ನಟಿ ಮೇಘ ಶೆಟ್ಟಿ ಜೊತೆ ಹೋಳಿ ಆಡಿದ 'ಬಿಗ್ ಬಾಸ್-7' ವಿನ್ನರ್ ಶೈನ್ ಶೆಟ್ಟಿ

ಬಿಗ್ ಬಾಸ್ ಕನ್ನಡ ಸೀಸನ್-7 ಮುಗಿದು ಅನೇಕ ದಿನಗಳೆ ಕಳೆದಿವೆ. ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿರುವ ಶೈನ್ ಶೆಟ್ಟಿ ಈಗ ಸಖತ್ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ನಂತರ ಜನಪ್ರಿಯತೆ ಮತ್ತಷ್ಟು ಹೆಚ್ಚಿಸಿಕೊಂಡಿರುವ ಶೈನ್ ಶೆಟ್ಟಿ ಸಾಕಷ್ಚು ಕಾರ್ಯಕ್ರಮಗಳಿಗೆ ಈಗ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Recommended Video

ಶೈನ್ ಜೊತೆ ಹೋಳಿ ಹಬ್ಬದಲ್ಲಿ ಮಿಂದೆದ್ದ ಮೇಘಾ ಶೆಟ್ಟಿ | Shine Shetty | Megha Shetty | Filmibeat Kannada

ದಿನಕ್ಕೊಂದು ಊರಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊತ್ತಿರುವ ಶೈನ್ ಇತ್ತೀಚಿಗಷ್ಟೆ ಮೈಸೂರಿನಲ್ಲಿ ನಡೆದ ರಂಗ್ ದೇ 2020 ಹೋಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ಶೈನ್ ಜೊತೆ ಕಿರುತೆರೆಯ ಖ್ಯಾತ ನಟಿ ಮೇಘ ಶೆಟ್ಟಿ ಕೂಡ ಭಾಗಿಯಾಗಿದ್ದರು.

ಮೇಘ ಜೊತೆ ಶೈನ್ ಹೋಳಿ ಸಂಭ್ರಮ

ಮೇಘ ಜೊತೆ ಶೈನ್ ಹೋಳಿ ಸಂಭ್ರಮ

ಶೈನ್ ಮತ್ತು ಮೇಘ ಇಬ್ಬರನ್ನು ರಂಗ್ ದೇ 2020 ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಇಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಲ್ಲದೆ, ಇಬ್ಬರು ಒಟ್ಟಿಗೆ ಹೋಳಿ ಆಡಿ ಸಂಭ್ರಮಿಸಿದ್ದಾರೆ. ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸೆಲೆಬ್ರಿಟಿಗಳಾಗಿರುವ ಶೈನ್ ಮತ್ತು ಮೇಘ ಅವರು ಒಟ್ಟಿಗೆ ಹೋಳಿ ಆಡುವುದನ್ನು ನೋಡಿ ಮೈಸೂರಿನ ಅಭಿಮಾನಿಗಳು ಅವರ ಜೊತೆ ರಂಗು ರಂಗಿನ ಬಣ್ಣದ ಆಟವಾಡಿ ಸಂತಸ ಪಟ್ಟಿದ್ದಾರೆ.

ರಂಗ್ ದೇ ಬರ್ಸಾ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಮಂದಿ

ರಂಗ್ ದೇ ಬರ್ಸಾ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಮಂದಿ

ಇತ್ತೀಚಿಗಷ್ಟೆ ಶೈನ್ ಮಂಗಳೂರಿನ ಜನರ ಜೊತೆ ಹೋಳಿ ಆಡಿ ಸಂಭ್ರಮಿಸಿದ್ದರು. ಮಂಗಳೂರಿನಲ್ಲಿ ಆಯೋಜಿಸಿದ್ದ ರಂಗ್ ದೇ ಬರ್ಸಾ ಕಾರ್ಯಕ್ರಮದಲ್ಲಿ ಶೈನ್ ಜೊತೆ ಬಿಗ್ ಬಾಸ್ ಮಂದಿ ಕೂಡ ಭಾಗಿಯಾಗಿದ್ದರು. ದೀಪಿಕಾ ದಾಸ್, ವಾಸುಕಿ, ಚಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಿರುತೆರೆ ಪ್ರೇಕ್ಷಕರನ್ನು ಸಂತಸ ಪಡಿಸಿದ್ದರು.

ಮಂಗಳೂರಿನಲ್ಲಿ ಹೋಳಿ ಆಡಿದ್ದ ಬಿಗ್ ಬಾಸ್ ಸ್ಪರ್ಧಿ

ರಂಗ್ ದೇ ಬರ್ಸಾ ಕಾರ್ಯಕ್ರಮದಲ್ಲಿ ಶೈನ್ ಶೆಟ್ಟಿ ಮಂಗಳೂರಿನ ಜನರ ಜೊತೆ ಹೋಳಿ ಆಡಿದ್ದರು. ಶೈನ್ ಶೆಟ್ಟಿ ಜೊತೆ ಚಂದನಾ ಮತ್ತು ದೀಪಿಕಾ ದಾಸ್ ಕೂಡ ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದರು. ಹೋಳಿ ಸಂಭ್ರಮಿಸಿರುವ ಫೋಟೋಗಳನ್ನು ಶೈನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೂ ಹೋಳಿಯ ಶುಭಾಶಯ ತಿಳಿಸಿದ್ದಾರೆ.

ಅನಿಲ್ ಕುಂಬ್ಳೆ ಜೊತೆ ಕಾಣಿಸಿಕೊಂಡಿದ್ದ ಶೈನ್

ಅನಿಲ್ ಕುಂಬ್ಳೆ ಜೊತೆ ಕಾಣಿಸಿಕೊಂಡಿದ್ದ ಶೈನ್

ಶೈನ್ ಇತ್ತೀಚಿಗೆ ಖ್ಯಾತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿದ್ದಾರೆ. ಅನಿಲ್ ಕುಂಬ್ಳೆ ಫ್ಯಾಮಿಲಿ ಜೊತೆ, ಕುಂಬ್ಳೆ ಪತ್ನಿ ಮತ್ತು ಮಕ್ಕಳ ಜೊತೆ ಇರುವ ಫೋಟೋಗಳನ್ನು ಶೈನ್ ಸಾಮಾಜಿಕ ಜಾಲತಾಣದಲ್ಲಿ ಸಂತಸದಿಂದ ಹಂಚಿಕೊಂಡಿದ್ದರು. ಅನಿಲ್ ಕಂಬ್ಳೆ ಕುಟುಂಬದವರಿಗೆ ಶೈನ್ ಅಂದರೆ ತುಂಬ ಇಷ್ಟವಂತೆ. ಕುಂಬ್ಳೆ ಮನೆಯಲ್ಲಿ ಬಿಗ್ ಬಾಸ್ ಅನ್ನು ತಪ್ಪದೆ ನೋಡುತ್ತಿದ್ದರಂತೆ. ಕುಂಬ್ಳೆ ಕುಟುಂಬದವರ ಮನಗೆದ್ದಿದ್ದ ಶೈನ್ ಅನ್ನು ವಿನ್ನರ್ ಆಗಿ ಹೊರಬಂದ ಮೇಲೆ ಅನಿಲ್ ಕುಂಬ್ಳೆ, ಫೋನ್ ಮಾಡಿ ಪ್ರೀತಿಯಿಂದ ಮನೆಗೆ ಆಹ್ವಾನಿಸಿದ್ದರು.

More from Filmibeat

English summary
Bigg Boss season 7 winner Shine Shetty and Jothe Jotheyali serial heroine celebrate holi in Mysore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X