, ವಿಚ್ಛೇದನ ಪಡೀತಾರೆ, ಮರು ಮದುವೆ ಆಗ್ತಾರೆ ಅನ್ನೋದೆ ಗೊತ್ತಾಗಲ್ಲ. ಮದುವೆ ವಿಷಯದಲ್ಲಂತೂ ಭಾರಿ ಗುಟ್ಟು ಮಾಡ್ತಾರೆ ಸ್ವಾಮಿ. ಅದ್ಯಾಕೆ ಹಾಗೆ ಮಾಡ್ತಾರೆ ಅನ್ನೋದು ಮಾತ್ರ ಚಿದಂಬರ ರಹಸ್ಯ.

ಅಂದಹಾಗೆ ಕೇರಳದ ಈ ಆಮದು ತಾರೆ ಮದುವೆ ಆಗಿದ್ದು ಯಾವಾಗ? ಮದುವೆ ಮಾಡಿಸಿದ್ದು ಯಾರು? ಮದುವೆಯಾದ ಆ ಮಹಾನುಭಾವ ಯಾರು? ಈ ಎಲ್ಲ ಪ್ರಶ್ನೆಗಳನ್ನೂ ತಮ್ಮನ್ನೇ ಕೇಳಿಕೊಂಡ, ಗಾಂಧೀನಗರದ ಮಂದಿ ಹಾಗೂ ಚಿತ್ರ ರಸಿಕರಿಗೆ ಉತ್ತರವೇ ಸಿಗಲಿಲ್ಲ.

ಆದರೂ, ಶಿಲ್ಪ ಮದುವೆ ಆಗಿದ್ದಾರೆ ಎನ್ನುವುದು ಮಾತ್ರ 100% ಖಚಿತ ಎನ್ನುತ್ತಿದ್ದರು. ಅದಕ್ಕೆ ಕಾರಣ ಇಲ್ಲದೆ ಇರಲಿಲ್ಲ. ಕೇರಳದ ಮತ್ತೊಬ್ಬಳು ಆಮದು ತಾರೆ ಚಾರುಲತಾ, ಶಿಲ್ಪಳ ಮದುವೆ ಆಗಿದೆ ಎಂಬ ಸುದ್ದಿ ಹಬ್ಬಿಸಿದ್ದರು. ಈ ಬಗ್ಗೆ ಶಿಲ್ಪಾ ಈಗ ಕ್ಲಾರಿಫಿಕೇಷನ್‌ ಕೊಟ್ಟಿದ್ದಾರೆ.

ನೀಲಾಂಬರಿ ಚಿತ್ರದಲ್ಲಿ ನಟಿಸುತ್ತಿರುವ ಚಾರುಲತಾ ಬೆಂಗಳೂರಿನ ಪತ್ರಕರ್ತರ ತಂಡಕ್ಕೆ ಹೀಗೇಕೆ ಹೇಳಿದರು ಎಂಬುದು ನನಗೆ ಇನ್ನೂ ಅರ್ಥ ಆಗಿಲ್ಲ. ನನ್ನ ಮದುವೆಯ ಪೌರೋಹಿತ್ಯವನ್ನು ಚಾರುಲತಾ ಏಕೆ ವಹಿಸಿದರು. ಅಂದ ಹಾಗೆ ನನಗೆ ತಾಳಿ ಕಟ್ಟಿದ ಗಂಡ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನನಗೂ ಇದೆ. ಸಾಕಷ್ಟು ಬಾರಿ ಫೋನ್‌ ಮಾಡಿದೆ, ಚಾರುಲತಾ ಸಿಗುತ್ತಿಲ್ಲ ಎಂದು ಹೇಳಿ ನಕ್ಕರು.

3 ವರ್ಷ ಮದುವೆ ಆಗಲ್ಲ : ಇನ್ನೂ ಎರಡು ಮೂರು ವರ್ಷ ಮದುವೆ ಬಗ್ಗೆ ಚಿಂತೇನೇ ಮಾಡಲ್ಲ ಎಂದ ಶಿಲ್ಪಾಗೆ ಹೀಗೆಲ್ಲಾ ಸುಳ್ಳು ಸುದ್ದಿ ಹಬ್ಬಿಸೋದ್ರಿಂದ ಚಾರುಲತಾಗೆ ಏನು ಲಾಭ ಅನ್ನೋದು ಮಾತ್ರ ಗೊತ್ತಾಗಿಲ್ವಂತೆ. ಇದೊಂದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಶಿಲ್ಪಾನ ಕಾಡುತ್ತಾ ಇದೆಯಂತೆ.

ಇಳಕಲ್‌ ಸೀರೆ ಉಟ್ಟು, ಹಣೆಯ ಮೇಲೆ ವಿಭೂತಿ ಧರಿಸಿ, ಮಧ್ಯದಲ್ಲೊಂದು ದೊಡ್ಡ ಕುಂಕುಮದ ಬೊಟ್ಟು ಇಟ್ಟು ಕುಂದಗೋಳದಲ್ಲಿ ಧರ್ಮದೇವತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಶಿಲ್ಪಾ ಪಕ್ಕಾ ಧಾರವಾಡ ಕಡೆಯ ಗರತಿಯಂತೆ ಕಾಣುತ್ತಿದ್ದರು. ಭೀಮವ್ವನೇ ಮತ್ತೆ ಹುಟ್ಟಿ ಬಂದಂತೆ ಕಾಣ್ತಾ ಇದ್ರು. ಭೂಮಿ ತಾಯಿಯ ಮಕ್ಕಳು ಚಿತ್ರದಲ್ಲಿ ನಟಿಸುತ್ತಿರುವ ಶಿಲ್ಪಾ ಈಗ ಧರ್ಮದೇವತೆ ಚಿತ್ರನೂ ಒಪ್ಪಿಕೊಂಡಿದ್ದಾರೆ.

ಕಾರ್ಯಕ್ರಮ ನೀಡಲು ಈ ತಿಂಗಳು ವಿದೇಶಕ್ಕೆ ಹೋಗುವ ಯೋಜನೆ ಇದೆಯಂತೆ. ಅವರು ನಾಯಕಿಯಾಗಿ ನಟಿಸಿರುವ ಸುಭಾಷ್‌ ಕೂಡ ಅಂತಿಮ ಹಂತದಲ್ಲಿದೆ. ಇಲ್ಲೇ ಸ್ವರ್ಗ, ಇಲ್ಲೇ ನರಕದಲ್ಲೂ ಹಳ್ಳಿ ಹುಡುಗಿ ಪಾತ್ರವನ್ನೇ ಶಿಲ್ಪಾ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ನಾಲ್ಕಾರು ಚಿತ್ರಗಳು ಕೈಯಲ್ಲಿರುವ ಶಿಲ್ಪಾ ಬಿಜಿಯಾಗಿದ್ದಾರೆ. ಮದುವೆ ಬಗ್ಗೆ ಚಿಂತೆ ಮಾಡಲು ಅವರಿಗೆ ಪುರುಸೊತ್ತು ಇಲ್ಲವಂತೆ.

English summary
Charulathas statement on shilpa marriage is false
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada