For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ 'ವೀರಂ'ಗೆ ಎಂಟ್ರಿ ಕೊಟ್ಟ ಶಿಷ್ಯ ದೀಪಕ್

  |

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ವೀರಂ ಸಿನಿಮಾ ಮತ್ತೆ ಶೂಟಿಂಗ್ ಆರಂಭಿಸಿದೆ. ಲಾಕ್‌ಡೌನ್ ಬಳಿಕ ಚಿತ್ರೀಕರಣ ಆರಂಭಿಸಿರುವ 'ವೀರಂ' ಸಿನಿಮಾಗೆ ಮತ್ತೊಬ್ಬ ನಟನ ಆಗಮನವಾಗಿದೆ.

  ಈಗಾಗಲೇ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ 'ವೀರಂ' ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅಭಿನಯಿಸುತ್ತಿದ್ದಾರೆ. ಈಗ ಶಿಷ್ಯ ಖ್ಯಾತಿಯ ದೀಪಕ್ ಎಂಟ್ರಿಯಾಗಿದೆ. 'ವೀರಂ' ಚಿತ್ರಕ್ಕಾಗಿ ಸ್ಟೈಲಿಶ್ ಲುಕ್‌ನಲ್ಲಿ ದೀಪಕ್ ಪ್ರತ್ಯಕ್ಷವಾಗಿದ್ದಾರೆ.

  ಡಿಸೆಂಬರ್ 6 ರಿಂದ 'ವೀರಂ' ಚಿತ್ರೀಕರಣ ಆರಂಭಿಸಲಿದ್ದಾರೆ ಪ್ರಜ್ವಲ್ ದೇವರಾಜ್ಡಿಸೆಂಬರ್ 6 ರಿಂದ 'ವೀರಂ' ಚಿತ್ರೀಕರಣ ಆರಂಭಿಸಲಿದ್ದಾರೆ ಪ್ರಜ್ವಲ್ ದೇವರಾಜ್

  ಸ್ಪೈಡರ್ ಲುಕ್‌ನಲ್ಲಿ ಹೇರ್ ಕಟ್ ಮಾಡಿಸಿರುವ ದೀಪಕ್ ಕಿವಿಯ ಕೆಳಗೆ ಟ್ಯಾಟೂ ಸಹ ಹಾಕಿಸಿಕೊಂಡಿದ್ದಾರೆ. ಸದ್ಯಕ್ಕೆ ದೀಪಕ್ ಅವರ ಪಾತ್ರ ಏನು ಎನ್ನುವುದು ಬಹಿರಂಗವಾಗಿಲ್ಲ. ಆದರೆ, ದೀಪಕ್ ಅವರ ಈ ಲುಕ್ ನೋಡಿದ್ರೆ ಚಿತ್ರದಲ್ಲಿ ನೆಗಿಟಿವ್ ಪಾತ್ರ ಇರಬಹುದು ಎಂದು ಹೇಳಲಾಗುತ್ತಿದೆ.

  ಈ ಚಿತ್ರವನ್ನ ಖದರ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಇದು ಇವರಿಗೆ ಮೊದಲ ಸಿನಿಮಾ. ಪ್ರಜ್ವಲ್‌ಗೆ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಇತ್ತೀಚಿಗಷ್ಟೆ ರಚಿತಾ ಮತ್ತು ಖದರ್ ಕುಮಾರ್ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಚಿತ್ರಕ್ಕಾಗಿ ಕಾಸ್ಟ್ಯೂಮ್ ಶಾಪಿಂಗ್ ಮಾಡಿದ್ದರು.

  ಈ ಹಿಂದೆ ಹರಿಪ್ರಿಯಾ ಮತ್ತು ಸುಮಲತಾ ನಟಿಸಿದ್ದ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರ ನಿರ್ಮಿಸಿದ್ದ ದಿಶಾ ಎಂಟರ್ ಟೈನ್ ಮೆಂಟ್ ಸಂಸ್ಥೆ ವೀರಂ ಚಿತ್ರಕ್ಕೆ ಬಂಡವಾಳ ಹಾಕಿದೆ. ಇನ್ನುಳಿದಂತೆ 'ಇನ್ಸ್‌ ಪೆಕ್ಟರ್ ವಿಕ್ರಂ' ಹಾಗೂ 'ಅರ್ಜುನ್ ಗೌಡ' ಚಿತ್ರದ ಬಳಿಕ ರಾಮ್ ನಾರಾಯಣ್ ಮತ್ತು ಪಿಸಿ ಶೇಖರ್ ಅವರ ಜೊತೆಯೂ ಪ್ರಜ್ವಲ್ ದೇವರಾಜ್ ಸಿನಿಮಾ ಮಾಡಲಿದ್ದಾರೆ.

  English summary
  Kannada actor Shishya fame Deepak part to Prajwal Devaraj Veeram. The film starring srinagar kitty is directed by Kumar S.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X